ಮಡಿಕೇರಿ, ಅ. ೨೭: ಚಿತ್ರದುರ್ಗದ ಎಸ್.ಜೆ.ಎಂ. ಬೃಹನ್ಮಠ ಹಾಗೂ ಎಸ್.ಜೆ.ಎಂ. ವಿದ್ಯಾಪೀಠ, ಇವರ ಮಾಲೀಕತ್ವ ಹಾಗೂ ಆಡಳಿತಕ್ಕೊಳ ಪಟ್ಟಿರುವ ಕೊಡಗು ಜಿಲ್ಲೆಯಲ್ಲಿರುವ ಬೇಳೂರು ಮಠ, ಸೋಮವಾರಪೇಟೆ ವಿರಕ್ತ ಮಠ, ಚಂಗಡಿಹಳ್ಳಿ ಮಠ, ಮಾದಾಪುರ ಮಠ, ಗುತ್ತಿಮಠ (ದುಬಾರೆ ಅರಣ್ಯ), ಅಬ್ಬಿಮಠ, ಮಾದ್ರೆ ಗ್ರಾಮ ಹಾಗೂ ಅಡಗೂರು ಗ್ರಾಮದಲ್ಲಿರುವ ಮಠ ಹಾಗೂ ಜಮೀನುಗಳ ಪರಿಶೀಲನೆ ಮಾಡಲು ಚಿತ್ರದುರ್ಗದ ಎಸ್.ಜೆ.ಎಂ. ಬೃಹನ್ಮಠ, ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತಾಧಿಕಾರಿಗಳು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರು ತಾ. ೨೮ ರಂದು (ಇಂದು) ಬೆಳಿಗ್ಗೆ ೧೦.೩೦ ಗಂಟೆಯಿAದ ೧೨ ಗಂಟೆಯ ವರೆಗೆ ಬೇಳೂರು ಮಠ, ಮಧ್ಯಾಹ್ನ ೧ ಗಂಟೆಯಿAದ ೪ ಗಂಟೆಯವರೆಗೆ ಸೋಮವಾರಪೇಟೆ ಮಠ ಹಾಗೂ ಸಂಜೆ ೬ ರಿಂದ ೭.೩೦ ಗಂಟೆಯವರೆಗೆ ಚಂಗಡಿಹಳ್ಳಿ ಮಠಕ್ಕೆ ಭೇಟಿ ನೀಡಲಿದ್ದಾರೆ. ಸೋಮವಾರಪೇಟೆ, ಬೇಳೂರು ಹಾಗೂ ಚಂಗಡಿಹಳ್ಳಿ ಮಠದ ನೌಕರರೊಂದಿಗೆ ಅಲ್ಲಿನ ವ್ಯವಸ್ಥೆ ಹಾಗೂ ಕುಂದುಕೊರತೆಗಳ ಬಗ್ಗೆ ಚರ್ಚಿಸಲಿದ್ದಾರೆ. ಈ ಸಂದರ್ಭದಲ್ಲಿ ಸಮುದಾಯದ-ಮಠದ ಭಕ್ತರು, ಇಚ್ಚಿಸಿದಲ್ಲಿ ಈ ಚರ್ಚೆಯಲ್ಲಿ ಭಾಗವಹಿಸಿ ಮಠದ ಅಭಿವೃದ್ಧಿ ಸಂಬAಧ ಸಲಹೆಗಳನ್ನು ನೀಡ ಬಹುದಾಗಿದೆ.