ಚೆಯ್ಯAಡಾಣೆ, ಅ. ೨೭: ಕೊಡಗಿನ ಸುನ್ನಿ ಪ್ರವಾಸಿಗಳ ಒಕ್ಕೂಟವಾದ ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಸೌದಿ ಅರೇಬಿಯ ರಾಷ್ಟಿçÃಯ ಸಮಿತಿ ವತಿಯಿಂದ ಪ್ರತಿವರ್ಷ ನಡೆಸಿಕೊಂಡು ಬರುವ ಮೀಲಾದ್ ಸಮಾವೇಶ ಈ ವರ್ಷವೂ ಇತ್ತೀಚೆಗೆ ರಿಯಾದ್‌ನಲ್ಲಿರುವ ಅಲ್ ಮಾಸ್ ಆಡಿಟೋರಿಯಮಿನಲ್ಲಿ ನಡೆಯಿತು.

ಬುರ್ದಾ ಮತ್ತು ಮೌಲಿದ್ ಮಜ್ಲಿಸ್‌ನೊಂದಿಗೆ ಹಂಸ ಮುಸ್ಲಿಯಾರ್ ಮಾಪಿಳತ್ತೋಡು ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಂತರ ವಿದ್ಯಾರ್ಥಿಗಳ ಕಾರ್ಯಕ್ರಮ ಹಾಗೂ ಮೀಲಾದ್ ಸಮಾವೇಶ ನಡೆಸಲಾಯಿತು.

ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಸೌದಿ ಅರೇಬಿಯ ರಾಷ್ಟಿçÃಯ ಸಮಿತಿ ಅಧ್ಯಕ್ಷ ಹಂಸ ಮುಸ್ಲಿಯಾರ್ ಚೋಕಂಡಳ್ಳಿ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು. ಸೌದಿ ಪ್ರವಾಸದಲ್ಲಿರುವ ಮರ್ಕಝುಲ್ ಹಿದಾಯ ಪ್ರಧಾನ ಅಧ್ಯಾಪಕ ಅಸ್ಕರ್ ಸಖಾಫಿ ಖಿರಾಅತ್ ಪಠಿಸಿದರು. ಮರ್ಕಝುಲ್ ಹಿದಾಯ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಸಖಾಫಿ ಕೊಂಡAಗೇರಿ ಅವರು ಉದ್ಘಾಟಿಸಿದ ಸಮಾರಂಭದಲ್ಲಿ ಮುಹಮ್ಮದಲಿ ಸಖಾಫಿ ಒಳಮದಿಲ್ ಮುಖ್ಯ ಪ್ರಭಾಷಣ ಮಾಡಿದರು. ಮುಹಮ್ಮದ್ ಪೈಗಂಬರ್ (ಸ) ಶಾಂತಿಯ ಪ್ರತಿರೂಪ ಎಂಬ ವಿಷಯದಲ್ಲಿ ಹುಬ್ಬುರ್ರಸೂಲ್ ಪ್ರಭಾಷಣ ಮಾಡಿ, ಮುಹಮ್ಮದ್ ಪೈಗಂಬರ್ (ಸ) ಅವರು ಹೇಳಿದಂತೆ ಎಲ್ಲಾ ಜಾತಿ ಧರ್ಮದವರು ಶಾಂತಿಯಿAದ ವರ್ತಿಸಬೇಕು ಎಂದು ಹಿತವಚನ ನೀಡಿದರು.

ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಜಿ.ಸಿ.ಸಿ. ಮಾಜಿ ಪ್ರಧಾನ ಕಾರ್ಯದರ್ಶಿ ಹಂಸ ಮಾನಿ ಕುಂಜಿಲ ಮಾತನಾಡಿ, ಸೌದಿ ಪ್ರವಾಸಿಗಳು ಕೊಡಗಿನ ಪ್ರಳಯ, ಕೊರೊನಾ ಹಾಗೂ ಕೊಡಗಿನಲ್ಲಿ ಸಂಕಷ್ಟದಲ್ಲಿರುವ ಜನತೆಗೆ ಜಾತ್ಯತೀತವಾಗಿ ಸಹಾಯ ಹಸ್ತವನ್ನು ನೀಡಿದ ಬಗ್ಗೆ ಸಭಿಕರಿಗೆ ತಿಳಿಸಿ ಇನ್ನು ಮುಂದಕ್ಕೂ ಕೊಡಗಿಗೆ ಬೇಕಾಗಿ ನಾವೆಲ್ಲರೂ ತನು ಮನಗಳಿಂದ ಸಹಕರಿಸಬೇಕು ಎಂದು ಸಭಿಕರಿಗೆ ತಿಳಿಸಿದರು. ಕೆ.ಸಿ.ಎಫ್. (ಕರ್ನಾಟಕ ಕಲ್ಚರಲ್ ಫೌಂಡೇಶನ್) ರಿಯಾದ್ ಝೋನ್ ಪ್ರಧಾನ ಕಾರ್ಯದರ್ಶಿ ಅಶ್ರಫ್ ಕಿಲ್ಲೂರು ಶುಭ ಹಾರೈಕೆ ಭಾಷಣ ಮಾಡಿದರು.

ವೇದಿಕೆಯಲ್ಲಿ ಇ.ಸಿ. ಕಾರ್ಗೋ ಮಾಲೀಕ ಅಶ್ರಫ್ ಎಮ್ಮೆಮಾಡು, ದಾರುನ್ನಜಾತ್ ನೆಲ್ಲಿಹುದಿಕೇರಿ ಜಿ.ಸಿ.ಸಿ. ಅಧ್ಯಕ್ಷ ಅಝೀಝ್ ನೆಲ್ಲಿಹುದಿಕೇರಿ, ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ರಿಯಾದ್ ಝೋನ್ ಅಧ್ಯಕ್ಷ ನಝೀರ್ ಗುಂಡಿಕೆರೆ, ಕೆಸಿಎಫ್ ಝೋನಲ್ ನೇತಾರ ದಾವೂದ್ ಸಅದಿ, ಅನ್ವಾರುಲ್ ಹುದಾ ರಿಯಾದ್ ಸಮಿತಿಯ ಅಧ್ಯಕ್ಷ ರಫೀಕ್ ತಂಙಳ್ ಮಾಲ್ತಾರೆ, ಹಿರಿಯರಾದ ಹಮೀದ್ ಕೋಟಯಂ, ಕುಂಜಿಲ ಪೈನರಿ ಯುವಕರ ಸಂಘಟನೆಯಾದ ಕೆ.ಎಸ್.ಎ. ಸಮಿತಿ ಅಧ್ಯಕ್ಷ ಫೈಝಲ್ ಕುಂಜಿಲ ಕುಂಡAಡ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಷಂಶುದ್ದೀನ್ ತಕ್ಕಪಳ್ಳಿ ಹೊದವಾಡ, ಶರೀಫ್ ಕೂಡಿಗೆ ನೇತೃತ್ವವನ್ನು ವಹಿಸಿದ್ದರು. ರಾಷ್ಟಿçÃಯ ಸಮಿತಿ ನೇತಾರ ಮುಸ್ತಫ ಕಡಂಗ ಸ್ವಾಗತಿಸಿದ ಕಾರ್ಯಕ್ರಮದಲ್ಲಿ ಮುಸ್ತಫ ಝೈನಿ ಕಂಬಿಬಾಣೆ ನಿರೂಪಿಸಿ, ರಫೀಕ್ ನೆಲ್ಲಿಹುದಿಕೇರಿ ವಂದಿಸಿದರು.