ನಾಪೋಕ್ಲು, ಅ. ೨೭: ಪ್ರತಿಭಾ ಕಾರಂಜಿಯಲ್ಲಿ ಕುಂಜಿಲದ ಆಕ್ಸ್ಫರ್ಡ್ ಶಾಲಾ ವಿದ್ಯಾರ್ಥಿಗಳು ವಿಶೇಷ ಸಾಧನೆ ಮಾಡಿದ್ದಾರೆ. ಇತ್ತೀಚೆಗೆ ಕಕ್ಕಬ್ಬೆ ಕೇಂದ್ರ ವಿದ್ಯಾಸಂಸ್ಥೆ ಯಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ಕುಂಜಿಲ ಗ್ರಾಮದ ಆಕ್ಸ್ಫರ್ಡ್ ಆಂಗ್ಲ ಮಾಧ್ಯಮ ಶಾಲೆಯ ಸುಮಾರು ೪೦ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಪ್ರತಿಭೆಯನ್ನು ಅನಾವರಣ ಗೊಳಿಸಿದರು. ೧ ರಿಂದ ೪ನೇ ತರಗತಿ ವಿಭಾಗದ ಸ್ಪರ್ಧೆಗಳಲ್ಲಿ ರಿಲಾ ಫಾತಿಮಾ (ಅಭಿನಯ ಗೀತೆ) ದ್ವಿತೀಯ, ಜಕೀಯ (ಧಾರ್ಮಿಕ ಪಠಣ) ದ್ವಿತೀಯ, ರನ ಫಾತಿಮಾ (ಕಥೆ ಹೇಳುವುದು) ದ್ವಿತೀಯ ಹಾಗೂ ಮಿನ್ಹ ಕದೀಜಾ (ಛದ್ಮವೇಷ) ದ್ವಿತೀಯ ಸ್ಥಾನ ಪಡೆದು ಕೊಂಡರು. ೫ ರಿಂದ ೭ನೇ ತರಗತಿ ವಿಭಾಗದಲ್ಲಿ ಅಫ್ನಾ (ಲಘು ಸಂಗೀತ, ಭಕ್ತಿಗೀತೆ) ಪ್ರಥಮ, ರಿಂಶಾ ಫಾತಿಮಾ (ಇಂಗ್ಲಿಷ್ ಕಂಠ ಪಾಠ, ಅರೇಬಿಕ್ ಧಾರ್ಮಿಕ ಪಠಣ) ಪ್ರಥಮ, ಜಝಾ ಫಾತಿಮಾ (ಕಥೆ ಹೇಳುವುದು) ಪ್ರಥಮ, ನಿಧಾ (ಹಿಂದಿ ಕಂಠಪಾಠ) ಪ್ರಥಮ ಸ್ಥಾನವನ್ನು ಗಳಿಸಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಫರ್ಹಾನ್ (ಮಿಮಿಕ್ರಿ) ದ್ವಿತೀಯ, ರಿಂಶಾ ಫಾತಿಮಾ (ಸಂಸ್ಕೃತ ಧಾರ್ಮಿಕ ಪಠಣ) ದ್ವಿತೀಯ ಸ್ಥಾನವನ್ನು ಗಳಿಸಿದ್ದಾರೆ. ಪ್ರೌಢಶಾಲಾ ವಿಭಾಗದಲ್ಲಿ ಅಫ್ರೀದ್ (ಜನಪದ ಗೀತೆ) ದ್ವಿತೀಯ, ಶಹದಿಯಾ ಹಾಗೂ ಮಿನ್ಹ ಕದೀಜಾ (ಛದ್ಮವೇಷ) ದ್ವಿತೀಯ ಸ್ಥಾನ ಪಡೆದು ಕೊಂಡರು. ೫ ರಿಂದ ೭ನೇ ತರಗತಿ ವಿಭಾಗದಲ್ಲಿ ಅಫ್ನಾ (ಲಘು ಸಂಗೀತ, ಭಕ್ತಿಗೀತೆ) ಪ್ರಥಮ, ರಿಂಶಾ ಫಾತಿಮಾ (ಇಂಗ್ಲಿಷ್ ಕಂಠ ಪಾಠ, ಅರೇಬಿಕ್ ಧಾರ್ಮಿಕ ಪಠಣ) ಪ್ರಥಮ, ಜಝಾ ಫಾತಿಮಾ (ಕಥೆ ಹೇಳುವುದು) ಪ್ರಥಮ, ನಿಧಾ (ಹಿಂದಿ ಕಂಠಪಾಠ) ಪ್ರಥಮ ಸ್ಥಾನವನ್ನು ಗಳಿಸಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಫರ್ಹಾನ್ (ಮಿಮಿಕ್ರಿ) ದ್ವಿತೀಯ, ರಿಂಶಾ ಫಾತಿಮಾ (ಸಂಸ್ಕೃತ ಧಾರ್ಮಿಕ ಪಠಣ) ದ್ವಿತೀಯ ಸ್ಥಾನವನ್ನು ಗಳಿಸಿದ್ದಾರೆ. ಪ್ರೌಢಶಾಲಾ ವಿಭಾಗದಲ್ಲಿ ಅಫ್ರೀದ್ (ಜನಪದ ಗೀತೆ) ದ್ವಿತೀಯ, ಶಹದಿಯಾ