ಮಡಿಕೇರಿ, ಅ. ೨೭: ಯು.ಎ.ಇ.ಯಲ್ಲಿ ನೆಲೆಸಿರುವ ಕೊಡಗು ಅರೆಭಾಷೆ ಗೌಡ ಕುಟುಂಬಗಳ ವತಿಯಿಂದ ೨ನೇ ವರ್ಷದ ಕೈಲ್ ಮುಹೂರ್ತ ಹಬ್ಬವನ್ನು ಅಜ್ಮಾನ್ ಬೀಚ್ ಹೊಟೇಲ್‌ನಲ್ಲಿ ಆಚರಿಸಲಾಯಿತು.

ಆಯುಧ ಪೂಜೆಯೊಂದಿಗೆ ದಿನ ಪ್ರಾರಂಭಿಸಿ, ಕ್ರೀಡಾ ಜ್ಯೋತಿ ಬೆಳಗುವುದರೊಂದಿಗೆ ಆಟೋಟ ಚಟುವಟಿಕೆಗಳಿಗೆ ಚಾಲನೆ ನೀಡಲಾಯಿತು. ಊಟದ ನಂತರ ಸಾಂಸ್ಕೃತಿಕ ಚಟುವಟಿಕೆಗಳು ಜರುಗಿದವು.

ಕೆ.ಜಿ.ಎಸ್. ಬೆಂಗಳೂರು ಅಧ್ಯಕ್ಷ ಕೇಕಡ ನಾಣಯ್ಯ, ಕುದುಕುಳಿ ಮಿಲನ ಭರತ್, ಕೋಳಿಬೈಲು ಡಾ. ಮೇಜರ್ ಕುಶ್ವಂತ್, ಸಂಗೀತ ನಿರ್ದೇಶಕ ಚರಣ್ ರಾಜ್ ಅವರು ಕೈಲ್ ಮುಹೂರ್ತ ಹಬ್ಬವನ್ನು ಆಚರಿಸುತ್ತಿರುವ ಕೊಡಗು ಅರೆಭಾಷೆ ಗೌಡ ಕುಟುಂಬಗಳಿಗೆ ಶುಭ ನೀಡಲಾಯಿತು. ಊಟದ ನಂತರ ಸಾಂಸ್ಕೃತಿಕ ಚಟುವಟಿಕೆಗಳು ಜರುಗಿದವು.

ಕೆ.ಜಿ.ಎಸ್. ಬೆಂಗಳೂರು ಅಧ್ಯಕ್ಷ ಕೇಕಡ ನಾಣಯ್ಯ, ಕುದುಕುಳಿ ಮಿಲನ ಭರತ್, ಕೋಳಿಬೈಲು ಡಾ. ಮೇಜರ್ ಕುಶ್ವಂತ್, ಸಂಗೀತ ನಿರ್ದೇಶಕ ಚರಣ್ ರಾಜ್ ಅವರು ಕೈಲ್ ಮುಹೂರ್ತ ಹಬ್ಬವನ್ನು ಆಚರಿಸುತ್ತಿರುವ ಕೊಡಗು ಅರೆಭಾಷೆ ಗೌಡ ಕುಟುಂಬಗಳಿಗೆ ಶುಭ ಹಾರೈಸಿದರು.

ಕಾರ್ಯಕ್ರಮವನ್ನು ಅಚ್ಚಂಡೀರ, ಆನೇರ, ಬೆಳ್ಯನ, ಕಡ್ಲೇರ, ಕಲ್ಲಂಬಿ, ಕರ್ಣಯ್ಯನ, ಕತ್ರಿಕೊಲ್ಲಿ, ಕುದುಪಜೆ, ಕೊಂಪುಳಿರ ಮತ್ತು ಮೊಟ್ಟನ ಕುಟುಂಬಗಳು ಆಯೋಜಿಸಿದ್ದರು.

ಯು.ಎ.ಇ.ಯಲ್ಲಿ ನೆಲೆಸಿರುವ ಕೊಡಗು ಅರೆಭಾಷೆ ಗೌಡ ಕುಟುಂಬಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಕೈಲ್ ಮುಹೂರ್ತ ಹಬ್ಬವನ್ನು ಆಚರಿಸಿದರು.