ಮಡಿಕೇರಿ, ಅ. ೨೭: ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ‘ನನ್ನ ಮಣ್ಣು, ನನ್ನ ದೇಶ’ (ಮೇರಿ ಮಾಟಿ, ಮೇರಾ ದೇಶ್) ಅಭಿಯಾನದ ಪ್ರಯುಕ್ತ ಕೊಡಗು ಜಿಲ್ಲೆಯ ೫ ತಾಲೂಕು ಗಳಿಂದ ಸಂಗ್ರಹಿಸಲಾದ ಮಾದರಿ ಮಣ್ಣಿನ ಬಿಂದಿಗೆಗಳನ್ನು ನವದೆಹಲಿಗೆ ತಲುಪಿಸುವ ಸಂಬAಧ ಜಿಲ್ಲಾಧಿಕಾರಿ ವೆಂಕಟ ರಾಜಾ ಅವರ ಸಮ್ಮುಖದಲ್ಲಿ ರಾಯಭಾರಿಗಳಿಗೆ ಹಸ್ತಾಂತರಿಸ ಲಾಯಿತು. ಜಿಲ್ಲಾಡಳಿತ, ನೆಹರು ಯುವ ಕೇಂದ್ರ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಅಂಚೆ ಕಚೇರಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ತಾಲೂಕು ಪಂಚಾಯಿತಿ ಮಡಿಕೇರಿ, ಜಿಲ್ಲಾ ಯುವ ಒಕ್ಕೂಟ, ತಾಲೂಕು ಯುವ ಒಕ್ಕೂಟ ಇವರ ವತಿಯಿಂದ ಆಯೋಜಿಸಲಾಗಿದ್ದ ‘ಮೇರ ದೇಶ್ ಮೇರ ಮಾಟಿ’ ಅಮೃತ್ ಕಲಶ ಯಾತ್ರೆಗೆ ಜಿಲ್ಲಾಧಿಕಾರಿ ಸಭಾಂಗಣ ದಲ್ಲಿ ಜಿಲ್ಲಾಧಿಕಾರಿ ವೆಂಕಟ್ ರಾಜ ಅವರು ಮಣ್ಣಿನ ಬಿಂದಿಗೆಯನ್ನು ಹಸ್ತಾಂತರಿಸಿ ಶುಭಕೋರಿ ಮಾತನಾಡಿದರು.

ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿರುವ ಪ್ರತಿಯೊಬ್ಬರಿಗೂ ಭದ್ರತೆ ನೀಡಬೇಕು. ಹಾಗೆಯೇ ವೈದ್ಯಕೀಯ ಸೌಲಭ್ಯ ಕಲ್ಪಿಸಬೇಕು ಎಂದು ಸಂಬAಧ ಪಟ್ಟವರಿಗೆ ನಿರ್ದೇಶನ ನೀಡಿದರು. ರಾಯಭಾರಿಗಳಾಗಿ ದೆಹಲಿಗೆ ಹೋಗುತ್ತಿರುವ ವಿದ್ಯಾರ್ಥಿಗಳಿಗೆ ಶುಭ ಹಾರೈಸಿ ಸುರಕ್ಷತೆ ಕಾಪಾಡಿಕೊಳ್ಳಲು ಸಲಹೆ ಮಾಡಿದರು.

ಅಮೃತ ಕಲಶ ಯಾತ್ರೆಯ ಪ್ರಯುಕ್ತ ವಿಭಿನ್ನತೆಯಲ್ಲಿ ಏಕತೆಯನ್ನು ಸಾರುವ ಸಂದೇಶದೊAದಿಗೆ ಜಿಲ್ಲೆಯ ಐದು ತಾಲೂಕುಗಳ ಮಣ್ಣನ್ನು ಸಂಗ್ರಹಿಸಲಾಗಿತ್ತು. ೫ ತಾಲೂಕಿನಿಂದ ವಿಶೇಷ ರಾಯಭಾರಿಗಳಾದ ಮೋಹಿತ್ ಮಾಚಯ್ಯ, ಜೋಶಿಕ್ ಗೋಣಿಕೊಪ್ಪ, ಕೌಶಿಕ್, ಯಕ್ಷಿತ್ ಹಾಕತ್ತೂರು, ಸುಜಿತ್ ಹೆಬ್ಬೆಟ್ಟಗೇರಿ, ರಾಯಭಾರಿಗಳಾದ ಅಜಿತ್, ಪ್ರೀತಮ್, ಸುನಿಲ್, ಕೃತಿಕ್, ಕಚೇರಿಯ ಸದಸ್ಯರನ್ನು ಒಟ್ಟುಗೂಡಿಸಿ ದೆಹಲಿಗೆ ಕಳುಹಿಸಿಕೊಡಲು ಏರ್ಪಡಿಸಲಾಯಿತು. ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಪಿ.ಪಿ. ಸುಕುಮಾರ್ ಮಾತನಾಡಿ, ಅಮೃತ ಮಹೋತ್ಸವ ನಡೆದ ದಿನಗಳಿಂದ ಇಲ್ಲಿಯವರೆಗೆ ಜಿಲ್ಲೆಯ ಯುವತಿ ಮಂಡಳಿ, ಮಹಿಳಾ ಸಮಾಜ ಹಾಗೂ ಶಾಲಾ-ಕಾಲೇಜುಗಳ ಸಹಭಾಗಿತ್ವದಲ್ಲಿ ಸಂಗ್ರಹಿಸಲಾದ ಮಣ್ಣನ್ನು ದೆಹಲಿಗೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದು, ಭಾಗಿಯಾದವರು ಜಿಲ್ಲೆಯ ಹೆಸರು ಮತ್ತು ಘನತೆಯನ್ನು ಪ್ರತಿಬಿಂಬಿಸಬೇಕೆAದು ಹೇಳಿ ಶುಭ ಹಾರೈಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್. ವೀಣಾ, ಅಂಚೆ ಇಲಾಖೆಯ ಹಿರಿಯ ಅಧಿಕಾರಿ ರವಿ, ಮಡಿಕೇರಿ ತಾ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಖರ್, ಜಿಲ್ಲಾ ಯುವ ಒಕ್ಕೂಟ ಸಲಹೆಗಾರರಾದ ಕಂದಾ ದೇವಯ್ಯ, ಎಂ.ಬಿ. ಜೋಯಪ್ಪ, ತಾಲೂಕು ಯುವ ಒಕ್ಕೂಟದ ಅಧ್ಯಕ್ಷ ದಿಲೀಪ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಖರ್, ಜಿಲ್ಲಾ ಯುವ ಒಕ್ಕೂಟ ಸಲಹೆಗಾರರಾದ ಕಂದಾ ದೇವಯ್ಯ, ಎಂ.ಬಿ. ಜೋಯಪ್ಪ, ತಾಲೂಕು ಯುವ ಒಕ್ಕೂಟದ ಅಧ್ಯಕ್ಷ ದಿಲೀಪ್