ಸೋಮವಾರಪೇಟೆ, ಅ. ೨೭: ಕಳೆದ ೨೦೧೩ರಲ್ಲಿ ಶಾಸಕರಾಗಿದ್ದ ಎಂ.ಪಿ. ಅಪ್ಪಚ್ಚು ರಂಜನ್ ಅವರು ಕ್ರೀಡಾ ಸಚಿವರಾಗಿದ್ದ ಸಂದರ್ಭ ಸೋಮವಾರಪೇಟೆಯ ಜೂನಿಯರ್ ಕಾಲೇಜು ಮೈದಾನದಲ್ಲಿ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯಿಂದ ರೂ. ೩.೪೦ ಕೋಟಿ ಅನುದಾನದಡಿ ಚಾಲನೆಗೊಂಡಿದ್ದ ಟರ್ಫ್ ಮೈದಾನ ಕಾಮಗಾರಿ ಇದೀಗ ಬಹುತೇಕ ಮುಕ್ತಾಯಗೊಂಡಿದೆ.
ಕಳೆದ ತಾ. ೧೪.೦೩.೨೦೧೩ರಂದು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಅಂದಿನ ನಿರ್ದೇಶಕ ಬಲದೇವಕೃಷ್ಣ ಅವರ ಉಪಸ್ಥಿತಿಯಲ್ಲಿ ಜೂನಿಯರ್ ಕಾಲೇಜು ಮೈದಾನದಲ್ಲಿ ಟರ್ಫ್ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು.
ತದನಂತರ ಇಲ್ಲಿ ಮೈದಾನ ನಿರ್ಮಾಣಕ್ಕೆ ಹಲವಷ್ಟು ಅಡೆತಡೆಗಳು ಎದುರಾದ ಹಿನ್ನೆಲೆ ಆರಂಭದಲ್ಲೇ ಕಾಮಗಾರಿಗೆ ವಿಘ್ನ ಬಂದಿತ್ತು. ಕೊನೆಗೂ ಇದೇ ಮೈದಾನದಲ್ಲಿ ಟರ್ಫ್ ಅಳವಡಿಸಲು ಯೋಜನೆ ಸಿದ್ದಗೊಳಿಸಿ ಆರಂಭಗೊAಡ ಕಾಮಗಾರಿ ಕುಂಟುತ್ತಾ ಸಾಗಿ ಇದೀಗ ಮುಕ್ತಾಯ ಕಂಡಿದೆ.
ಬರೋಬ್ಬರಿ ೧೦ ವರ್ಷ ಕಳೆದ ನಂತರ ಇದೀಗ ಟರ್ಫ್ ಮೈದಾನ ಕಾಮಗಾರಿ ಪೂರ್ಣಗೊಂಡಿದ್ದು, ಕ್ರೀಡಾಕೂಟಗಳಿಗೆ ಎದುರು ನೋಡುತ್ತಿದೆ. ಒಟ್ಟು ೪.೧೫ ಕೋಟಿ ವೆಚ್ಚದಲ್ಲಿ ಟರ್ಫ್ ನಿರ್ಮಾಣ ಕಾಮಗಾರಿ ನಡೆದಿದ್ದು, ಹೆಚ್ಚುವರಿಯಾಗಿ ವಿದ್ಯುತ್ ಸಂಪರ್ಕ, ಬೋರ್ವೆಲ್, ಮೋಟಾರ್ ಅಳವಡಿಕೆ, ನೀರಿನ ಟ್ಯಾಂಕ್ ಕಾಮಗಾರಿಗಳು ನಡೆದಿವೆ.
ಈ ನಡುವೆ ಇನ್ನೂ ಕಾಮಗಾರಿ ಮುಕ್ತಾಯಗೊಳ್ಳದೇ ಇದ್ದರೂ ಕಳೆದ ವರ್ಷದ ಮಾರ್ಚ್ನಲ್ಲಿಯೇ ಸಿಂಥೆಟಿಕ್ ಹಾಕಿ ಟರ್ಫ್ ಮೈದಾನ ಕಾಮಗಾರಿಗೆ ಫೆಡರೇಷನ್ ಆಫ್ ಇಂಟರ್ನ್ಯಾಷನಲ್ ಹಾಕಿ ಸಂಸ್ಥೆಯಿAದ ಗುಣಮಟ್ಟ ಖಾತ್ರಿ ಹಾಗೂ ಉತ್ತಮ ಗುಣಮಟ್ಟದ ಯೋಗ್ಯತಾ ಪತ್ರವನ್ನೂ ನೀಡಲಾಗಿತ್ತು.
ಹಲವಷ್ಟು ಅಡೆತಡೆಗಳ ನಡುವೆಯೂ ಗ್ರೇಟ್ ಸ್ಪೋರ್ಟ್ಸ್ ಇನ್ಫ್ರಾ ಪ್ರೆöÊವೇಟ್ ಲಿಮಿಟೆಡ್ ಸಂಸ್ಥೆ ಕಾಮಗಾರಿಯನ್ನು ನಿರ್ವಹಿಸಿದ್ದು, ಕ್ರೀಡಾಪ್ರೇಮಿಗಳ ನಿರೀಕ್ಷೆಯಂತೆ ಮೈದಾನ ಸಜ್ಜುಗೊಂಡಿದೆ. ಈ ನಡುವೆ ಮೈದಾನಕ್ಕೆ ಡಾಂಬರು ಹಾಕುವ ಸಂದರ್ಭ ಕಳಪೆ ಕಂಡುಬAದ ಹಿನ್ನೆಲೆ ಮೇಲುಸ್ತುವಾರಿ ಸಮಿತಿಯ ಪದಾಧಿಕಾರಿಗಳೇ ತಡೆದು ಮರು ಡಾಂಬರೀಕರಣವನ್ನೂ ಮಾಡಿಸಿದ್ದರು.
ಅದಾದ ನಂತರ ಸಿಂಥೆಟಿಕ್ ಮ್ಯಾಟ್ ಅಳವಡಿಸಲಾಯಿತು. ನಂತರ ಓವರ್ ಹೆಡ್ ಟ್ಯಾಂಕ್, ಮೈದಾನದ ಸುತ್ತಲೂ ಫೆನ್ಸಿಂಗ್, ತಡೆಗೋಡೆ ನಿರ್ಮಾಣ, ನೀರಿನ ಸೌಲಭ್ಯ ಸೇರಿದಂತೆ ಇತರ ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದು, ಕೆಲವೇ ದಿನಗಳಲ್ಲಿ ಉದ್ಘಾಟನೆಗೊಳ್ಳಲು ಎದುರು ನೋಡುತ್ತಿದೆ. ಹಿಂದಿನ ಸಾಲಿನ ಶಾಸಕರಾಗಿದ್ದ ಅಪ್ಪಚ್ಚು ರಂಜನ್ ಅವರು ಅನೇಕ ಬಾರಿ ಮೈದಾನಕ್ಕೆ ಭೇಟಿ ನೀಡಿ ಕಾಮಗಾರಿ ಯನ್ನು ಪೂರ್ಣ ಗೊಳಿಸುವಂತೆ ಸಂಬAಧಿಸಿದ ಅಧಿಕಾರಿಗಳಿಗೆ ಸೂಚನೆಯನ್ನೂ ನೀಡಿದ್ದರು. ಆದರೂ ನಿರೀಕ್ಷಿತ ಸಮಯದಲ್ಲಿ ಮೈದಾನ ಕಾಮಗಾರಿ ಪೂರ್ಣ ಗೊಳಿಸಲು ಸಾಧ್ಯವಾಗಿರಲಿಲ್ಲ. ಶೇ. ೯೦ರಷ್ಟು ಕಾಮಗಾರಿಗಳೂ ಮುಕ್ತಾಯಗೊಂಡಿದ್ದವು. ಮೈದಾನಕ್ಕೆ ಅಗತ್ಯವಾಗಿ ಬೇಕಾಗಿರುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಿದ್ದರೂ ಬೋರ್ವೆಲ್ನಿಂದ ನೇರೆತ್ತುವ ಮೋಟಾರ್ಗೆ ವಿದ್ಯುತ್ ಸಂಪರ್ಕ ನೀಡುವ ಕೆಲಸ ಮಾತ್ರ
ಬಾಕಿಯಿತ್ತು.
(ಮೊದಲ ಪುಟದಿಂದ) ತದನಂತರ ನೂತನ ಶಾಸಕ ಡಾ. ಮಂಥರ್ ಗೌಡ ಅವರೂ ಸಹ ಮೈದಾನಕ್ಕೆ ಭೇಟಿ ನೀಡಿ ಸಂಬAಧಿಸಿದ ಮೇಲುಸ್ತುವಾರಿ ಸಮಿತಿಯವರೊಂದಿಗೆ ಮಾತುಕತೆ ನಡೆಸಿದ್ದರು. ಈ ಸಂದರ್ಭ ವಿದ್ಯುತ್ ಸಂಪರ್ಕ ಒದಗಿಸುವಂತೆ ಸಂಬAಧಿಸಿದ ಗುತ್ತಿಗೆದಾರರಿಗೆ ಸೂಚನೆ ನೀಡಿದ್ದರು.
ಈ ನಡುವೆ ಮಳೆ ಬಂದಿದ್ದರಿAದ ಹಾಕಿಪಟುಗಳು ಮೈದಾನದಲ್ಲಿ ಅಭ್ಯಾಸವನ್ನೂ ಮಾಡುತ್ತಿದ್ದು, ನಿನ್ನೆ ದಿನ ನೀರಿನ ಮೋಟಾರ್ಗೆ ವಿದ್ಯುತ್ ಸಂಪರ್ಕ ಕಲ್ಪಿಸಿ, ಮೈದಾನಕ್ಕೆ ನೀರು ಹಾಯಿಸಲಾಗುತ್ತಿದೆ. ಒಟ್ಟಾರೆ ಹಲವು ಅಡೆತಡೆಗಳು, ವಿಳಂಬದ ತರುವಾಯ ಸೋಮವಾರ ಪೇಟೆಯಲ್ಲಿ ಸಿಂಥೆಟಿಕ್ ಟರ್ಫ್ ಮೈದಾನ ನಿರ್ಮಾಣಗೊಂಡಿದೆ.
ದೇಶದ ಹಾಕಿ ಕ್ಷೇತ್ರಕ್ಕೆ ಬಿ.ಪಿ. ಗೋವಿಂದ, ಅರ್ಜುನ್ ಹಾಲಪ್ಪ, ಎಸ್.ವಿ. ಸುನಿಲ್, ವಿಕ್ರಂಕಾAತ್ ಅವರಂತಹ ಅತ್ಯುತ್ತಮ ಹಾಕಿ ಪಟುಗಳನ್ನು ಕೊಡುಗೆಯಾಗಿ ನೀಡಿದ ಸೋಮವಾರಪೇಟೆಯಲ್ಲಿ ಸುಸಜ್ಜಿತ ಟರ್ಫ್ ಮೈದಾನ ನಿರ್ಮಾಣವಾಗಬೇಕೆಂಬ ಹಾಕಿ ಪ್ರೇಮಿಗಳ ಕನಸು ಇದೀಗ ನನಸಾಗಿದೆ. ಅಧಿಕೃತ ಉದ್ಘಾಟನೆಯಷ್ಟೇ ಬಾಕಿಯಿದೆ.