ಮಡಿಕೇರಿ, ಅ. ೨೭ : ಕುಂದ ಬೆಟ್ಟದ ಕೆಳಭಾಗದ ವ್ಯಾಪ್ತಿಯಲ್ಲಿ ಬರುವ ಕೈಕೇರಿಯ ನಿವಾಸಿ ಕೊಡಂದೇರ ದಿಲೀಪ್ ಬೆಳ್ಯಪ್ಪ ಅವರ ಮನೆ ಸನಿಹ ಒಂದೆರಡು ದಿನಗಳ ಹಿಂದೆ ಬೃಹತ್ ಗಾತ್ರದ ಉಡ ಗೋಚರಿಸಿದೆ. ಸಾಮಾನ್ಯವಾಗಿ ಕೊಡಗಿನಲ್ಲಿ ಕಂಡುಬರುವ ಉಡಕ್ಕಿಂತ ಇದರ ಗಾತ್ರ - ಉದ್ದ ತುಸು ಹೆಚ್ಚು ಎನಿಸುವಂತೆ ಕಂಡುಬAದಿತ್ತು. ಈ ಉಡ ದಿಲೀಪ್ ಬೆಳ್ಯಪ್ಪ ಅವರ ಕಾಂಪೌAಡ್‌ಗೆ ಹತ್ತುವಂತೆ ಇದ್ದ ಚಿತ್ರವನ್ನು ಮನೆಯವರು ಸೆರೆಹಿಡಿದಿದ್ದು ಆಪ್ತವರ್ಗದಲ್ಲಿ ಹಂಚಿಕೊAಡಿದ್ದರು. ನಂತರದಲ್ಲಿ ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವುದರೊಂದಿಗೆ ಚರ್ಚೆಗೆ ಗ್ರಾಸವಾಗಿತ್ತು. ಗಾತ್ರ ಹಾಗೂ ಉದ್ದವನ್ನು ಗಮನಿಸಿದ ಮಂದಿ ಅಚ್ಚರಿ ವ್ಯಕ್ತಪಡಿಸಿದ್ದು ಇದು ಅಪರೂಪಕ್ಕೆ ಇಲ್ಲಿ ಕಂಡು ಬಂದಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿರುವ ದಿಲೀಪ್ ಅವರು ಇದು ಸಾಧಾರಣವಾದ ಉಡವೇ ಆಗಿದೆ. ಆದರೆ ತುಸು ದೊಡ್ಡದಿತ್ತು. ಅಪರಾಹ್ನ ೩.೩೦ರ ವೇಳೆಗೆ ಮನೆ ಸನಿಹ ಕಂಡುಬAದಿತು. ಮನೆಯವರು ಇದನ್ನು ಗಮನಿಸಿ ಅಚ್ಚರಿಗೊಂಡೆವು. ಇದು ನೀರು ಅರಸುತ್ತಿರುವಂತೆ ಕಂಡುಬAದಿದ್ದರಿAದ ದೂರದಿಂದ ಪೈಪ್ ಮೂಲಕ ಇದರ ಮೇಲೆ ನೀರು ಹಾಯಿಸಿದೆವು. ತುಸು ಸಂತುಷ್ಟಗೊAಡAತೆ ಕಂಡುಬAದ ಉಡ ತೋಟದ ಮೂಲಕ ಮರೆಯಾಯಿತು. ಅಂದಾಜು ತಲೆಯಿಂದ ಬಾಲದವರೆಗೆ ಐದು ಅಡಿ ಉದ್ದ ಇದ್ದಿರಬಹುದು ಎಂದು ಅವರು ತಿಳಿಸಿದರು.

ಇದು ಗೋಚರಿಸುವುದಕ್ಕೆ ಮುಂಚಿತವಾಗಿ ಕುಂದ ಬೆಟ್ಟದಲ್ಲಿ ಬೇಡು ಹಬ್ಬ ಆರಂಭವಾಗಿತ್ತು. ಈ ಸಂದರ್ಭದ ಶಬ್ದದಿಂದ ಇದು ಅಲ್ಲಿನ ಬೆಟ್ಟದ ಗುಹೆಯಿಂದ ಹೊರ ಬಂದಿರಬಹುದು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇಂದು ಸ್ಥಳಕ್ಕೆ ಭೇಟಿ ನೀಡಿದ ಎ.ಸಿ.ಎಫ್. ಗೋಪಾಲ ಅವರು ಮನೆಯವರಿಂದ ಮಾಹಿತಿ ಸಂಗ್ರಹಿಸಿದರು. ನಂತರ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದ ಅವರು, ಈ ಉಡವು ಕೊಡಗಿನ ಅರಣ್ಯ ವ್ಯಾಪ್ತಿಯಲ್ಲಿ ಸಾಮಾನ್ಯವಾಗಿ ಕಂಡುಬರುತ್ತವೆ. ಅಚ್ಚರಿದಾಯಕವೇನಲ್ಲ ಎಂದರು. ಇದನ್ನು (ಒoಟಿiಣoಡಿ ಐizಚಿಡಿಜ) ಎಂದು ಕರೆಯಲಾಗುತ್ತದೆ.