ಸುಂಟಿಕೊಪ್ಪ, ಅ. ೩೦ : ಚರ್ಚ್ ಆಫ್ ಸೌತ್ ಇಂಡಿಯಾದ ದಕ್ಷಿಣಪ್ರಾಂತ್ಯದ ಸುಂಟಿಕೊಪ್ಪದಲ್ಲಿರುವ ಇಮ್ಯಾನ್‌ವೆಲ್ ದೇವಾಲಯದಲ್ಲಿ ವಾರ್ಷಿಕ ಬೆಳೆ ಹಬ್ಬ ಶ್ರದ್ಧಾಭಕ್ತಿಯಿಂದ ನೆರವೇರಿತು. ದೇವಾಲಯ ಹಾಗೂ ಆವರಣವನ್ನು ಕಬ್ಬು, ಭತ್ತದ ಪೈರು, ಬಾಳೆಗೊನೆ, ಪುಷ್ಪಗಳಿಂದ ಇನ್ನಿತರ ಫಲಗಳಿಂದ ಸಿಂಗರಿಸಲಾಗಿತ್ತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮೈಸೂರು ವಲಯದ ದೇವಾಲಯ ಸಭಾಪಾಲಕರಾದ ರೆ.ಫಾ. ಡೆನ್ನಿಯಲ್ ಕೌಡಿನ್ಯ ಪಾಲ್ಗೊಂಡು ಧಾರ್ಮಿಕ ವಿಧಿವಿಧಾನಗಳೊಂದಿಗೆ ಆಶೀರ್ವಚನ ನೀಡಿದರು. ಈ ಸಂದರ್ಭ ಮಾತನಾಡಿದ ಚರ್ಚ್ ಆಫ್ ಸೌತ್ ಇಂಡಿಯಾದ ದಕ್ಷಿಣಪ್ರಾಂತ್ಯದ ದೇವಾಲಯಗಳ ಕೊಡಗು ವಲಯಾಧ್ಯಕ್ಷ ಮತ್ತು ಸಭಾಪಾಲಕರಾದ ರೆ.ಫಾ. ಜೈಸನ್‌ಗೌಡರ್, ನಮ್ಮ ದೇವಾಲಯಗಳ ವಾರ್ಷಿಕ ವಿಧಿವಿಧಾನಗಳಲ್ಲಿ ಬೆಳೆ ಹಬ್ಬವು ಪ್ರಮುಖವಾಗಿದ್ದು, ಸತ್ಯವೇದ ಅಥವಾ ಬೈಬಲಿನ ಪ್ರಕಾರ ಭಕ್ತರು ತಾವು ಬೆಳೆದ ಕೃಷಿ ಉತ್ಪನ್ನ ಮತ್ತು ಬೆಳೆದ ಫಲವಸ್ತುಗಳನ್ನು ಮೊದಲ ಕಾಣಿಕೆ ಯಾಗಿ ದೇವರಿಗೆ ಸಮರ್ಪಿಸುವುದು ಒಂದು ಪದ್ಧತಿ ಮತ್ತು ನಂಬಿಕೆಯಾಗಿದೆ. ಇದರ ಮೂಲಕ ನಮ್ಮನ್ನು ನಾವು ದೇವರಿಗೆ ಪುನಾರವರ್ತಿ ಕಾಣಿಕೆಯಾಗಿ ಸಮರ್ಪಿಸಿಕೊಳ್ಳುವುದಾಗಿದೆ ಎಂದರು. ಆಟೋಟ ಸ್ಪರ್ಧೆಗಳು ನಡೆದು ಬಹುಮಾನ ವಿತರಣೆ ಮಾಡಲಾಯಿತು.
ಕಾರ್ಯಕ್ರಮವು ಸುಂಟಿಕೊಪ್ಪ ಸಭಾಪಾಲಕರಾದ ಜೋನಿಯಲ್ ಸುಹಾಸ್ ಅವರ ಉಸ್ತುವಾರಿಯಲ್ಲಿ ದೇವಾಲಯದ ಭಕ್ತರ ಸಹಕಾರದೊಂದಿಗೆ ನೇರವೇರಿತ್ತು. ಕಾರ್ಯಕ್ರಮದಲ್ಲಿ ನೂರಾರು ಸಂಖ್ಯೆಯಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಬಂದಿದ್ದ ಕ್ರೆöÊಸ್ತ್ತ ಬಾಂಧವರು ಹಬ್ಬ ಆಚರಣೆಯಲ್ಲಿ ಭಕ್ತಿ ಸಡಗರ ಸಂಭ್ರಮದಿAದ ಪಾಲ್ಗೊಂಡು ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.