ಪೊನ್ನಂಪೇಟೆ, ಅ. ೨೬: ವೀರಾಜಪೇಟೆ ಕಾವೇರಿ ಪದವಿ ಕಾಲೇಜಿಗೆ ಯುಜಿಸಿಯ ಅಂಗ ಸಂಸ್ಥೆಯಾದ ರಾಷ್ಟಿçÃಯ ಮೌಲ್ಯಾಂಕನ ಪರಿಷತ್ತು (ನ್ಯಾಕ್) ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಎರಡು ದಿನಗಳ ಭೇಟಿ ನೀಡಿದ್ದ ನ್ಯಾಕ್ ತಂಡ ಭೋದನಾ ಗುಣಮಟ್ಟ, ದಾಖಲೆಗಳು, ಕಾಲೇಜಿನ ವಿವರ, ವಿವಿಧ ವಿಭಾಗಗಳ ಹಾಗೂ ಫಲಿತಾಂಶದ ಪರಿಶೀಲನೆ ಮಾಡಿತು. ಹಳೆಯ ವಿದ್ಯಾರ್ಥಿಗಳ ಮತ್ತು ಪೋಷಕರ ಜೊತೆ ಸಂವಾದ ನಡೆಸಿತು.
ನ್ಯಾಕ್ ತಂಡದ ಮುಖ್ಯಸ್ಥರಾಗಿ ತೆಲಂಗಾಣ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ. ಮಲ್ಲೇಶ್ ಸಂಕಸಾಳ, ಸದಸ್ಯರಾದ ಒಡಿಸ್ಸಾ ವಿಶ್ವವಿದ್ಯಾಲಯದ ಪ್ರೊಫೆಸರ್ ಡಾ. ಭಗಬನ್ ದಾಸ್ ಮತ್ತು ತಮಿಳುನಾಡಿನ ಸ್ಕಾಟ್ ಕ್ರಿಶ್ಚಿಯನ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಜೆಜರ್ ಜೇಬನಿಶನ್ ಆಗಮಿಸಿದ್ದರು.
ಕಾಲೇಜಿನ ಐ ಕ್ಯೂ ಎ ಸಿ ಸಂಚಾಲಕಿ ಡಾ.ಕೆ.ಜಿ.ವೀಣಾ ಕಾಲೇಜಿನಲ್ಲಿ ಕಳೆದ ೫ ವರ್ಷಗಳಲ್ಲಿ ಆಗಿರುವ ಪ್ರಗತಿ, ಕಾಲೇಜಿನಲ್ಲಿ ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳ ಲಾಗುವ ಯೋಜನೆಗಳು ಮತ್ತು ಹೊಸ ದಾಗಿ ಪ್ರಾರಂಭಿಸಲಾಗುವ ಕೋರ್ಸ್ ಗಳ ಬಗ್ಗೆ ಮಾಹಿತಿ ನೀಡಿದರು.
ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಯರು ತಮ್ಮ ತಮ್ಮ ವಿಭಾಗಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ನ್ಯಾಕ್ ತಂಡ ತರಗತಿ ಕೊಠಡಿಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿತು.
ಈ ಸಂದರ್ಭ ಏರ್ಪಡಿಸಲಾಗಿದ್ದ ಸಭೆಯಲ್ಲಿ ಮಾತನಾಡಿದ ತಂಡದ ಮುಖ್ಯಸ್ಥರಾದ ಪ್ರೊ. ಮಲ್ಲೇಶ್ ಸಂಕಸಾಳ ಅವರು, ಈ ಭೇಟಿಯು ತೃಪ್ತಿ ತಂದಿದೆ. ಕಾಲೇಜು ಫಲಿತಾಂಶ ಮತ್ತು ಕ್ರೀಡೆ ಹಾಗೂ ಇನ್ನಿತರ ಪಠ್ಯೇತರ ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡುತ್ತಿದೆ. ಕಾಲೇಜಿನ ಅಭಿವೃದ್ಧಿ ಎಂಬುದು ನಿಂತ ನೀರಾಗದೆ. ನಿರಂತರವಾಗಿ ಮುನ್ನಡೆಯುತ್ತಿರಬೇಕು. ಆಗ ಮಾತ್ರ ಸಂಸ್ಥೆಯ ಸರ್ವಾಂಗೀಣ ಪ್ರಗತಿ ಸಾಧ್ಯ ಎಂದರು.
ಈ ಸಂದರ್ಭ ಗೋಣಿಕೊಪ್ಪಲು ಕಾವೇರಿ ಎಜುಕೇಷನ್ ಸೊಸೈಟಿ ಅಧ್ಯಕ್ಷ ಪ್ರೊ.ಐ. ಕೆ.ಬಿದ್ದಪ್ಪ, ಗೌರವ ಕಾರ್ಯದರ್ಶಿ ಕೆ.ಪಿ. ಬೋಪಣ್ಣ, ಉಪಾಧ್ಯಕ್ಷ ಕೆ.ಎಂ. ಸುಬ್ರಮಣಿ, ನಿರ್ದೇಶಕರುಗಳಾದ ಪ್ರೊ.ಎಂ.ಕೆ. ಮೊಣ್ಣಪ್ಪ, ಸಿ.ಎಂ. ಅಪ್ಪಯ್ಯ, ಕೆ.ಎಂ. ಬೆಳ್ಳಿಯಪ್ಪ, ಬಿ.ಎ. ಚಂಗಪ್ಪ, ಪ್ರಾಂಶುಪಾಲರಾದ ಆನಂದ್ ಕಾರ್ಲ್, ನಿವೃತ್ತ ಪ್ರಾಂಶುಪಾಲರಾದ ಪ್ರೊ. ಎ.ಎಂ. ಕಮಲಾಕ್ಷಿ ಬಿದ್ದಪ್ಪ, ಐ ಕ್ಯೂ ಎ ಸಿ ಸಂಚಾಲಕಿ ಡಾ. ಕೆ.ಜಿ. ವೀಣಾ, ಉಪನ್ಯಾಸಕ ವರ್ಗ ಹಾಗೂ ಆಡಳಿತಾತ್ಮಕ ಸಿಬ್ಬಂದಿ ಇದ್ದರು.