ಸಿದ್ದಾಪುರ, ಅ. ೨೭ : ಕರಡಿಗೋಡು ಗ್ರಾಮದಲ್ಲಿ ಹುಲಿಯೊಂದು ಮತ್ತೆ ಪ್ರತ್ಯಕ್ಷಗೊಂಡಿದ್ದು ಗ್ರಾಮಸ್ಥರು ಭಯಭೀತರಾಗಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಕರಡಿಗೋಡು ಗ್ರಾಮದ ಕಾಫಿ ತೋಟ ಒಂದರಲ್ಲಿ ಹುಲಿ ಸುತ್ತಾಡಿದ ಹೆಜ್ಜೆ ಗುರುತುಗಳು ಕಂಡುಬAದಿವೆ.
ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿರಾದರೂ ಹುಲಿಯು ಪತ್ತೆ ಆಗಿರಲಿಲ್ಲ. ಇದಾದ ಬಳಿಕ ಹುಲಿ ಕಾಡಂದಿಯೊAದನ್ನು ದಾಳಿ ನಡೆಸಿ ಕೊಂದ ಘಟನೆ ವರದಿಯಾಗಿತ್ತು. ಇದೀಗ ಮತ್ತೆ ಹುಲಿಯು ಶುಕ್ರವಾರ ಕರಡಿಗೋಡು ಗ್ರಾಮದ ಕೆಲವು ಕಾಫಿ ತೋಟಗಳ ಮಧ್ಯೆ ತೆರಳಿರುವುದು ಕಂಡುಬAದಿವೆ. ಇದರಿಂದ ಕಾರ್ಮಿಕರು ಭಯಭೀತರಾಗಿದ್ದು, ಕೆಲಸಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ಹುಲಿ ಸುತ್ತಾಡುತ್ತಿರುವುದರಿಂದ ಈ ಭಾಗದ ಶಾಲಾ-ಕಾಲೇಜುಗಳಿಗೆ ತೆರಳುವ ಮಕ್ಕಳಿಗೆ ಸಮಸ್ಯೆಯಾಗಿದೆ. ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಕೂಡಲೇ ಈ ಭಾಗದಲ್ಲಿ ಸುತ್ತಾಡುತ್ತಿರುವ ಹುಲಿಯನ್ನು ಸೆರೆ ಹಿಡಿಯಬೇಕೆಂದು ಗ್ರಾಮಸ್ಥರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.
ಶುಕ್ರವಾರದಂದು ಸಂಜೆ ಹುಲಿ ಸುತ್ತಾಡುತ್ತಿರುವುದು ಪ್ರತ್ಯಕ್ಷ ದರ್ಶಿಗಳು ಕಂಡಿದ್ದು ಇದರಿಂದಾಗಿ ಗ್ರಾಮಸ್ಥರು ಆತಂಕಕ್ಕೆ ಸಿಲುಕಿದ್ದು, ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಹುಲಿಯ ಚಲನವಲನ ಕಂಡುಹಿಡಿಯಲು ಕ್ಯಾಮರಗಳನ್ನು ಅಳವಡಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.