ಕೂಡಿಗೆ, ಅ. ೨೯: ಕುಶಾಲನಗರ ಹಾರಂಗಿ ರಸ್ತೆಯ ಅಗಲೀಕರಣ ಮತ್ತು ಸಮರ್ಪಕವಾದ ರೀತಿಯಲ್ಲಿ ಡಾಂಬರಿಕರಣ ವ್ಯವಸ್ಥೆ ಮತ್ತು ಅವಶ್ಯಕತೆ ಇರುವ ಸ್ಥಳಗಳಲ್ಲಿ ಮೋರಿಗಳ ನಿರ್ಮಾಣ ಸೇರಿದಂತೆ ಅನೇಕ ಕಾಮಗಾರಿಗಳು ಈಗಾಗಲೇ ಹಾರಂಗಿ ಕುಶಾಲನಗರ ರಸ್ತೆಯಲ್ಲಿ ನಡೆದಿದೆ.

ನೀರಾವರಿ ಇಲಾಖೆಯ ಮುಖೇನ ರೂ. ೧೦ ಕೋಟಿ ವೆಚ್ಚದ ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆಯು ನಡೆದು ಟೆಂಡರ್‌ನ ನಿಯಮಾನುಸಾರ ಕಾಮಗಾರಿಗಳು ನಡೆಯುತ್ತಿವೆ. ಆದರೆ ಇನ್ನೂ ಬಾಕಿ ಇರುವ ಕಾಮಗಾರಿ ನಡೆಯದೆ ಆ ಭಾಗದ ರಸ್ತೆ ದೂಳುಮಯವಾಗಿ ವಾಹನ ಚಾಲನೆಗೆ ತೊಂದರೆ ಆಗುತ್ತಿವೆ. ಈಗಾಗಲೇ ಅಪೂರ್ಣಗೊಂಡಿರುವ ಹಾರಂಗಿ ಕುಶಾಲನಗರ ರಸ್ತೆಯ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಲು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಕುಶಾಲನಗರ ಹಾರಂಗಿಯ ರಸ್ತೆಯ ಮೂಲಕ ಸಾವಿರಾರು ಪ್ರವಾಸಿಗರ ವಾಹನಗಳು ಮತ್ತು ಸುತ್ತಲಿನ ಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ವಾಹನಗಳ ಚಾಲನೆಗೆ ಬಾರಿ ತೊಂದರೆಗಳು ಆಗುತ್ತಿವೆ ಗುತ್ತಿಗೆದಾರ ಈಗಾಗಲೇ ನಾಲ್ಕು ಕಿಲೋಮೀಟರ್ ದೂರದವರೆಗೆ ಕಾಮಗಾರಿಯನ್ನು ಪೂರ್ಣಗೊಳಿಸಿರುತ್ತಾರೆ. ಆದರೆ ಉಳಿದ ಭಾಗದಲ್ಲಿ ಇಲಾಖೆಯ ನಿಯಮಾನುಸಾರವಾಗಿ ರಸ್ತೆಗೆ ಪಕ್ಕದಲ್ಲಿರುವ ವಿದ್ಯುತ್ ಕಂಬಗಳ ತೆರವುಗೊಳಿಸುವಂತೆ ಅದಕ್ಕೆ ಸಂಬAಧಿಸಿದ ಟೆಂಡರ್‌ದಾರರಿಗೆ ಮನವಿಯನ್ನು ಸಲ್ಲಿಸಿದರೂ ಇದುವರೆಗೂ ಯಾವುದೇ ವಿದ್ಯುತ್ ಕಂಬಗಳು ತೆರವುಕೊಳ್ಳದೆ ರಸ್ತೆಯ ಟೆಂಡರ್ ಪಡೆದ ಗುತ್ತಿಗೆದಾರ ಕಾಮಗಾರಿಯನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ ಸಂಬAಧಿಸಿದ ನೀರಾವರಿ ಇಲಾಖೆಯವರು ವಿದ್ಯುತ್ ಕಂಬಗಳನ್ನು ತೆರವುಗೊಳಿಸುವಂತೆ ಸೂಚನೆಯನ್ನು ನೀಡಿ ರಸ್ತೆಯ ಕಾಮಗಾರಿಗಳನ್ನು ಪೂರ್ಣಗೊಳ್ಳಿಸುವಂತೆ ಈ ವ್ಯಾಪ್ತಿಯ ಗ್ರಾಮಸ್ಥರ ಒತ್ತಾಯವಾಗಿದೆ.

ಕಳೆದ ಒಂದು ವರ್ಷಗಳಿಂದಲೂ ವಿದ್ಯುತ್ ಕಂಬಗಳನ್ನು ಸ್ಥಳಾಂತರ ಮಾಡದೆ ರಸ್ತೆಯ ಕಾಮಗಾರಿಯನ್ನು ಸ್ಥಗಿತಗೊಳಿಸುವುದು ಸರಿಯಾದ ಕ್ರಮವಲ್ಲ. ಸಂಬAಧಿಸಿದ ನೀರಾವರಿ ಇಲಾಖೆಯ ಅಧಿಕಾರಿ ವರ್ಗದವರು ನಿರ್ಲಕ್ಷö್ಯ ಮನೋಭಾವ ತಾಳುತ್ತಿದ್ದಾರೆ ಎಂದು ಈ ವ್ಯಾಪ್ತಿಯ ನಾಲ್ಕು ಗ್ರಾಮಗಳ ಆರೋಪವಾಗಿದೆ. ಶೀಘ್ರವಾಗಿ ಕಾಮಗಾರಿಯನ್ನು ಆರಂಭ ಮಾಡದಿದ್ದರೆ ಹಾರಂಗಿ-ಕುಶಾಲನಗರ ರಸ್ತೆತಡೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.