ಸಂಪಾಜೆ, ಅ. ೨೮ : ಮಲೇಷ್ಯಾದಲ್ಲಿ ನೆಲೆಸಿರುವ ಕೊಡಗು ಸಂಪಾಜೆ ಮೂಲದ ಚೈತ್ರಾ ದೇವಜನ ಅವರು ಈ ಬಾರಿಯ ಮಿಸೆಸ್ ಮಲೇಷ್ಯಾ ಫೈನಲಿಸ್ಟ್ಗಳಲ್ಲಿ ಒಬ್ಬರಾಗಿ ಆಯ್ಕೆ ಆಗಿದ್ದಾರೆ. ಸಂಪಾಜೆ ಹಿರಿಯ ಪ್ರಾಥಮಿಕ ಶಾಲೆ, ಅರಂತೋಡು ಎನ್‌ಎಂಪಿಯುಸಿ ಹಳೆ ವಿದ್ಯಾರ್ಥಿನಿಯಾಗಿರುವ ಚೈತ್ರಾ ಅವರು ನಿಟ್ಟೆಯಲ್ಲಿ ಇಲೆಕ್ಟಿçಕಲ್ ಇಂಜಿನಿಯರಿAಗ್, ಪಿಳನಿ ಶ್ರೀಧರ್ ಯುನಿವರ್ಸಿಟಿಯಲ್ಲಿ ಬಿ.ಟೆಕ್ ಹಾಗೂ ಮುಂಬೈಯ ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್‌ನಲ್ಲಿ ಎಂಬಿಎ ಪೂರೈಸಿದ್ದು, ಗುಜರಾತ್‌ನ ಸೂರತ್‌ನಲ್ಲಿ ೮ ವರ್ಷ ಹಾಗೂ ಬೆಂಗಳೂರಿನಲ್ಲಿ ೧ ವರ್ಷ ವಿವಿಧ ಕಂಪೆನಿಗಳ ಇಂಜಿನಿಯರಿAಗ್ ಕ್ಷೇತ್ರದಲ್ಲಿ ವೃತ್ತಿ ನಿರ್ವಹಿಸಿದ್ದಾರೆ.
ಮಿಸೆಸ್ ಮಲೇಷ್ಯಾ ಫೈನಲಿಸ್ಟ್ ಆಗಿ ಸಂಪಾಜೆಯ ಚೈತ್ರಾ ದೇವಜನ, ಸ್ಪರ್ಧಾ ಕಣದಲ್ಲಿರುವ ಏಕೈಕ ಭಾರತೀಯ ಮಹಿಳೆ, ಬಹುಮುಖ ಪ್ರತಿಭೆಯಾಗಿರುವ ಚೈತ್ರಾರವರು ಮಿಸೆಸ್ ಮಲೇಷ್ಯಾ ಸ್ಪರ್ಧೆಗೆ ಆಯ್ಕೆಯಾಗಿ ಹಲವು ಹಂತಗಳಲ್ಲಿ ಸ್ಪರ್ಧಿಸಿ ಫೈನಲಿಸ್ಟ್ ಆಗಿದ್ದು, ನ. ೧ ರಿಂದ ೫ ರವರೆಗೆ ಫೈನಲ್ ಸ್ಪರ್ಧೆ ನಡೆಯಲಿದೆ.
ಸಂಪಾಜೆಯ ದೇವಜನ ದಿ. ಜಯಸೂರ್ಯ ಮತ್ತು ದಿ. ನಾಗವೇಣಿ ದಂಪತಿಯ ಪುತ್ರಿಯಾಗಿರುವ ಚೈತ್ರಾರವರು ಹೈದರಾಬಾದ್ ಮೂಲದ ರಾಜೇಂದ್ರ ಪ್ರಸಾದ್ ಅವರೊಂದಿಗೆ ವಿವಾಹವಾಗಿ ಕಳೆದ ಏಳು ವರ್ಷಗಳಿಂದ ಮಲೇಷ್ಯಾದ ಕುವಾಲಾಂಪುರದಲ್ಲಿ ನೆಲೆಸಿದ್ದಾರೆ.