ಮಡಿಕೇರಿ, ಅ. ೨೮: ಗಾಂಜಾ ಮಾರಾಟ ಹಾಗೂ ಸರಬರಾಜು ಮಾಡುತ್ತಿದ್ದ ನಾಲ್ವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಕಲ್ಲುಬಾಣೆ ನಿವಾಸಿ ಮಹಮ್ಮದ್ ಅಲಿ (೫೪), ವೀರಾಜಪೇಟೆ ಅರಸುನಗರ ನಿವಾಸಿ ಸಂದೀಪ ಜಂಗ್ಲಿ (೨೮), ಬಿಳುಗುಂದದ ಅಶೋಕ (೫೦), ವೀರಾಜಪೇಟೆ ಸುಂಕದಕಟ್ಟೆ ನಿವಾಸಿ ಮಹೇಶ್ (೩೫) ಬಂಧಿತ ಆರೋಪಿಗಳು.

ಆರ್ಜಿ-ಗದ್ದೆಹಳ್ಳ ರಸ್ತೆ ಬಳಿಕ ಗಾಂಜಾ ಮಾರಾಟ ಸಂದರ್ಭ ದಾಳಿ ನಡೆಸಿದ ಪೊಲೀಸರು ೧ ಕೆಜಿ ೧೨೪ ಗ್ರಾಂ ತೂಕದ ಗಾಂಜಾ ಸಹಿತ ಆರೋಪಿಗಳನ್ನು ಬಂಧಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.

ಮಾದಕ ವಸ್ತು ತಡೆಗಟ್ಟುವ ನಿಟ್ಟಿನಲ್ಲಿ ವೀರಾಜಪೇಟೆ ಉಪವಿಭಾಗ ಡಿವೈಎಸ್‌ಪಿ ಆರ್. ಮೋಹನ್ ಕುಮಾರ್, ವೀರಾಜಪೇಟೆ ವೃತ್ತ ನಿರೀಕ್ಷಕ ಬಿ.ಎಸ್. ಶಿವರುದ್ರಪ್ಪ, ಉಪನಿರೀಕ್ಷಕರುಗಳಾದ ರವೀಂದ್ರ, ಪಿ.ಕೆ. ಗಣಪತಿ ಹಾಗೂ ಸಿಬ್ಬಂದಿಗಳ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು.