ತಾ. ೨೮ರ (ಇಂದು) ಮಧ್ಯರಾತ್ರಿಯ ಹುಣ್ಣಿಮೆಯಂದು ಭಾಗಶಃ ಚಂದ್ರಗ್ರಹಣ ಸಂಭವಿಸಲಿದೆ. ಜ್ಯೋತಿಶ್ಶಾಸ್ತಾçನುಸಾರ ತಾ. ೨೮ರ ರಾತ್ರಿ ೧೨:೫೭ಕ್ಕೆ ಗ್ರಹಣ ಸ್ಪರ್ಶಕಾಲವಾಗಿದ್ದು ಮಧ್ಯರಾತ್ರಿ ಬಳಿಕ ತಾ. ೨೯ ರ ಬೆಳಗಿನ ಜಾವ ಸುಮಾರು ೧:೩೦ಕ್ಕೆ ಗ್ರಹಣದ ಮಧ್ಯಕಾಲವಾಗಿರುತ್ತದೆ. ಮುಂಜಾನೆ ೨:೨೭ಕ್ಕೆÀ ಗ್ರಹಣದ ಮೋಕ್ಷಕಾಲವಾಗಿದೆ. ಇದು ಅಶ್ವಿನೀ ನಕ್ಷತ್ರÀದಲ್ಲಿ ಸಂಭವಿಸಲಿರುವ ಚಂದ್ರನಿಗೆ ರಾಹು ಗ್ರಹಣವಾಗಿದೆ. ಈ ಗ್ರಹಣದಿಂದ ಅಶ್ವಿನೀ, ಮಖಾ, ಮೂಲಾ, ರೇವತಿ, ಭರಣಿ ನಕ್ಷತ್ರದವರಿಗೆ ಹಾಗೂ ಮೇಷ, ವೃಷಭ, ಕನ್ಯಾ, ವೃಶ್ಚಿಕ ರಾಶಿಯವರಿಗೆ ದೋಷಗಳಿದೆ. ಆದರೆ, ಗ್ರಹಣ ಕಳೆದು ಮರುದಿನ ಅಂದರೆ, ತಾ. ೨೯ ರ ಭಾನುವಾರ ಬೆಳಿಗ್ಗೆ ಸ್ನಾನ ಮಾಡಿ ಸನಿಹದ ದೇಗುಲಗಳಿಗೆ ತೆರಳಿ ಪ್ರಾರ್ಥನೆ, ಅರ್ಚಕರಿಂದ ಶಕ್ತಾö್ಯನುಸಾರ ಪೂಜೆ ನಿರ್ವಹಿಸಿದರೆ ದೋಷ ಪರಿಹಾರವಾಗುತ್ತದೆ. ಇತರ ಎಲ್ಲರೂ ಕೂಡ ಬೆಳಿಗ್ಗೆ ಎದ್ದು ತಮ್ಮ ನಿತ್ಯ ಕರ್ಮಗಳ ಬಳಿಕ ಸ್ನಾನ ಮಾಡಿ ಉಟ್ಟ ಬಟ್ಟೆಯನ್ನು ಒಗೆಯಲು ಹಾಕಿ, ಒಗೆದ ವಸ್ತçವನ್ನುಟ್ಟು ಯಥಾನುಶಕ್ತಿ ತಮ್ಮ ಮನೆಯಲ್ಲಿ ದೈವ ಪ್ರಾರ್ಥನೆೆಯನ್ನು ನೆರವೇರಿಸಿದ ಬಳಿಕ ಮಾತ್ರವೇ ಕಾಫಿ, ಚಹಾ ಅಥವಾ ಆಹಾರ ಸೇವನೆ ಮಾಡುವುದು ಉತ್ತಮ ಭವಿಷ್ಯದ ದೃಷ್ಟಿಯಿಂದ ಹಿತಕರ ಎನ್ನುವುದು ಸಲಹೆಯಾಗಿದೆ. ಅಲ್ಲದೆ, ಗ್ರಹಣ ಕಾಲದಲ್ಲಿ ಆಂತರಿಕವಾಗಿ ಆತ್ಮಧ್ಯಾನ ಅಥವಾ ಇಷ್ಟದೇವತಾ ನಾಮ ಪಠಣ ಅಥವಾ ಧ್ಯಾನ ಶೀಘ್ರ ಸತ್ಫಲ ಕೊಡುತ್ತದೆ ಎನ್ನುವುದು ದಾರ್ಶನಿಕರ ಅಭಿಮತ.

- “ಚಕ್ರವರ್ತಿ”