ನಾಪೋಕ್ಲು, ಅ. ೩೦: ನಾಪೋಕ್ಲು ಬೊಟ್ಟೋಳಂಡ ಕುಟುಂಬದ ವತಿಯಿಂದ ನಾಪೋಕ್ಲು ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ೨೦೨೪ರ ಏಪ್ರಿಲ್ನಲ್ಲಿ ನಡೆಯಲಿರುವ ಮೂರನೇ ವರ್ಷದ ಕೊಡವ ಕೌಟುಂಬಿಕ ಹಗ್ಗ ಜಗ್ಗಾಟ ಕ್ರೀಡಾಕೂಟದ ಲಾಂಛನವನ್ನು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ರಾಜ್ಯ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಬಿಡುಗಡೆಗೊಳಿಸಿದರು.
ಮಡಿಕೇರಿ ಹೊರವಲಯದ ರೆಸಾರ್ಟ್ವೊಂದರಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಎ.ಎಸ್.ಪೊನ್ನಣ್ಣ, ರಾಜ್ಯ ಸರಕಾರದ ಚೀಫ್ ಎಲೆಕ್ಟಿçಕಲ್ ಇನ್ಸ್ಪೆಕ್ಟರ್ ರೋಷನ್ ಅಪ್ಪಚ್ಚು. ಹಗ್ಗಜಗ್ಗಾಟ ಅಕಾಡೆಮಿ ಅಧ್ಯಕ್ಷ ಪೊನ್ನೋಲತಂಡ ಕಿರಣ್ ಪೊನ್ನಪ್ಪ ಅವರನ್ನು ಬೊಟ್ಟೋಳಂಡ ಕುಟುಂಬದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಬೊಟ್ಟೋಳಂಡ ಕುಟುಂಬದ ಹಿರಿಯರಾದ ಅಚ್ಚಿ ಪೂಣಚ್ಚ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುಟುಂಬದ ಸದಸ್ಯರಾದ ಮಿಟ್ಟು ಚಂಗಪ್ಪ, ವಾಸು ಮುತ್ತಪ್ಪ, ಡಾಲು ಸೋಮಯ್ಯ, ಲಿಂಗಪ್ಪ, ನೈಲಾ ಗಣೇಶ್, ರಮೇಶ್ ಪೊನ್ನಯ್ಯ ರಂಜಿ ಪಳÀಂಗಪ್ಪ, ಚೇತು ಗಣಪತಿ, ತೀತಿರ ಶರ್ಮಿಳ ಮತ್ತಿತರರಿದ್ದರು.