ಕುಶಾಲನಗರ, ಅ. ೨೯: ವೀರಶೈವ, ಲಿಂಗಾಯತ ಪ್ರತ್ಯೇಕ ಧರ್ಮ ಅಥವಾ ಜಾತಿಯಲ್ಲ. ಎರಡೂ ಒಂದೇ ಧರ್ಮವಾಗಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟಿçÃಯ ಉಪಾಧ್ಯಕ್ಷ ನಿವೃತ್ತ ಪೊಲೀಸ್ ಅಧಿಕಾರಿ ಶಂಕರ ಮಹದೇವ ಬಿದಿರಿ ಅವರು ಕುಶಾಲನಗರದಲ್ಲಿ ಹೇಳಿದರು. ಅಖಿಲ ಭಾರತ ವೀರಶೈವ- ಲಿಂಗಾಯತ ಮಹಾಸಭಾದ ಕೊಡಗು ಜಿಲ್ಲಾ ಘಟಕದ ವತಿಯಿಂದ ಕುಶಾಲನಗರ ರೈತ ಸಹಕಾರ ಭವನದಲ್ಲಿ ಏರ್ಪಡಿಸಿದ್ದ ಹಾನಗಲ್ ಶ್ರೀ ಕುಮಾರಸ್ವಾಮಿಗಳ ೧೫೬ನೇ ಜಯಂತಿ ಮತ್ತು ಸಿದ್ದಗಂಗಾಮಠದ ಡಾ. ಶಿವಕುಮಾರ ಸ್ವಾಮೀಜಿಯವರ ಸ್ಮರಣೋತ್ಸವ ಹಾಗೂ ವೀರಶೈವ ಧಾರ್ಮಿಕ ಜನಜಾಗೃತಿ ಸಭೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ವೀರಶೈವ ಲಿಂಗಾಯತ ಸಮಾಜವು ಎಲ್ಲರಿಗೂ ಪ್ರೀತಿ ಹಂಚುವ ಸಮಾಜವಾಗಿದೆ. ಸಮಾಜದ ಪ್ರತಿಯೊಬ್ಬರು ಶೈಕ್ಷಣಿಕ ಹಾಗೂ ಸಾಂಸ್ಕೃತಿಕವಾಗಿ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಪ್ರಯತ್ನಿಸಬೇಕಿದೆ. ಎಲ್ಲರ ಒಗ್ಗಟ್ಟಿನಿಂದ ಮಾತ್ರ ಸಮಾಜ ಉಳಿಯಲು ಸಾಧ್ಯ. ಪ್ರತಿಯೊಬ್ಬರೂ ಸಮಾಜದ ಸುಧಾರಣೆಗೆ ಕಂಕಣಬದ್ಧರಾಗಿ ದುಡಿಯುವ ಮೂಲಕ ದುರ್ಬಲ ಸಮಾಜದ ಅಭಿವೃದ್ಧಿಗೆ ಎಲ್ಲರೂ ಸಂಘಟಿತರಾಗಿ ಶ್ರಮಿಸಬೇಕು ಎಂದು ಶಂಕರ ಬಿದರಿ ಕರೆ ನೀಡಿದರು.
ಲೇಖಕ ಸುಳ್ಯದ ಡಾ. ಬಿ.ಪ್ರಭಾಕರ ಶಿಶಿಲ ರಚಿತ ೩ಐದನೇ ಪುಟಕ್ಕೆ
(ಮೊದಲ ಪುಟದಿಂದ) ಐತಿಹಾಸಿಕ ಕಾದಂಬರಿ ಕೊಡಗಿನ ಲಿಂಗರಾಜ ಎಂಬ ಕೃತಿ ಹಾಗೂ ಸೋಮವಾರಪೇಟೆಯ ನಿವೃತ್ತ ಮುಖ್ಯ ಶಿಕ್ಷಕಿ ಜಲಜಾ ಶೇಖರ್ ಅವರ ‘ನೆಲ ಮುಗಿಲು’ ಕವನ ಸಂಕಲನ ಪುಸ್ತಕ ಗಳನ್ನು ಬಿಡುಗಡೆ ಮಾಡಿದ ಕೊಡಗು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಅಶೋಕ ಸಂ.ಆಲೂರು ಮಾತನಾಡಿ, ವೀರಶೈವ ಸಮಾಜವು ಕಾಯಕ ಹಾಗೂ ದಾಸೋಹ ಕಾರ್ಯಕ್ಕೆ ಮಾದರಿಯಾಗಿದೆ.
ಶಾಸಕ ಡಾ. ಮಂಥರ್ ಗೌಡ ಮಾತ ನಾಡಿ, ಎಲ್ಲರೂ ಜೊತೆಗೂಡಿ ಸಮಾ ಜದ ಅಭಿವೃದ್ಧಿಗೆ ಶ್ರಮಿಸಬೇಕು. ವೈಯಕ್ತಿ ಕವಾಗಿ ಹಾಗೂ ಸರ್ಕಾರದ ವತಿ ಯಿಂದ ವೀರಶೈವ ಸಮಾಜದ ಅಭಿವೃ ದ್ಧಿಗೆ ಪ್ರಯತ್ನಿಸಲಾಗುವುದು ಎಂದರು.
ಲೇಖಕ ಸುಳ್ಯದ ಡಾ ಬಿ.ಪ್ರಭಾಕರ ಶಿಶಿಲ, ರಾಜರ ಕಾಲದಲ್ಲಿ ಕೊಡಗು ರಾಜ್ಯದ ಆಳ್ವಿಕೆ ಕುರಿತು ಸಂಕ್ಷಿಪ್ತವಾಗಿ ವಿವರಿಸಿದರು.
ಅರಮೇರಿ ಕಳಂಚೇರಿ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ಮಾತನಾಡಿ, ಸಮಾಜದಲ್ಲಿ ಎಲ್ಲರೂ ಸತ್ಕಾರ್ಯ ಗಳನ್ನು ಮಾಡುವ ಮೂಲಕ ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು ಎಂದರು.
ದಿವ್ಯಸಾನಿಧ್ಯ ವಹಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದ ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಮಾತನಾಡಿ, ಕ್ರೀಡೆಗಳ ಮೂಲಕ ಸಮಾಜದ ಸಂಘಟನೆ ಕಾರ್ಯಸಾಧ್ಯ. ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡವರಿಗೆ ಗೌರವ ನೀಡುವುದು ಮತ್ತು ಜನಾಂಗದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸುವುದು ಸಮಾಜದ ಪ್ರಮುಖ ಕೆಲಸವಾಗಿದೆ ಎಂದರು. ಹೈಕೋರ್ಟ್ ಹಿರಿಯ ವಕೀಲ ಎಚ್.ಎಸ್. ಚಂದ್ರಮೌಳಿ, ಮಾತನಾಡಿದರು.
ಕಲ್ಮಠದ ಮಹಾಂತ ಸ್ವಾಮೀಜಿ, ಕಲ್ಲಳ್ಳಿ ಮಠದ ರುದ್ರಮುನಿ ಸ್ವಾಮೀಜಿ, ಮಹಾಸಭಾದ ರಾಜ್ಯ ಘಟಕದ ಕಾರ್ಯದರ್ಶಿ ರಾಜೇಶ್ವರಿ ನಾಗರಾಜ್, ಮಹಾಸಭಾದ ಮಹಿಳಾ ಘಟಕದ ಅಧ್ಯಕ್ಷೆ ಮಮತಾ ಸತೀಶ್ ಇದ್ದರು.
ಮಹಾಸಭಾದ ಜಿಲ್ಲಾಧ್ಯಕ್ಷ ಎಚ್.ವಿ.ಶಿವಪ್ಪ ಅಧ್ಯಕ್ಷತೆ ವಹಿಸಿದ್ದರು.
ಅಂತರರಾಷ್ಟಿçÃಯ ರಸಾಯನ ಶಾಸ್ತç ವಿಜ್ಞಾನಿಯಾದ ಮಡಿಕೇರಿ ಎಫ್.ಎಂ.ಸಿ. ಕಾಲೇಜಿನ ರಸಾಯನ ಶಾಸ್ತç ವಿಭಾಗದ ಮುಖ್ಯಸ್ಥ ಡಾ ಜೆ.ಜಿ.ಮಂಜುನಾಥ್, ಮಹಾಸಭಾದ ರಾಜ್ಯ ಸಮಿತಿ ಕಾರ್ಯದರ್ಶಿ ರಾಜೇಶ್ವರಿ ನಾಗರಾಜ್, ಮಹಾಸಭಾದ ಮಹಿಳಾ ಘಟಕದ ಅಧ್ಯಕ್ಷೆ ಮಮತಾ ಸತೀಶ್, ಯುವ ಘಟಕದ ನಿರ್ದೇಶಕ ವಿರೂಪಾಕ್ಷ, ಜಿಲ್ಲಾ ಮಹಾಸಭಾದ ಮಾಜಿ ಅಧ್ಯಕ್ಷ ಡಿ.ಬಿ. ಧರ್ಮಪ್ಪ, ಉಪಾಧ್ಯಕ್ಷರಾದ ಜಿ.ಎಂ.ಕಾAತರಾಜು, ಎಸ್.ಎಸ್. ಸುರೇಶ್, ಪ್ರಧಾನ ಕಾರ್ಯದರ್ಶಿ ಟಿ.ಎಸ್. ಶಾಂಭಶಿವ ಮೂರ್ತಿ, ಖಜಾಂಚಿ ಎಚ್.ಪಿ. ಉದಯಕುಮಾರ್, ಕಾರ್ಯದರ್ಶಿ ಜೆ.ಸಿ. ಶೇಖರ್, ಮಹಾಸಭಾದ ತಾಲ್ಲೂಕು ಅಧ್ಯಕ್ಷರಾದ ಕೆ.ಬಿ. ಹಾಲಪ್ಪ, ಕೆ.ಎಸ್. ಸಂದೀಪ್, ರುದ್ರಪ್ರಸನ್ನ, ವಿವಿಧ ಘಟಕಗಳ ಪ್ರಮುಖರಾದ ಎಚ್.ಎಂ. ಮಧುಸೂದನ್, ಎಸ್. ನಂದೀಶ್, ಮೋಕ್ಷಿತ್ ರಾಜ್, ಆದರ್ಶ್, ಪ್ರದೀಪ್, ಕಟ್ಟಡದ ದಾನಿಗಳಾದ ಸುಶೀಲಮ್ಮ ಮತ್ತು ಎಂ.ಬಿ. ಬಸವರಾಜ್, ಮಹಾಸಭಾದ ನಿರ್ದೇಶಕ ಎಂ.ಮಹದೇವಪ್ಪ, ವೀರ ಶೈವ ಸಮಾಜದ ವಿವಿಧ ಘಟಕಗಳ ಪದಾಧಿಕಾರಿಗಳು, ಇತರರು ಇದ್ದರು.
ಶಿಕ್ಷಕಿಯರಾದ ಬಿ.ಬಿ. ಹೇಮ ಲತಾ, ಡಿ.ಎಂ. ಮಹಾದೇವಿ ಕಾರ್ಯ ಕ್ರಮ ನಿರೂಪಿಸಿದರು. ಮಹಾಸಭಾದ ಉಪಾಧ್ಯಕ್ಷ ಜಿ.ಎಂ. ಕಾಂತರಾಜು ಸ್ವಾಗತಿಸಿದರು. ಕುಶಾಲನಗರ ಅಕ್ಕನ ಬಳಗದ ಸದಸ್ಯರು ಪ್ರಾರ್ಥಿಸಿದರು.
ಸಾಧಕರಿಗೆ ಸನ್ಮಾನ: ರಸಾಯನ ಶಾಸ್ತçದಲ್ಲಿ ಉತ್ತಮ ಸಾಧನೆ ಮಾಡಿರುವ ಅಂತರರಾಷ್ಟಿçÃಯ ವಿಜ್ಞಾನಿಯಾದ ಮಡಿಕೇರಿ ಎಫ್.ಎಂ.ಸಿ. ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ ಜೆ.ಜಿ. ಮಂಜುನಾಥ್, ಸಮಾಜ ಸೇವಕರಾದ ಶಿರಂಗಾಲ ಗ್ರಾ.ಪಂ.ಮಾಜಿ ಅಧ್ಯಕ್ಷ ಎಸ್.ವಿ.ನಂಜುAಡಪ್ಪ, ಕುಟ್ಟದ ಹಿರಿಯ ನಾಗರಿಕ ಮಹದೇವಪ್ಪ, ಜೆ.ಸಿ.ಐ. ಸಂಸ್ಥೆಯ ವಲಯ ಉಪಾಧ್ಯಕ್ಷರಾದ ಕೂಡುಮಂಗಳೂರಿನ ಕೆ.ಡಿ. ಪ್ರಶಾಂತ್, ಹೆಬ್ಬುಲುಸೆ ಪಟೇಲ್ ತಮ್ಮಯ್ಯ, ಹೊಸಪಟ್ಟಣದ ಪೂರ್ಣಿಮ ಶಿವಕುಮಾರ್, ಸೋಮವಾರಪೇಟೆಯ ನಿವೃತ್ತ ಮುಖ್ಯ ಶಿಕ್ಷಕಿ ಜಲಜಾ ಶೇಖರ್ ಅವರನ್ನು ಮಹಾಸಭಾದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಗಮನ ಸೆಳೆದ ಮೆರವಣಿಗೆ: ಜನ ಜಾಗೃತಿ ಸಭೆಗೆ ಮುನ್ನ ಕುಶಾಲನಗರ ಪಟ್ಟಣದ ಬಸವೇಶ್ವರ ದೇವಾಲಯದ ಬಳಿಯಿಂದ ಪಟ್ಟಣದ ಮುಖ್ಯ ರಸ್ತೆಯ ಮೂಲಕ ಬೆಳ್ಳಿರಥದ ಮೂಲಕ ಮೆರವಣಿಗೆ ನಡೆಸಲಾಯಿತು.
ಹಾನಗಲ್ ಶ್ರೀ ಕುಮಾರಸ್ವಾಮಿ ಗಳ ೧೫೬ನೇ ಜಯಂತಿ ಹಾಗೂ ಡಾ ಶಿವಕುಮಾರ ಸ್ವಾಮೀಜಿ ಜಯಂತಿ ಅಂಗವಾಗಿ ಬೆಳ್ಳಿರಥದಲ್ಲಿ ಸಂತ ಶ್ರೇಷ್ಠ ಸ್ವಾಮೀಜಿಗಳ ಭಾವಚಿತ್ರವನ್ನು ಇಟ್ಟು ಮೆರವಣಿಗೆ ನಡೆಸಲಾಯಿತು.
ಮೆರವಣಿಗೆಯಲ್ಲಿ ಮಹಿಳೆಯರು ಕಳಶ ಹೊತ್ತು ಸಾಗಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗ ದೊಂದಿಗೆ ಚಾಮರಾಜನಗರದ ಬೆಟ್ಟಹಳ್ಳಿ ಮಾರಮ್ಮನ ಕಲಾವಿದ ಬಾಲು ನೇತೃತ್ವದಲ್ಲಿ ಪ್ರದರ್ಶಿಸಿದ ಡೊಳ್ಳು ಕುಣಿತ ಗಮನ ಸೆಳೆಯಿತು.
ಎಚ್.ಡಿ.ಕೋಟೆ ತಾಲೂಕಿನ ಹಳೆ ಹೆಗ್ಗುಡಿಲು ಗ್ರಾಮದ ಕಲಾವಿದ ನೀಲಕಂಠ ನೇತೃತ್ವದಲ್ಲಿ ಪ್ರದರ್ಶಿಸಿದ ವೀರಗಾಸೆ ನೃತ್ಯ ಪ್ರದರ್ಶನ ಜನರ ಗಮನ ಸೆಳೆಯಿತು.