(ಕಳೆದ ಸಂಚಿಕೆಯಿAದ)
``ಅAಬ್ಲ ತರಿಂಜಕೋ-ಅAಬಲ ವಾಲಿದರೆ
ಊರ್ಡ ಶನಿಪೋಲೆ-ಇಡೀ ಊರಿಗೆ ಶನಿ
ಪುಳ್ಳಿ ಕೊಟ್ಟ್ಡಿಂಜಕೋ-ಸೌದೆ ಕೊಟ್ಟಿಗೆ ಬಿದ್ದರೆ
ಒಕ್ಕಡ ಶನಿ ಪೋಲೆ-ಇಡೀ ಕುಟುಂಬಕ್ಕೆ ಶನಿ
ನಿಂಗ ಬುದ್ದ್ಕೊವ್ವಣೆ - ನೀವು ಅಸ್ವಸ್ಥರಾದ ಬಳಿಕ
ಆಳಣ್ಣ ಶನಿ ಬಾತೋ- ಹಲವರಿಗೆ ಶನಿ ಕಾಡಿತು’’
ಇಲ್ಲಿ ಕೊಡವರ ಅನುಭವ ಹಾಗೂ ನಂಬಿಕೆಯನ್ನು ಕಾಣಬಹುದು. ಒಬ್ಬ ವ್ಯಕ್ತಿಯ ಕಣ್ಮರೆಯನ್ನು ಎಷ್ಟು ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ ಎನ್ನುವುದನ್ನು ಗಮನಿಸಿ. ಕೊಡವರಿಗೆ ಊರಿನ ಅಂಬಲ ಎನ್ನುವುದು ಅತ್ಯಂತ ಪವಿತ್ರವಾದುದು. ಕುಟುಂಬಕ್ಕೆ ಐನ್ಮನೆಯಾದರೆ ಊರಿಗೆ ಅಂಬಲ. ಊರಿನ ಸಭೆ, ವಾಜ್ಯ, ಪುರಸ್ಕಾರ ಅಥವಾ ಯಾವುದೇ ಪ್ರಮುಖ ವಿಷಯಗಳಿದ್ದರೂ ಊರಿನ ಅಂಬಲದಲ್ಲಿಯೇ ಹಿರಿಯರು ಸೇರಿ ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳುತ್ತಿದ್ದರು. ಈ ಹಿನ್ನೆಲೆಯಲ್ಲಿ ಅಂಬಲವನ್ನು ಸ್ವಚ್ಛವಾಗಿಟ್ಟು ಪವಿತ್ರದೃಷ್ಟಿಯಿಂದ ನೋಡುತ್ತಾರೆ. ಒಂದು ವೇಳೆ ಈ ಅಂಬಲ ವಾಲಿದರೆ, ಅಂದರೆ, ಬೀಳುವ ಸ್ಥಿತಿಗೆ ಬಂದರೆ ಅದು ಇಡೀ ಊರಿಗೆ ಶನಿ ಅಥವಾ ಅಪಶಕುನ ಎನ್ನುವುದು ನಂಬಿಕೆ.
ಇದು ಮೂಢ ನಂಬಿಕೆಯಲ್ಲ. ಒಂದು ಪುಟ್ಟಕಟ್ಟಡ ವಾಲಿದರೆ ಇಡೀ ಊರಿಗೆ ಹೇಗೆ ಅಪಶಕುನವಾಗುತ್ತದೆ ಅಥವಾ ಅವನತಿಯ ಸಂಕೇತವಾಗುತ್ತದೆ ಎಂದು ವೈಜ್ಞಾನಿಕ ದೃಷ್ಟಿಕೋನದಲ್ಲಿ ಇಂದಿನ ಯುವ ಜನತೆ ಕೇಳಬಹುದು. ಅವರ ಸಂಶಯ ಸಹಜ ಕೂಡ. ಹಿಂದಿನ ನಂಬಿಕೆ ಇಂದು ಕೆಲವರಿಗೆ ಮೂಢ ನಂಬಿಕೆಯಾಗಿ ಕಾಣಬಹುದು. ಆದರೆ, ಯಾವುದೇ ಒಂದು ನಂಬಿಕೆಯನ್ನು ಅದರ ಹಿನ್ನೆಲೆ ಹಾಗೂ ವಾಸ್ತವ ಸ್ಥಿತಿಯನ್ನು ಸೂಕ್ಷ ್ಮವಾಗಿ ಗಮನಿಸಿದಾಗ ಮಾತ್ರ ಅದರ ಮಹತ್ವ ಅರಿವಾಗುತ್ತದೆ. ಉದಾಹರಣೆಗೆ ಅಂಬಲ ವಾಲಿದರೆ ಊರಿಗೆ ಶನಿ ಹೇಗಾಗುತ್ತದೆ ಎನ್ನುವುದನ್ನು ಗಮನಿಸೋಣ. ಈ ಮೇಲೆ ವಿವರಿಸಿದಂತೆ ಅಂಬಲ ಎನ್ನುವುದು ಇಡೀ ಊರಿನ ಗೌರವ ಹಾಗೂ ಸಮೃದ್ಧಿಯ ಸಂಕೇತ. ತಮ್ಮ ಮನೆಗಿಂತ ಹೆಚ್ಚು ವಿಶೇಷ ಕಾಳಜಿಯನ್ನು ಅಂಬಲವನ್ನು ನಿರ್ವಹಿಸುವುದರಲ್ಲಿ ನೋಡಿಕೊಳ್ಳುತ್ತಿ ದ್ದರು. ಇಡೀ ಊರಿನ ಮಂದಿ ಒಗ್ಗಟ್ಟಿನಿಂದ ಅಲ್ಲಿ ಸೇರುತ್ತಿದ್ದರು. ಅಂಬಲಕ್ಕೆ ಸ್ವಲ್ಪ ಊನವಾದರೂ ತಕ್ಷಣ ಅದನ್ನು ಸರಿಪಡಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಕಟ್ಟಡ ಸದೃಢವಾಗಿಯೇ ಇರುತ್ತಿತ್ತು. ಆದರೆ, ಆ ಅಂಬಲ ವಾಲಿದರೆ, ಬೀಳುವ ಸ್ಥಿತಿಗೆ ಬಂದಿದೆ ಎಂದರೆ ಊರು ಸಹಜವಾಗಿಲ್ಲ, ಊರಿನವರು ಸಂಕಷ್ಟದಲ್ಲಿದ್ದಾರೆ ಎಂದರ್ಥ. ಒಂದೋ ಯುದ್ಧದಿಂದಾಗಿ ಪುರುಷರನ್ನು ಕಳೆದುಕೊಂಡಿರಬಹುದು, ಇಲ್ಲವೇ ಶತ್ರುಪಡೆಯ ದಾಳಿಗೆ ತುತ್ತಾಗಿರಬಹುದು, ಅಥವಾ ಆಳರಸರ ಕೆಂಗಣ್ಣಿಗೆ ಗುರಿಯಾಗಿ ಕುಟುಂಬವೇ ಪರಾರಿಯಾಗಿರ ಬಹುದು. ಇದೆಲ್ಲವನ್ನೂ ಮೀರಿ ಯಾವುದಾದರೂ ಮಾರಕ ರೋಗಕ್ಕೆ ಊರಿನವರು ತುತ್ತಾಗಿರಬಹುದು. ಈ ಕಾರಣಕ್ಕೆ ಅಂಬಲವನ್ನು ನಿರ್ವಹಿಸಲು ಸಾಧ್ಯವಾಗದೆ ಅದು ಬೀಳುವ ಸ್ಥಿತಿಗೆ ಬಂದಿರಬಹುದು. ಈಗಲೂ ಆ ಸ್ಥಿತಿಯಲ್ಲಿದೆ ಎಂದರೆ ಊರು ಸದ್ಯಕ್ಕೆ ಸಹಜ ಸ್ಥಿತಿಗೆ ಮರುಳಲು ಸಾಧ್ಯವಾಗು ತ್ತಿಲ್ಲ ಎನ್ನುವುದರ ಅರ್ಥ. ಅಂದರೆ, ಕೊಡವರ ಚಾವ್ಪಾಟ್ ಅನ್ನು ಕೇವಲ ರೂಢಿ ಮಾಡಿಕೊಂಡು ಹಾಡುವುದಕ್ಕಿಂತ ಅದರ ಅರ್ಥವನ್ನು ಅರಿತುಕೊಳ್ಳ ಬೇಕಿದೆ. `ಅಂಬಲ ತರ್ಂಜಕೊ’ ಎನ್ನುವ ಎರಡು ಪದದಲ್ಲಿ ಎಷ್ಟೊಂದು ಅರ್ಥವಿದೆ ಗಮನಿಸಿ. ಒಂದು ಅಂಬಲ ಇಡೀ ಊರನ್ನು ಸಂಕೇತಿಸುತ್ತದೆ.
`ಪುಳ್ಳಿ ಕೊಟ್ಟ್ಡಿಂಜಕೋ’ (ಸೌದೆಕೊಟ್ಟಿಗೆ ಬಿದ್ದರೆ) ಎನ್ನುವುದು ಕೂಡ ಅಷ್ಟೇ ವಿಶೇಷವಾದ ಸುಳಿವನ್ನು ನೀಡುತ್ತದೆ. ಮನೆಯ ಹಿಂದೆ ಸೌದೆ ಕೊಟ್ಟಿಗೆ ಅಂದರೆ, ಮಳೆಗಾಲದಲ್ಲಿ ಬಳಸಲು ಒಣಗಿದ ಸೌದೆಗಳನ್ನು ಕಡಿದು ಜೋಡಿಸಿ ಇಡುತ್ತಾರೆ. ಇದು ಕೊಡಗಿನ ಪ್ರತಿಯೊಂದು ಮನೆಯಲ್ಲಿಯೂ ಇರುತ್ತದೆ. ಈ ಕೊಟ್ಟಿಗೆಯನ್ನು ಕೂಡ ಸದೃಢವಾಗಿ ನಿರ್ಮಿಸುತ್ತಾರೆ. ಮಳೆಗಾಲದಲ್ಲಿ ನೀರು ಸೋರಿದರೆ ಅಡುಗೆ ಮಾಡಲಾಗುವುದಿಲ್ಲ, ಹಿರಿಯರಿಗೆ ಬೆಂಕಿ ಕಾಯಿಸಿಕೊಳ್ಳಲು ಸಾಧ್ಯವಿಲ್ಲ. ಎಳೆಯ ಮಕ್ಕಳಿಗೆ ಬಿಸಿನೀರು ಕಾಯಿಸಿ ಅವರನ್ನು ಸ್ನಾನ ಮಾಡಿಸಲಾಗದು. ಈ ಕಾರಣಕ್ಕೆ ಬೇಸಿಗೆಯಲ್ಲಿಯೇ ಸೌದೆ ಕಡಿದು ಕೊಟ್ಟಿಗೆ ಸರಿಪಡಿಸಿ ಜೋಡಿಸಿಡುತ್ತಾರೆ. ಈ ಕೊಟ್ಟಿಗೆ ಬೀಳಲು ಸಾಧ್ಯವೇ ಇಲ್ಲ. ಇದು ಆ ಮನೆಯ ಆರೋಗ್ಯವನ್ನು ಸಂಕೇತಿಸುತ್ತದೆ. ಒಂದು ವೇಳೆ ಕೊಟ್ಟಿಗೆ ಬಿದ್ದಿದೆ ಎಂದರೆ ಆ ಮನೆಯವರು ಆರೋಗ್ಯವಾಗಿಲ್ಲ. ಅಲ್ಲಿ ಪುರುಷರು ಇಲ್ಲ, ಅಪಾಯದಲ್ಲಿದ್ದಾರೆ ಎನ್ನುವುದನ್ನು ತಿಳಿಸುತ್ತದೆ. ಕೊಟ್ಟಿಗೆಯನ್ನು ಸರಿಪಡಿಸಲು ಸಾಧ್ಯವಾಗಿಲ್ಲ ಎಂದರೆ ಏನೋ ಕಾದಿದೆ ಎಂದು ಹೇಳುತ್ತಿದರು. ಕೊಟ್ಟಿಗೆ, ಅಂಬಲ ಬಿದ್ದಲ್ಲಿ ಹೇಗೆ ಕುಟುಂಬಕ್ಕೆ, ಊರಿಗೆ ಅಪಶಕುನದಂತೆ ಸಂಕಷ್ಟಗಳು ಎದುರಾಗುತ್ತದೆಯೋ, ಅದೇ ರೀತಿ ನೀವು ಅನಾರೋಗ್ಯಕ್ಕೆ ಈಡಾಗುತ್ತಿದಂತೆ ಕುಟುಂಬದಲ್ಲಿ ಹಲವರು ನೆಮ್ಮದಿ ಕಳೆದುಕೊಂಡರು, ಅವರೂ ಅಸ್ವಸ್ಥರಾದರು. ನೀವಲ್ಲದ ಕುಟುಂಬವನ್ನು ಕಲ್ಪಿಸಿಕೊಳ್ಳಲು ಕೂಡ ಸಾಧ್ಯವಿಲ್ಲ ಎಂದಿರುವುದು ನಿಜವಾಗಿಯೂ ಶ್ರೇಷ್ಠ ಸಾಹಿತ್ಯ ಹಾಗೂ ಅಲಂಕಾರಕ್ಕೆ ಉದಾಹರಣೆ.
ಹಿಂದೆ ಪ್ರತಿಯೊಬ್ಬ ವ್ಯಕ್ತಿ ಕೂಡ ಕುಟುಂಬಕ್ಕೆ ಆಧಾರ ಸ್ತಂಭವಾಗಿರುತ್ತಿದ್ದ. ಕೃಷಿ, ಬೇಟೆ, ಯುದ್ಧ, ವ್ಯಾಪಾರ ಸೇರಿದಂತೆ ಅವರನ್ನೇ ನಂಬಿರಬೇಕಿತ್ತು. ಜನಸಂಖ್ಯೆ ಹೆಚ್ಚಾದಷ್ಟೂ ಕುಟುಂಬ ಸಮೃದ್ಧವಾಗಿರುತ್ತಿತ್ತು. ಅದಕ್ಕೆ ಮಗುವಿನ ಜನನವನ್ನು ಇಡೀ ಕುಟುಂಬ ಸಂಭ್ರಮಿಸುತ್ತದೆ. ಇಡೀ ಕುಟುಂಬಕ್ಕೆ ಜನನ ಎನ್ನುವುದು ಅದೃಷ್ಟ ತರುತ್ತದೆ ಎಂದು ನಂಬಿದ್ದರು.
`ಜಬ್ಬೂಮಿರ ಮೀದಲ್-ಈ ಭೂಮಿ ಮೇಲೆ
ನಿಂಗ ಪುಟ್ಟಿತಾಕಣೇ - ನೀವು ಜನ್ಮತಾಳುತ್ತಿದ್ದಂತೆ
ಭಾಗಿಯ ಪರಂದತ್-ಎಲ್ಲೆಡೆ ಹರಡಿತು
ಕಾಡ್ಲಿಂಜ ಪಟ್ಟತಿ-ಕಾಡಲಿದ್ದ ಹಸು
ಪಟ್ಟಿಕೋಡಿ ಬಂದಿತ್-ಅAಗಳಕ್ಕೆ ಓಡಿ ಬಂತು
ಮAಡುಕನ ಪೆತ್ತತ್-ಕರುವಿಗೆ ಜನ್ಮ ನೀಡಿತು
ಕುಂಞÂಕುಳ್ಳ ಪಾಲಾಚಿ-ಮಗುವಿಗೆ ಹಾಲಾಯಿತು’’
ಎಂತಹ ಹೋಲಿಕೆ ಎನ್ನುವುದನ್ನು ಗಮನಿಸಿ. ಮಗು ಜನಿಸಿದಂತೆ ಎಲ್ಲಡೆ ಶುಭಶಕುನಗಳೇ ಕಾಣಿಸುತ್ತವೆ. ಕಾಡಲ್ಲಿದ್ದ ಹಸು ಮನೆಯ ಅಂಗಳಕ್ಕೆ ಓಡಿ ಬಂದು ಅಲ್ಲಿ ಕರು ಹಾಕುತ್ತದೆ. ಮಗುವಿಗೆ ಹಾಲು ಅಗತ್ಯ. ಹಿಂದೆ ಈಗಿನಂತೆ ಯಥೇಚ್ಛ ಹಾಲು ಸಿಗುತ್ತಿರಲಿಲ್ಲ. ಮನೆಯಲ್ಲಿಯೇ ಹಸು ಸಾಕಿಕೊಳ್ಳಬೇಕು. ಮನೆಯಲ್ಲಿ ಹಾಲೊಂದು ಇದ್ದಲ್ಲಿ ಯಾವುದರ ಕೊರತೆ ಆಗುವುದಿಲ್ಲ. ಮಗು ಜನಿಸಿದ ನಂತರ ಹಾಲಿಲ್ಲ ಎಂದರೆ ಸಮಸ್ಯೆಯಾಗುತ್ತದೆ. ಹಸು ಓಡಿ ಬಂದು ಕರು ಹಾಕಿರುವುದು ನೀವು ಜನಿಸಿದ ನಂತರದ ಭಾಗ್ಯದ ಸಂಕೇತ ಎಂದು ಹೇಳಲಾಗಿದೆ.
(ಮುಂದುವರಿಯುವುದು)
-ಐತಿಚAಡ ರಮೇಶ್ ಉತ್ತಪ್ಪ ಮೈಸೂರು
iu.ಡಿಚಿmesh@gmಚಿiಟ.ಛಿom