ಮುಳ್ಳೂರು, ಅ. ೨೭: ಸಮೀಪದ ದುಂಡಳ್ಳಿ ಗ್ರಾ.ಪಂ.ಯ ೨೦೨೨-೨೩ನೇ ಸಾಲಿನ ೧೫ನೇ ಹಣಕಾಸು ಯೋಜನೆ ಮತ್ತು ಉದ್ಯೋಗ ಖಾತ್ರಿ ಯೋಜನೆ ಕಾಮಗಾರಿಗಳಿಗೆ ಕುರಿತಾದ ಜಮಾಬಂದಿ ಸಭೆಯು ಗ್ರಾ.ಪಂ. ಅಧ್ಯಕ್ಷೆ ಸತ್ಯವತಿ ದೇವರಾಜ್ ಅಧ್ಯಕ್ಷತೆಯಲ್ಲಿ ಗ್ರಾ.ಪಂ. ಆವರಣದಲ್ಲಿ ನಡೆಯಿತು.

ಜಮಾಬಂದಿ ಸಭೆಯಲ್ಲಿ ೨೦೨೨-೨೩ನೇ ಸಾಲಿನ ೧೫ನೇ ಹಣಕಾಸು ಯೋಜನೆ ವತಿಯಿಂದ ಆಗಿರುವ ಕಾಮಗಾರಿ ಮತ್ತು ಉದ್ಯೋಗ ಖಾತ್ರಿ ಯೋಜನೆಯಿಂದ ಆಗಿರುವ ಕಾಮಗಾರಿ ವೆಚ್ಚದ ಕುರಿತಾದ ವರದಿಯನ್ನು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಎಂ.ಕೆ. ಆಯಿಷಾ ಮಂಡಿಸಿದರು.

ದುAಡಳ್ಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ ೨೦೨೨-೨೩ನೇ ೧೫ನೇ ಹಣಕಾಸು ಯೋಜನೆಯಿಂದ ವಿವಿಧ ಕಾಮಗಾರಿಗಳಿಗಾಗಿ ಒಟ್ಟು ೨೭ ಲಕ್ಷದ ೬೫ ಸಾವಿರದ ೨೭೬ ರೂಪಾಯಿ ಖರ್ಚು ಮಾಡಲಾಗಿದೆ ಎಂದ ಅವರು, ೨೦೨೨-೨೩ನೇ ಸಾಲಿನಲ್ಲಿ ರಾಷ್ಟಿçÃಯ ಉದ್ಯೋಗ ಖಾತ್ರಿ ಯೋಜನೆ ವತಿಯಿಂದ ಗ್ರಾ.ಪಂ. ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳಿಗೆ ಒಟ್ಟು ರೂ. ೫೪,೪೧,೩೭೪ ಲಕ್ಷ ವೆಚ್ಚ ಮಾಡಲಾಗಿದೆ ಎಂದು ತಿಳಿಸಿದರು.

ಜಮಾಬಂದಿ ಸಭೆಯಲ್ಲಿ ಗ್ರಾಮಸ್ಥರು ಉದ್ಯೋಗ ಖಾತ್ರಿ ಯೋಜನೆಯಿಂದ ಒಂದು ಕಾಮಗಾರಿಗೆ ೨ ಬಿಲ್ ಮಾಡಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಈ ಸಂಬAಧ ಉದ್ಯೋಗ ಖಾತ್ರಿ ಯೋಜನೆ ಅಭಿಯಂತರ ಕಾರ್ತಿಕ್ ಅವರನ್ನು ತರಾಟೆಗೆ ತೆಗೆದುಕೊಂಡರು. ಮಧ್ಯಪ್ರವೇಶಿಸಿದ ನೋಡಲ್ ಅಧಿಕಾರಿ ಮಿಲನ್ ಭರತ್ ಈ ಬಗ್ಗೆ ಗ್ರಾ.ಪಂ. ಆಡಳಿತ ಮಂಡಳಿಯವರು ಪರಿಶೀಲನೆ ನಡೆಸುವಂತೆ ಪಿಡಿಓಗೆ ಸೂಚಿಸಿದರು. ಕಿರುಬಳಿಹ ಗ್ರಾಮದ ಸಾರ್ವಜನಿಕರ ಕೆರೆ ಅಭಿವೃದ್ಧಿ ಕಾಮಗಾರಿ ಕಾರ್ಯ ಕುರಿತು ಗ್ರಾಮಸ್ಥರು ಅಸಮಾಧಾನ ತೋರಿದರು. ದುಂಡಳ್ಳಿ ಸರಕಾರಿ ಶಾಲೆ ಬಳಿಯಲ್ಲಿ ಉದ್ಯಾನವನ ನಿರ್ಮಿಸಿದ್ದು ಉದ್ಯೋಗ ಖಾತ್ರಿ ಯೋಜನೆಯಿಂದ ೨೦೨೨-೨೩ನೇ ಸಾಲಿನಲ್ಲೂ ರೂ. ೧.೪೦ ಲಕ್ಷ ಅನುದಾನ ಬಂದಿದೆ. ಆದರೆ ಉದ್ಯಾನವನ ನಿರ್ವಹಣೆ ಇಲ್ಲದೆ ವ್ಯರ್ಥವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದರು. ಸರಕಾರದಿಂದ ಗ್ರಾ.ಪಂ.ಗೆ ಅಮೃತ ಯೋಜನೆ ವತಿಯಿಂದ ರೂ. ೨೪ ಲಕ್ಷ ಅನುದಾನ ಬಂದಿದ್ದು, ಈ ಹಣದಲ್ಲಿ ರೂ. ೧೧ ಲಕ್ಷ ಗ್ರಾ.ಪಂ. ನಿಧಿಗೆ ಜಮಾ ಆಗಿರಬೇಕಾಗುತ್ತದೆ. ಆದರೆ ಹಿಂದಿನ ಅಧ್ಯಕ್ಷರ ಅವಧಿಯಲ್ಲಿ ಇದನ್ನು ಗ್ರಾ.ಪಂ.ಯ ಖರ್ಚು ವೆಚ್ಚಕ್ಕೆ ವಿನಿಯೋಗಿಸಿರುವ ಬಗ್ಗೆ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.

ಈ ಬಗ್ಗೆ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು. ಮಧ್ಯಪ್ರವೇಶಿಸಿದ ನೋಡಲ್ ಅಧಿಕಾರಿ ಮಿಲನ್ ಭರತ್ ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ವರದಿ ಕೊಡುವಂತೆ ಪಿಡಿಓಗೆ ಸೂಚಿಸಿದರು.

ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಮತ್ತು ಸಭೆಯ ನೋಡಲ್ ಅಧಿಕಾರಿ ಮಿಲನ್ ಭರತ್ ಜಮಾಬಂದಿ ಸಭೆಯ ಉದ್ದೇಶದ ಕುರಿತು ಮಾಹಿತಿ ನೀಡಿದರು. ಸಭೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ಗೋಪಿಕಾ, ಗ್ರಾ.ಪಂ. ಸದಸ್ಯರು, ಉದ್ಯೋಗ ಖಾತ್ರಿ ಇಂಜಿನಿಯರ್ ಕಾರ್ತಿಕ್, ಜಿ.ಪಂ. ಇಂಜಿನಿಯರ್ ಸಲೀಂ ಹಾಜರಿದ್ದರು.