ಗೋಣಿಕೊಪ್ಪ ವರದಿ, ಅ. ೨೯: ಅರಮಣಮಾಡ ಕ್ರಿಕೆಟ್ ನಮ್ಮೆ ಲಾಂಛನವನ್ನು ಭಾನುವಾರ ಬಾಳೆಲೆ ಕೊಡವ ಸಮಾಜದಲ್ಲಿ ಬಿಡುಗಡೆಗೊಳಿಸಲಾಯಿತು.
೨೨ನೇ ವರ್ಷದ ಕೊಡವ ಕೌಟುಂಬಿಕ ನಮ್ಮೆಯಾಗಿದ್ದು, ಎಪ್ರಿಲ್-ಮೇ ತಿಂಗಳಲ್ಲಿ ಬಾಳೆಲೆ ವಿಜಯಲಕ್ಷಿö್ಮ ಕಾಲೇಜು ಮತ್ತು ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಕ್ರಿಕೆಟ್ ನಮ್ಮೆ ನಡೆಸಲಾಗುವುದು ಎಂದು ಪ್ರಕಟಿಸಲಾಯಿತು. ವಿಶೇಷವಾಗಿ ಮೊದಲ ಬಾರಿಗೆ ಕೊಡವ ಮಹಿಳೆಯರಿಗೆ ಪ್ರತ್ಯೇಕ ಕ್ರಿಕೆಟ್ ಟೂರ್ನಿ ನಡೆಸಲಾಗುವುದು. ಪುರುಷರು ಮತ್ತು ಮಹಿಳೆಯರಿಗೆ ಒಂದೇ ಅವಧಿಯಲ್ಲಿ ಟೂರ್ನಿ ನಡೆಸಲಾಗುತ್ತದೆ. ಮಹಿಳಾ ಕ್ರಿಕೆಟ್‌ಗೆ ಪೋತ್ಸಾಹದ ಅಗತ್ಯ ಇದೆ ಎಂದು ಪ್ರಕಟಿಸಲಾಯಿತು. ಕುಟುಂಬದ ಸದಸ್ಯರು, ತವರು ಮನೆ ಹುಡುಗಿಯರು ಪಾಲ್ಗೊಂಡು ಸಂಭ್ರಮಿಸಿದರು.
ವೀರಾಜಪೇಟೆ ಶಾಸಕ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ ಲಾಂಛನ ಬಿಡುಗಡೆಗೊಳಿಸಿ ಮಾತನಾಡಿ, ಕ್ರೀಡೆ ಕೂಡ ಸಂಸ್ಕೃತಿಯ ಭಾಗವಾಗಿದೆ. ಕೊಡವ ಕ್ರಿಕೆಟ್ ಆಯೋಜನೆ ಮಾಡಿಕೊಂಡು ಮುಂದುವರಿಯುತ್ತಿರುವುದರಿAದ ಸ್ಥಳಿಯ ಪ್ರತಿಭೆಗಳಿಗೆ ಪ್ರೋತ್ಸಾಹ ದೊರೆಯುತ್ತಿದೆ. ಕ್ರೀಡೆಯಲ್ಲಿ ಪ್ರತಿಭೆಗೆ ತಕ್ಕ ಅವಕಾಶದ ಕೊರತೆ ಇದ್ದು, ನೀಗಿಸುವ ಪ್ರಯತ್ನ ನಡೆಸಲಾಗುವುದು ಎಂದರು.
ಟೂರ್ನಿ ಅಧ್ಯಕ್ಷ ಸುರೇಶ, ಕುಟುಂಬ ಅಧ್ಯಕ್ಷರಾದ ಮುತ್ತು ಗಣಪತಿ, ರಾಮು, ಸಂಚಾಲಕರಾದ ದಿನು ಬೆಳ್ಯಪ್ಪ, ಸುಗುಣ ಗಣಪತಿ ಇದ್ದರು.