ಮಡಿಕೇರಿ, ಅ. ೨೯: ಮಂಜಿನ ನಗರಿ ಮಡಿಕೇರಿ ತನ್ನ ಪ್ರಕೃತಿ ಸೌಂದರ್ಯ, ವಾತಾವರಣಕ್ಕೆ ಹೆಸರುವಾಸಿ. ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ನಗರಕ್ಕೆ ಆಗಮಿಸಿ ಹಿತ ಅನುಭವ ಪಡೆಯುತ್ತಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಬೀದಿನಾಯಿಗಳ ಹಾವಳಿ ಮಿತಿಮೀರಿದ್ದು, ಜನರು ಭಯದಲ್ಲಿ ಸಂಚರಿಸುವ ಪರಿಸ್ಥಿತಿ ಸೃಷ್ಟಿಯಾಗಿದೆ.

ನಗರದ ಬಹುತೇಕ ರಸ್ತೆಗಳಲ್ಲಿ ಬೀದಿನಾಯಿಗಳು ಕಂಡುಬರುತ್ತಿವೆ. ಇದರ ನಿಯಂತ್ರಣಕ್ಕೆ ಒಂದು ವರ್ಷಗಳ ಅವಧಿಯಲ್ಲಿ ೨ ಬಾರಿ ಬೀದಿ ನಾಯಿಗಳ ಸೆರೆಗೆ ಟೆಂಡರ್ ಕರೆದರು ಯಾವುದೇ ಸಂಸ್ಥೆಗಳು ಮುಂದೆ ಬಾರದ ಹಿನ್ನೆಲೆ ಹಾವಳಿ ನಿಯಂತ್ರಣ ಸಾಧ್ಯವಾಗಿಲ್ಲ. ಇದೀಗ ಮತ್ತೊಮ್ಮೆ ಟೆಂಡರ್ ಆಹ್ವಾನಿಸ ಲಾಗಿದ್ದು, ಇದುವರೆಗೂ ಯಾವುದೇ ಸಂಸ್ಥೆ ಭಾಗವಹಿಸಿಲ್ಲ. ಬಲವಂತವಾಗಿ ಯೂ ನಾಯಿಗಳನ್ನು ಹಿಡಿ ಯುವಂತಿಲ್ಲ. ಇದರಿಂದ ನಗರಸಭೆ ಇಕ್ಕಟ್ಟಿಗೆ ಸಿಲುಕಿ ಜನರ ಆಕ್ರೋಶಕ್ಕೆ ತುತ್ತಾಗುತ್ತಿದೆ.

ನಗರದ ಬಹುತೇಕ ಕಡೆಗಳಲ್ಲಿ ನಾಯಿಗಳ ಭಯ ಸೃಷ್ಟಿಯಾಗಿದೆ. ಜನನಿಬೀಡ ಪ್ರದೇಶಗಳಲ್ಲಿ ‘ಬೌ..ಬೌ’ ಎಂದು ಬೊಗಳುತ್ತ ಜನರನ್ನು ಹೆದರಿಸುತ್ತಿವೆ. ಅಲ್ಲದೆ ವಾಹನವನ್ನು ಹಿಂಬಾಲಿಸುತ್ತ ಅವಘಡಕ್ಕೂ ಕಾರಣವಾಗುತ್ತಿವೆ. ಇತ್ತೀಚಿನ ಕೆಲದಿನದಲ್ಲಿ ಈ ರೀತಿ ಘಟನೆ ನಡೆದು ದ್ವಿಚಕ್ರ ವಾಹನವೊಂದು ಅಪಘಾತಗೊಂಡ ಘಟನೆಯೂ ನಡೆದಿದೆ. ಕೆಲವೆಡೆಗಳಲ್ಲಿ ಮಕ್ಕಳು ಸೇರಿದಂತೆ ಜನರ ಮೇಲೆ ದಾಳಿ ಮಾಡಿದೆ.

ಬೀದಿನಾಯಿಗಳ ಹಾವಳಿ ನಿಯಂತ್ರಣಕ್ಕೆ ಜನರು ಹಲವು ಸಮಯದಿಂದ ಆಗ್ರಹಿಸುತ್ತ ಬರುತ್ತಿದ್ದಾರೆ. ಆದರೆ, ನಗರಸಭೆ ಬೀದಿನಾಯಿಗಳನ್ನು ಹಿಡಿಯಲು ಅಗತ್ಯ ಮಾರ್ಗಸೂಚಿ ಪಾಲಿಸ ಬೇಕಾಗಿದೆ. ಬೀದಿನಾಯಿಯನ್ನು ಬಲವಂತವಾಗಿ ಹಿಡಿಯುವಂತಿಲ್ಲ. ಹಿಡಿದರೂ ಸಂತಾನಹರಣ ಶಸ್ತçಚಿಕಿತ್ಸೆ ಮಾಡಿ ಮತ್ತೆ ಸೆರೆಹಿಡಿದಿದ್ದ ಜಾಗದಲ್ಲಿ ೩ಐದನೇ ಪುಟಕ್ಕೆ

(ಮೊದಲ ಪುಟದಿಂದ) ಬಿಡಬೇಕಾಗಿದೆ. ಇದರಿಂದ ನಾಯಿಗಳ ಹಾವಳಿ ನಿಯಂತ್ರಣವಾಗುವುದಿಲ್ಲ. ಸಂಖ್ಯೆ ಹೆಚ್ಚಳಕ್ಕೆ ಕಡಿವಾಣ ಹಾಕಬಹುದಾಗಿದೆ. ಈ ಸಂದಿಗ್ದತೆಯಿAದ ನಗರಸಭೆ ಅಸಹಾಯಕತೆ ಸ್ಥಿತಿಯಲ್ಲಿದೆ ಎಂದು ಭಾಸವಾಗುತ್ತಿದೆ.

ಇದರೊಂದಿಗೆ ಜಿಲ್ಲೆಯಲ್ಲಿ ನಾಯಿಸೆರೆ ಹಿಡಿಯುವವರು ಯಾರೂ ಇಲ್ಲ. ದೂರದ ಊರುಗಳಿಂದ ಆಗಮಿಸಿ ಈ ಕೆಲಸ ನಿರ್ವಹಿಸಬೇಕಾಗಿದೆ. ಆದರೆ, ಇದಕ್ಕೆ ಮೀಸಲಿಟ್ಟ ಹಣದಲ್ಲಿ ಕಾರ್ಯನಿರ್ವಹಣೆ ಕಷ್ಟ ಎಂದು ಸಂಸ್ಥೆಗಳು ಮಡಿಕೇರಿಯತ್ತ ಮುಖ ಮಾಡುತ್ತಿಲ್ಲ ಎಂದು ಪೌರಾಯುಕ್ತ ವಿಜಯ ‘ಶಕ್ತಿ’ಗೆ ತಿಳಿಸಿದ್ದಾರೆ.

ನಿಯಮಗಳೇನೂ..?

ಬೀದಿ ನಾಯಿ ಹಾವಳಿ ನಿಯಂತ್ರಣ ಸಂಬAಧ ‘ಂಟಿimಚಿಟ ಃiಡಿಣh ಅoಟಿಣಡಿoಟ’ ನಿಯಮದಡಿ ಕೆಲವೊಂದು ಮಾರ್ಗದರ್ಶಿ ನಿಯಮಗಳನ್ನು ಅನುಸರಿಸಬೇಕಾಗಿರುತ್ತದೆ. ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯಿAದ ಮಾನ್ಯತೆ ಪಡೆದ ಪ್ರಾಣಿ ಕಲ್ಯಾಣ ಸಂಸ್ಥೆಗಳಿಗೆ ಮಾತ್ರ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲು ನಿಯಮಾನುಸಾರ ನೀಡಬೇಕು, ಯಾವುದೇ ಪ್ರಾಣಿ ಕಲ್ಯಾಣ ಸಂಸ್ಥೆಗಳು ಬೀದಿ ನಾಯಿಗಳ ಸಂತಾನ ನಿಯಂತ್ರಣ (ಂಃಅ) ಯೋಜನೆÀಯನ್ನು ಕೈಗೆತ್ತಿಕೊಳ್ಳುವ ಮುನ್ನ ಪ್ರತಿ ಯೋಜನೆಗೆ ಮಾನ್ಯತೆಯನ್ನು ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯಿAದ ಅನುಮತಿ ಪಡೆದ ನಂತರವಷ್ಟೇ ಕೈಗೊಳ್ಳಬೇಕು. ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡುವುದು ಸ್ಥಳೀಯ ಸಂಸ್ಥೆಗಳ ಜವಾಬ್ದಾರಿಯಾಗಿರುತ್ತದೆ. ಸಂತಾನ ನಿಯಂತ್ರಣ ಶಸ್ತçಚಿಕಿತ್ಸೆ ನಡೆಸಿದ ನಂತರ ಲಸಿಕೆ ನೀಡಿ ನಾಯಿಗಳನ್ನು ಯಾವ ಪ್ರದೇಶದಿಂದ ಹಿಡಿಯಲಾಗಿತ್ತೋ ಅದೇ ಪ್ರದೇಶದಲ್ಲಿ ವಾಪಸ್ಸು ಬಿಡಬೇಕು. ನಾಯಿಗಳ ಸಂತಾನ ನಿಯಂತ್ರಣ ಕಾರ್ಯಕ್ರಮ ಕೈಗೆತ್ತಿಕೊಂಡ ಪ್ರಾಣಿ ಕಲ್ಯಾಣ ಸಂಸ್ಥೆಗಳು ಸಂಪೂರ್ಣ ದಾಖಲಾತಿಗಳನ್ನು ನಿರ್ವಹಿಸಬೇಕು, ಸ್ಥಳೀಯ ಮಟ್ಟದಲ್ಲಿ ಬೀದಿ ನಾಯಿಗಳ ಸಂತಾನ ನಿಯಂತ್ರಣ ನಿಗಾವಣೆ ಸಮಿತಿಯನ್ನು ಆಯುಕ್ತರು-ಮುಖ್ಯಾಧಿಕಾರಿರವರ ಅಧ್ಯಕ್ಷತೆಯಲ್ಲಿ ಪಶುಸಂಗೋಪನೆ, ಆರೋಗ್ಯ ಹಾಗೂ ಜಿಲ್ಲಾ ಪ್ರಾಣಿದಯಾ ಸಂಘದ ಪ್ರತಿನಿಧಿಗಳನ್ನು ಒಳಗೊಂಡAತೆ ರಚಿಸಿ ಕೊಂಡು ಒಟ್ಟಾರೆಯಾಗಿ ಯೋಜನೆಯನ್ನು ಮೇಲುಸ್ತುವಾರಿ ಮಾಡಬೇಕು. ಟಿ ಹೆಚ್.ಜೆ. ರಾಕೇಶ್