ಮಡಿಕೇರಿ, ಅ. ೨೭: ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಯುವ ಮೋರ್ಚಾದ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬAಧಿಸಿದAತೆ ಜಿಲ್ಲೆಯ ಇಬ್ಬರು ಸೇರಿದಂತೆ ಒಟ್ಟು ಮೂವರ ಪತ್ತೆ ಕಾರ್ಯವನ್ನು ರಾಷ್ಟಿçÃಯ ಗುಪ್ತಚರ ದಳ (ಎನ್.ಐ.ಎ.) ಚುರುಕುಗೊಳಿಸಿದೆ.

ಸೋಮವಾರಪೇಟೆ ತಾಲೂಕಿನ ಚೌಡ್ಲು ಕಾನ್ವೆಂಟ್ ರಸ್ತೆಯ ಅಬ್ದುಲ್ ನಾಸೀರ್ (೪೧), ಹಾನಗಲ್ಲು ಸಮೀಪದ ಕಲಕಂದೂರು ಗ್ರಾಮದ ಅಬ್ದುಲ್ ರೆಹಮಾನ್ (೩೬) ಹಾಗೂ ಬೆಳ್ತಂಗಡಿಯ ನೌಶದ್ (೩೨)

ಪತ್ತೆಗೆ ಎನ್.ಐ.ಎ. ಬಹುಮಾನ ಘೋಷಿಸಿದೆ.

ಆರೋಪಿಗಳ ಇರುವಿಕೆ ಕುರಿತು ಮಾಹಿತಿ ನೀಡಿದಲ್ಲಿ ತಲಾ ರೂ. ೨ ಲಕ್ಷದಂತೆ ಬಹುಮಾನವನ್ನು ನೀಡಲು ಉದ್ದೇಶಿಸಲಾಗಿದ್ದು, ಈ ಸಂಬAಧ ‘ವಾಂಟೆಡ್’ ಎಂಬ ಆರೋಪಿಗಳ ಭಾವಚಿತ್ರವುಳ್ಳ ಪೋಸ್ಟರ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಎನ್.ಐ.ಎ. ಪ್ರಕಟಿಸಿದೆ.

ಮೂವರು ಆರೋಪಿಗಳು ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಕಾರ್ಯ ಕರ್ತರಾಗಿದ್ದು, ಆರೋಪಿಗಳ ಬಂಧನ ಸಂಬAಧ ಮಾಹಿತಿ ನೀಡುವವರಿಗೆ ನಗದು ಬಹುಮಾನ ನೀಡಲಾಗುತ್ತದೆ ಎಂದು ‘ಪೋಸ್ಟರ್’ನಲ್ಲಿ ತಿಳಿಸಿದೆ.

ಈ ಹಿಂದೆ ಇದೇ ಪ್ರಕರಣದ ಆರೋಪಿಗಳ ಪೈಕಿ ಮಡಿಕೇರಿಯ ತುಫೈಲ್ ಎಂಬಾತನನ್ನು ಬಂಧಿಸಲಾಗಿತ್ತು.

ಆರೋಪಿಗಳ ಬಗ್ಗೆ ಮಾಹಿತಿ ಇದ್ದಲ್ಲಿ ೦೮೦-೨೯೫೧೦೯೦೦, ೮೯೦೪೨೪೧೧೦೦ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.