ವೈಮಾನಿಕ ದಾಳಿಯಲ್ಲಿ ೩ ಹಮಾಸ್ ಭಯೋತ್ಪಾದಕರು ಹತ

ಜೆರುಸೆಲಂ, ಅ. ೨೭: ಇಸ್ರೇಲ್ ಮತ್ತು ಗಾಜಾ ನಡುವಿನ ಯುದ್ಧ ೨೧ನೇ ದಿನಕ್ಕೆ ಕಾಲಿಟ್ಟಿದ್ದು, ಯುದ್ಧದಲ್ಲಿ ಎರಡೂ ಕಡೆಯಿಂದ ೮೫೦೦ ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಈ ನಡುವೆ ಶುಕ್ರವಾರ ಮುಂಜಾನೆ ಇಸ್ರೇಲ್ ಮಿಲಿಟರಿ ಪಡೆ ನಡೆಸಿದ ವೈಮಾನಿಕ ದಾಳಿಯಲ್ಲಿ ದರಾಜ್ ಟುಫಾ ಬೆಟಾಲಿಯನ್‌ನಲ್ಲಿ ಮೂವರು ಪ್ರಮುಖ ಹಮಾಸ್ ಭಯೋತ್ಪಾದಕರನ್ನು ಇಸ್ರೇಲ್ ಸೇನಾಪಡೆ ಹೊಡೆದುರುಳಿಸಿವೆ ಎಂದು ತಿಳಿದುಬಂದಿದೆ. ಅಕ್ಟೋಬರ್ ೭ ರಂದು ಇಸ್ರೇಲ್ ಮೇಲೆ ಮಾಡಿದ ದಾಳಿಯಲ್ಲಿ ಬೆಟಾಲಿಯನ್ ಕಾರ್ಯಕರ್ತರು ಮಹತ್ವದ ಪಾತ್ರ ವಹಿಸಿದ್ದರು ಎಂದು ಇಸ್ರೇಲಿ ಸೇನಾಪಡೆ ತಿಳಿಸಿದೆ. ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ ಇಸ್ರೇಲ್ ರಕ್ಷಣಾ ಪಡೆ, ಗಾಜಾದಲ್ಲಿ ಗುರುವಾರ ನಡೆಸಿದ ವೈಮಾನಿಕ ದಾಳಿಯಲ್ಲಿ ಹಮಾಸ್ ಭಯೋತ್ಪಾದಕ ಸಂಘಟನೆಯ ಪ್ರಮುಖ ವ್ಯಕ್ತಿಗಳು ಹತರಾಗಿದ್ದಾರೆ ಎಂದು ಪೋಸ್ಟ್ ಮಾಡಿದೆ, ಅಲ್ಲದೆ ಅಕ್ಟೋಬರ್ ಏಳರಂದು ನಮ್ಮ ಮೇಲೆ ನಡೆಸಿದ ದಾಳಿಯಲ್ಲಿ ಬೆಟಾಲಿಯನ್ ಕಾರ್ಯಕರ್ತರು ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ಪೋಸ್ಟ್ ಮಾಡಿದೆ. ಇದಕ್ಕೆ ಸಂಬAಧಿಸಿ ಇಸ್ರೇಲ್ ಸೇನಾಪಡೆ ಹತ್ಯೆಯಾದ ಮೂವರು ಉಗ್ರರ ಚಿತ್ರಗಳನ್ನೂ ಬಿಡುಗಡೆ ಮಾಡಿದೆ. ಇಸ್ರೇಲ್ ಸೆಕ್ಯುರಿಟಿ ಏಜೆನ್ಸಿ ಶಿನ್ ಬೆಟ್‌ನ ನಿಖರವಾದ ಗುಪ್ತಚರ ಮಾರ್ಗದರ್ಶನದ ಅಡಿಯಲ್ಲಿ ಹಮಾಸ್ ಉಗ್ರರನ್ನು ಹೊಡೆದುರುಳಿಸಲಾಯಿತು. ಹಮಾಸ್‌ನ ಗುಪ್ತಚರ ನಿರ್ದೇಶನಾಲಯದ ಉಪ ಮುಖ್ಯಸ್ಥ ಶಾದಿ ಬರುದ್ ಹತರಾಗಿದ್ದಾರೆಂದು ಇಸ್ರೇಲಿ ರಕ್ಷಣಾ ಪಡೆ ತಿಳಿಸಿದೆ.

ಅಕ್ರಮ ಹಣ ವರ್ಗಾವಣೆ ಪ್ರಕರಣ-ಸಚಿವನ ಬಂಧನ

ಕೋಲ್ಕತ್ತಾ, ಅ. ೨೭: ಪಶ್ಚಿಮ ಬಂಗಾಳದ ಬಹುಕೋಟಿ ಪಡಿತರ ವಿತರಣೆ ಹಗರಣಕ್ಕೆ ಸಂಬAಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಪಶ್ಚಿಮ ಬಂಗಾಳ ಸಚಿವ ಜ್ಯೋತಿಪ್ರಿಯೋ ಮಲ್ಲಿಕ್ ಅವರನ್ನು ಜಾರಿ ನಿರ್ದೇಶನಾಲಯ(ಇಡಿ) ಶುಕ್ರವಾರ ಬಂಧಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಸುಮಾರು ೧೭-೧೮ ಗಂಟೆಗಳ ವಿಚಾರಣೆಯ ನಂತರ ಇಂದು ಬೆಳಿಗ್ಗಿನ ಜಾವ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಸಚಿವ ಮಲ್ಲಿಕ್ ಅವರನ್ನು ಬಂಧಿಸಲಾಯಿತು. ಕೋಲ್ಕತ್ತಾದ ಹೊರವಲಯದಲ್ಲಿರುವ ಸಾಲ್ಟ್ಲೇಕ್ ಪ್ರದೇಶದಲ್ಲಿರುವ ಸಚಿವರ ಮನೆಯಿಂದ ೩.೩೦ ರ ಸುಮಾರಿಗೆ ಕೇಂದ್ರೀಯ ತನಿಖಾ ಸಂಸ್ಥೆಯ ಕಚೇರಿಗೆ ಮಲ್ಲಿಕ್ ಅವರನ್ನು ಕರೆದೊಯ್ಯಲಾಯಿತು ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.

ಗಾಜಾದಲ್ಲಿ ಇಸ್ರೇಲ್ ದಾಳಿ:೩೫ ವಿಶ್ವಸಂಸ್ಥೆ ಸಿಬ್ಬಂದಿ ಸಾವು

ವಾಷಿಂಗ್ಟನ್, ಅ. ೨೭: ಹಮಾಸ್ ಉಗ್ರರ ದಾಳಿ ಬಳಿಕ ಗಾಜಾಪಟ್ಟಿ ಮೇಲೆ ಇಸ್ರೇಲ್ ಸೇನೆ ನಡೆಸುತ್ತಿರುವ ದಾಳಿ ವೇಳೆ ಕನಿಷ್ಟ ೩೫ ಮಂದಿ ವಿಶ್ವಸಂಸ್ಥೆ ಸಿಬ್ಬಂದಿಗಳು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಈ ಬಗ್ಗೆ ಸ್ವತಃ ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿ ಅಧ್ಯಕ್ಷ ಡೆನ್ನಿಸ್ ಫ್ರಾನ್ಸಿಸ್ ಮಾಹಿತಿ ನೀಡಿದ್ದು, ಇಸ್ರೇಲ್-ಹಮಾಸ್ ಯುದ್ಧದ ಸಮಯದಲ್ಲಿ ಮಾನವೀಯ ಸೇವೆಯನ್ನು ಒದಗಿಸುವ ಸಂದರ್ಭದಲ್ಲಿ ೩೫ ಸಿಬ್ಬಂದಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಅವರ ಕುಟುಂಬಸ್ಥರಿಗೆ ನಾವು ಸಂತಾಪ ಸೂಚಿಸುತ್ತೇವೆ ಎಂದು ಹೇಳಿದ್ದಾರೆ. ನ್ಯೂಯಾರ್ಕ್ನಲ್ಲಿ ಹತ್ತನೇ ತುರ್ತು ವಿಶೇಷ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಅವರು, "ಮಾನವೀಯ ಸೇವೆಯ ಉದಾತ್ತ ಕಾರಣಕ್ಕಾಗಿ ಪ್ರಾಣ ಕಳೆದುಕೊಂಡ ೩೫ ಸಿಬ್ಬಂದಿ ಸದಸ್ಯರ ಕುಟುಂಬಗಳಿಗೆ ನಾನು ಪ್ರಧಾನ ಕಾರ್ಯದರ್ಶಿಯೊಂದಿಗೆ ನಾನು ನನ್ನ ಆಳವಾದ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಈ ಸಂಕಟದ ಸಂದರ್ಭಗಳಲ್ಲಿ ಅವರ ನಿರಂತರ ಅಚಲ ಮತ್ತು ವೀರೋಚಿತ ಪ್ರಯತ್ನಗಳಿಗಾಗಿ ಸಿಬ್ಬಂದಿ ಮತ್ತು ಇತರ ಮಾನವೀಯ ಕಾರ್ಯಕರ್ತರಿಗೆ ಗೌರವ ಸಲ್ಲಿಸಲು ನಾನು ಈ ಅವಕಾಶವನ್ನು ತೆಗೆದುಕೊಳ್ಳುತ್ತೇನೆ ಎಂದು ಫ್ರಾನ್ಸಿಸ್ ಹೇಳಿದರು.

ವರ್ತೂರು ಸಂತೋಷ್‌ಗೆ ಜಾಮೀನು ಮಂಜೂರು

ಬೆAಗಳೂರು, ಅ. ೨೭: ಹುಲಿ ಉಗುರು ಲಾಕೆಟ್ ಪ್ರಕರಣಕ್ಕೆ ಸಂಬAಧಿಸಿದAತೆ ವರ್ತೂರು ಸಂತೋಷ್‌ಗೆ ಜಾಮೀನು ಮಂಜೂರಾಗಿದೆ. ೨ನೇ ಎಸಿಜೆಎಂ ನ್ಯಾಯಾಲಯ ನಗದು ಶ್ಯೂರಿಟಿ ಅಥವಾ ಒಬ್ಬ ವ್ಯಕ್ತಿಯ ಶ್ಯೂರಿಟಿ, ತನಿಖಾಧಿಕಾರಿಗಳು ಸೂಚಿಸಿದಾಗ ವಿಚಾರಣೆಗೆ ಹಾಜರಾಗಬೇಕು ಎಂದು ಷರತ್ತು ವಿಧಿಸಿ ಜಮೀನು ಮಂಜೂರು ಮಾಡಿದೆ. ಜಾಮೀನು ಸಿಕ್ಕಿದ ಹಿನ್ನೆಲೆಯಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಸಂತೋಷ್ ಪರಪ್ಪನ ಅಗ್ರಹಾರದಿಂದ ಬಿಡುಗಡೆಯಾಗಿದ್ದಾರೆ.

ಸಂಜಯ್ ಸಿಂಗ್ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ

ನವದೆಹಲಿ, ಅ. ೨೭: ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬAಧಿಸಿದAತೆ ಬಂಧನಕ್ಕೊಳಗಾಗಿರುವ ಎಎಪಿ ನಾಯಕ ಸಂಜಯ್ ಸಿಂಗ್ ಅವರ ನ್ಯಾಯಾಂಗ ಬಂಧನದ ಅವಧಿಯನ್ನು ದೆಹಲಿಯ ನ್ಯಾಯಾಲಯ ನವೆಂಬರ್ ೧೦ ರವರೆಗೆ ವಿಸ್ತರಿಸಿದೆ. ವಿಶೇಷ ನ್ಯಾಯಾಧೀಶ ಎಂ.ಕೆ. ನಾಗ್ವಾಲ್ ಅವರು, ರಾಜ್ಯಸಭೆ ಸದಸ್ಯರಾಗಿರುವ ಸಿಂಗ್ ಅವರಿಗೆ ವಿವಿಧ ಯೋಜನೆಗಳು ಮತ್ತು ಕುಟಂಬದ ವೆಚ್ಚಗಳಿಗೆ ಸಂಬAಧಿಸಿದ ಚೆಕ್‌ಗಳಿಗೆ ಸಹಿ ಮಾಡಲು ಅವಕಾಶ ಕಲ್ಪಿಸಿದ್ದಾರೆ. ಜೊತೆಗೆ, ಅವರಿಗೆ ಖಾಸಗಿ ವೈದ್ಯರು ಸೇರಿದಂತೆ ಸೂಕ್ತ ಚಿಕಿತ್ಸೆ ಒಗಿಸುವುದನ್ನು ಖಚಿತಪಡಿಸುವಂತೆ ಜೈಲಿನ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಆರೋಪಿಗೆ ಖಾಸಗಿ ಚಿಕಿತ್ಸೆ ನಿರಾಕರಿಸಲು ಸಕಾರಣಗಳು ಲಭ್ಯವಾಗಿಲ್ಲ. ಹಾಗಾಗಿ ಅವರಿಗೆ ಸೂಕ್ತ ಚಿಕಿತ್ಸೆ ಒದಗಿಸುತ್ತಿರುವುದನ್ನು ಖಾತ್ರಿ ಪಡಿಸುವಂತೆ ಜೈಲಿನ ಅಧೀಕ್ಷಕರಿಗೆ ಸೂಚಿಸಲಾಗಿದೆ ಎಂದು ನ್ಯಾ. ಎಂ.ಕೆ. ನಾಗ್ವಾಲ್ ಹೇಳಿದ್ದಾರೆ.