ಸಿದ್ದಾಪುರ, ಅ. ೨೮: ಕರಡಿಗೋಡು ಗ್ರಾಮದಲ್ಲಿ ಹುಲಿ ಕಂಡುಬAದ ಹಿನ್ನೆಲೆಯಲ್ಲಿ ಅರಣ್ಯ ಇಲಾಖಾಧಿಕಾರಿಗಳು ಹಾಗೂ ಸಿಬ್ಬಂದಿ ಶನಿವಾರ ಕೂಂಬಿAಗ್ ನಡೆಸಿದರು. ಕರಡಿಗೋಡು ಗ್ರಾಮದಲ್ಲಿ ಶುಕ್ರವಾರದಂದು ಹಾಡಹಗಲೇ ಕಾಫಿ ತೋಟದೊಳಗೆ ಹುಲಿಯೊಂದು ಸಂಚರಿಸಿರುವುದನ್ನು ಕಂಡ ಗ್ರಾಮಸ್ಥರು ಭಯಭೀತರಾಗಿದ್ದರು. ಸ್ಥಳೀಯರು ಈ ಬಗ್ಗೆ ಅರಣ್ಯ ಇಲಾಖಾಧಿಕಾರಿಗಳಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಶನಿವಾರದಂದು ಬೆಳಗ್ಗಿನಿಂದಲೇ ಅರಣ್ಯ ಇಲಾಖಾಧಿಕಾರಿಗಳು ಹಾಗೂ ಸಿಬ್ಬಂದಿ ಕರಡಿಗೋಡು ಗ್ರಾಮದ ಕಾಫಿ ತೋಟಗಳಲ್ಲಿ ಹಾಗೂ ಸುತ್ತಮುತ್ತಲಿನ ಕಾಫಿ ತೋಟಗಳಲ್ಲಿ ಕೂಂಬಿAಗ್ ಕಾರ್ಯಾಚರಣೆ ನಡೆಸಿದರು. ಆದರೆ, ಹುಲಿ ಪತ್ತೆಯಾಗಲಿಲ್ಲ. ಈ ಹುಲಿಯು ಸಮೀಪದ ಅರಣ್ಯ ಪ್ರದೇಶದಿಂದ ಕಾಫಿ ತೋಟದೊಳಕ್ಕೆ ಬರುತ್ತಿರುವ ಬಗ್ಗೆ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಹುಲಿಯು ಗ್ರಾಮದಲ್ಲಿ ಪ್ರತ್ಯಕ್ಷಗೊಂಡಿರುವುದರಿAದ ಆತಂಕ ಸೃಷ್ಠಿಯಾಗಿದೆ. ಸಂಜೆ ವೇಳೆ ಗ್ರಾಮಸ್ಥರು ಓಡಾಡಲು ಭಯಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕರಡಿಗೋಡು ಗ್ರಾಮಸ್ಥರು ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ವೀರಾಜಪೇಟೆ ಡಿ.ಸಿ.ಎಫ್. ಶರಣ ಬಸಪ್ಪ, ಹುಲಿಯು ಕಾಫಿ ತೋಟದೊಳಗೆ ಸಂಚರಿಸಿರುವ ಬಗ್ಗೆ ಮಾಹಿತಿ ಬಂದಿದೆ. ಇದೀಗ ಅರಣ್ಯ ಇಲಾಖಾಧಿಕಾರಿಗಳು, ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಹುಲಿಯ ಚಲನವಲನ ಕಂಡುಹಿಡಿಯಲು ಆ ಭಾಗದಲ್ಲಿ ಸಧ್ಯದಲ್ಲೇ ಕ್ಯಾಮೆರಾ ಅಳವಡಿಸಲಾಗುವುದೆಂದು ತಿಳಿಸಿದ್ದಾರೆ.

ಕ್ಯಾಮೆರಾಗಳಲ್ಲಿ ಚಿತ್ರ ಸೆರೆಯಾದ ಬಳಿಕ ಮೇಲಾಧಿಕಾರಿಗಳ ಅನುಮತಿ ಪಡೆದು ಹುಲಿ ಸೆರೆಗೆ ಬೋನ್ ಅಳವಡಿಸಲು ನಿರ್ಧರಿಸಲಾಗುವುದೆಂದು ಶರಣ ಬಸಪ್ಪ ಹೇಳಿದರು.

ಕಾಡಾನೆಗಳ ಹಾವಳಿಯಿಂದ ತತ್ತರಿಸಿರುವ ಕರಡಿಗೋಡು ಗ್ರಾಮದಲ್ಲಿ ಇದೀಗ ಹುಲಿಯ ಸಂಚಾರ ಆತಂಕ ಹೆಚ್ಚಿಸಿದ್ದು,

(ಮೊದಲ ಪುಟದಿಂದ) ಕಾಡುಕೋಣಗಳ ಹಿಂಡು ಕಾಫಿ ತೋಟಗಳಲ್ಲಿ ಬೀಡುಬಿಟ್ಟು ದಾಂಧಲೆ ನಡೆಸುತ್ತಿವೆ ಎಂದು ಕಾಫಿ ಬೆಳೆಗಾರ ನಡಿಕೇರಿಯಂಡ ವಿಕ್ರಂ ತಿಳಿಸಿದ್ದಾರೆ.

ಸಲಗ ಸೆರೆಗೆ ಕಾರ್ಯಾಚರಣೆ

ಇತ್ತೀಚೆಗೆ ಸಿದ್ದಾಪುರ ಸಮೀಪದ ಬಾಡಗ - ಬಾಣಂಗಾಲ ಗ್ರಾಮದ ಮಠ ಎಂಬಲ್ಲಿ ವೃದ್ಧೆ ಮಹಿಳೆಯನ್ನು ದಾಳಿ ನಡೆಸಿ ಕೊಂದಿರುವ ಒಂಟಿ ಸಲಗವೊಂದನ್ನು ಸೆರೆ ಹಿಡಿಯಲು ಕಾರ್ಯಾಚರಣೆ ನಡೆಸಲಾಗುವುದು ಎಂದು ವೀರಾಜಪೇಟೆ ಡಿ.ಸಿ.ಎಫ್. ಶರಣ ಬಸಪ್ಪ ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ.

ಕಾರ್ಯಾಚರಣೆಯಲ್ಲಿ ಭಾಗವಹಿಸುವ ಸಾಕಾನೆಗಳು ದಸರಾಕ್ಕೆ ಮೈಸೂರಿಗೆ ತೆರಳಿ, ಇದೀಗ ಶಿಬಿರಕ್ಕೆ ಆಗಮಿಸಿದ್ದು, ಮುಂದಿನ ವಾರ ಸಾಕಾನೆಗಳ ನೆರವಿನಿಂದ ಸಲಗದ ಸೆರೆಗೆ ಕಾರ್ಯಾಚರಣೆ ನಡೆಸಲು ಅರಣ್ಯ ಇಲಾಖೆ ತೀರ್ಮಾನಿಸಿದೆ. -ಎ.ಎನ್. ವಾಸು