ಸುಂಟಿಕೊಪ್ಪ, ಅ. ೨೭: ಧಾರ್ಮಿಕ ಅಸಹಿಷ್ಣುತೆ ಹೆಚ್ಚಾಗು ತ್ತಿರುವ ಈ ದಿನಗಳಲ್ಲಿ ಅವುಗಳನ್ನು ತೊಡೆದುಹಾಕುವ ನಿಟ್ಟಿನಲ್ಲಿ ಧಾರ್ಮಿಕ ಸೌಹಾರ್ದತೆ, ವಿವಿಧತೆ ಯಲ್ಲಿ ಏಕತೆಯನ್ನು ಪ್ರತಿಬಿಂಬಿಸುವ ಕಾರ್ಯಕ್ರಮಗಳು ಹೆಚ್ಚಾಗುತ್ತಿ ರುವುದಕ್ಕೆ ಸುಂಟಿಕೊಪ್ಪ ಹೋಬಳಿಯ ಕಂಬಿಬಾಣೆ ಗ್ರಾಮದಲ್ಲಿರುವ ಶ್ರೀ ರಾಮ ಮತ್ತು ಚಾಮುಂಡೇಶ್ವರಿ ದೇವಸ್ಥಾನ ಸಮಿತಿಯು ಸಾಕ್ಷಿಯಾಯಿತು.
ದೇವಸ್ಥಾನ ಸಮಿತಿ ವತಿಯಿಂದ ೬೮ನೇ ವರ್ಷದ ದಸರಾ ಮತ್ತು ವಿಜಯದಶಮಿ ಉತ್ಸವವು ಅತೀ ವಿಜೃಂಭಣೆಯಿAದ ಜರುಗಿತು. ತಾ. ೧೫ ರಿಂದ ಪ್ರಾರಂಭವಾದ ನವರಾತ್ರಿ ಉತ್ಸವವು ೯ ದಿನಗಳ ಕಾಲ ದೇವಿಯ ವಿವಿಧ ರೂಪಗಳ ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜಯದಶಮಿಯ ದಿನದಂದು ಭವ್ಯವಾದ ಮಂಟಪ ಶೋಭಾ ಯಾತ್ರೆಯೊಂದಿಗೆ ತೆರೆಕಂಡಿತು.
ಮAಗಳವಾರದAದು ರಾತ್ರಿ ಮಹಾ ಪೂಜೆಯ ಬಳಿಕ ವಿದ್ಯುತ್ ದೀಪ ಅಲಂಕೃತ ಭವ್ಯ ಮಂಟಪದಲ್ಲಿ ದೇವಿಯ ಉತ್ಸವ ಮೂರ್ತಿಯನ್ನು ಇರಿಸಿ ಚಿಕ್ಲಿಹೊಳೆ ಜಲಾಶಯದ ಬಳಿಯ ಚಾಮುಂಡೇಶ್ವರಿ ದೇವಾಲ ಯದ ಅಲಂಕೃತ ಮಂಟಪವು ಆಗಮಿಸುವುದರೊಂದಿಗೆ ೨ ಮಂಟಪಗಳಿಗೆ ವಿಶೇಷ ಪೂಜೆಯನ್ನು ಸಲ್ಲಿಸಿ ಗ್ರಾಮದ ಮುಖ್ಯ ಬೀದಿಗಳಲ್ಲಿ ಭವ್ಯ ಮೆರವಣಿಗೆಯನ್ನು ನಡೆಸಲಾಯಿತು.
ವರ್ಷಕ್ಕೊಮ್ಮೆ ೯ ದಿನಗಳ ಹಬ್ಬದ ವಾತಾವರಣವನ್ನು ಸೃಷ್ಟಿಸುವ ಕಂಬಿಬಾಣೆ ವ್ಯಾಪ್ತಿಯಲ್ಲಿ ದೇವಾಲಯ ಸರ್ವಧರ್ಮ ಸಹಬಾಳ್ವೆ ಮತ್ತು ಸಹಕಾರ ತತ್ವವನ್ನು ಅಳವಡಿಸಿಕೊಂಡಿದ್ದು, ಮೆರವಣಿ ಗೆಯ ಸಂದರ್ಭ ಸರ್ವಧರ್ಮಿಯರು ಮೆರವಣಿಗೆಯುದ್ದಕ್ಕೂ ತಂಪುಪಾನೀಯ ಮತ್ತು ಸಿಹಿ ತಿನಿಸುಗಳನ್ನು ನೀಡಿ ಮೆರವಣಿಗೆಗೆ ಮೆರುಗು ನೀಡಿದರು. ಮೆರವಣಿಗೆಯ ಸಂದರ್ಭ ಮಕ್ಕಳು, ವಯಸ್ಕರು ಎಂಬ ಬೇಧವಿಲ್ಲದೆ ರಸ್ತೆಯುದ್ದಕ್ಕೂ ವಾಲಗ ಹಾಗೂ ಜಯಘೋಷ ಹಾಕುತ್ತ ಸಾರ್ವಜನಿಕರು ಕುಣಿದು ಕುಪ್ಪಳಿಸಿದರು.
ಈ ಸಂದರ್ಭ ದೇವಾಲಯದ ವತಿಯಿಂದ ನೆರೆದಿದ್ದ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ದೇವಾಲಯ ಸಮಿತಿ ಅಧ್ಯಕ್ಷ ಡಾ. ಶಶಿಕಾಂತ್ ರೈ, ಕಾರ್ಯದರ್ಶಿ ರವಿ ಸೇರಿದಂತೆ ಸಮಿತಿಯ ಸದಸ್ಯರು, ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ನೂರಾರು ಮಂದಿ ಇದ್ದರು.