ಕುಶಾಲನಗರ, ನ. ೨: ಕುಶಾಲನಗರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡ ಅವರ ಸಂಸ್ಮರಣೆ ಕಾರ್ಯಕ್ರಮ ನಡೆಯಿತು.
ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಗಲಿದ ಇಬ್ಬರು ಮಹನೀಯರಿಗೆ ಮೌನಾಚರಣೆ ಮೂಲಕ ನಮನ ಸಲ್ಲಿಸಲಾಯಿತು. ಇಂದಿರಾಗಾAಧಿ, ಅಪ್ಪಯ್ಯಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ. ಶಶಿಧರ್ ಮಾತನಾಡಿ, ಇಂದಿರಾಗಾAಧಿ ಅವರ ಸಾಧನೆಗಳು ಹಾಗೂ ಅಪ್ಪಯ್ಯಗೌಡರ ಸ್ವಾತಂತ್ರö್ಯ ಹೋರಾಟದ ಬಗ್ಗೆ ವಿವರಿಸಿದರು.
ಇಂದಿರಾ ಗಾಂಧಿ ಎಂದರೆ ಸಂಚಲನ. ಸವಾಲಿನ ದಿನಗಳಲ್ಲಿ ಪಕ್ಷ ಹಾಗೂ ದೇಶವನ್ನು ದಿಟ್ಟತನದಿಂದ ಮುನ್ನಡೆಸಿದ ಕೀರ್ತಿ ಅವರಿಗೆ ಸಲ್ಲಬೇಕು.
ಇಂದಿರಾ ಗಾಂಧಿ ಅವರ ಅಂದಿನ ಜವಳಿ, ಆಹಾರ ಕ್ರಾಂತಿ, ಆಶ್ರಯ ಯೋಜನೆಗಳ ಪರಿಕಲ್ಪನೆ ಪ್ರಸ್ತುತ ದೇಶದಲ್ಲಿ ಈ ಕ್ಷೇತ್ರಗಳ ಸಂಪನ್ನತೆಗೆ ಸಾಕ್ಷಿಯಾಗಿದೆ ಎಂದರು. ಬ್ರಿಟೀಷರ ವಿರುದ್ದ ದಂಗೆ ನಡೆಸಿದ ಅಪ್ಪಯ್ಯಗೌಡರು ಅಪ್ರತಿಮ ಹೋರಾಟಗಾರ ಎಂದು ಬಣ್ಣಿಸಿದರು.
ಜಿ.ಪಂ. ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ ಮಾತನಾಡಿ, ದಿಟ್ಟ ಮಹಿಳೆ ಇಂದಿರಾಗಾAಧಿ ಅವರ ಸಾಧನೆಗಳು, ಕೊಡುಗೆಗಳ ಬಗ್ಗೆ ಅರಿತುಕೊಳ್ಳುವ ಅವಶ್ಯಕತೆಯಿದೆ ಎಂದರು.
ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಜೋಸೆಫ್ ವಿಕ್ಟರ್ ಸೋನ್ಸ್, ನಂಜುAಡಸ್ವಾಮಿ ಮಾತನಾಡಿದರು.
ಕೊಡಗು ಕಾಂಗ್ರೆಸ್ ಪ್ರಮುಖರಾದ ಶೇಖ್ ಖಲೀಮುಲ್ಲಾ, ಶಿವಶಂಕರ್, ಪುರಸಭೆ ಸದಸ್ಯ ದಿನೇಶ್, ಕೆಪಿಸಿಸಿ ಸದಸ್ಯ ನಟೇಶ್ ಗೌಡ, ಮುಖಂಡರಾದ ಟಿ.ಪಿ. ಹಮೀದ್, ಎಂ.ಎA. ಪ್ರಕಾಶ್, ನವೀನ್, ಹರೀಶ್, ಸಜಿ, ಜಿ.ಬಿ. ಜಗದೀಶ್ ಮತ್ತಿತರರು ಇದ್ದರು.