ಮಡಿಕೇರಿ, ನ. ೨: ಭಾರತದಲ್ಲಿ ಭ್ರಷ್ಟಾಚಾರ ತಡೆಗಟ್ಟಬೇಕು ಎಂಬ ಕೂಗು ಕೇಳುತ್ತಾ ಹೋದಂತೆ ಲಂಚ ಅವತಾರ ಹೆಚ್ಚುತ್ತಲೇ ಇರುತ್ತದೆ ಎಂದು ಗೋಣಿಕೊಪ್ಪಲು ಪೊಲೀಸ್ ಠಾಣೆಯ ಮುಖ್ಯ ಪೇದೆ ಎಂ.ಕೆ ಪೂವಣ್ಣ ಅಭಿಪ್ರಾಯಪಟ್ಟರು.
ಕಾವೇರಿ ಪದವಿ ಕಾಲೇಜು ಗೋಣಿಕೊಪ್ಪಲು ರಾಷ್ಟಿçÃಯ ಸೇವಾ ಯೋಜನೆ ವತಿಯಿಂದ ಆಯೋಜಿ ಸಿದ್ದ "ಭ್ರಷ್ಟಾಚಾರ ನಿರ್ಮೂಲನಾ ಜಾಗೃತಿ" ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಎಂ.ಕೆ. ಪೂವಣ್ಣ, ಭ್ರಷ್ಟಾಚಾರಕ್ಕೆ ಕಾರಣ ಏನು ಮತ್ತು ಪರಿಹಾರಗಳು ಏನು ಎಂದು ತಿಳಿಸುತ್ತ ಜನ ಎಲ್ಲಿಯವರಗೆ ಲಂಚ ಮಡಿಕೇರಿ, ನ. ೨: ಭಾರತದಲ್ಲಿ ಭ್ರಷ್ಟಾಚಾರ ತಡೆಗಟ್ಟಬೇಕು ಎಂಬ ಕೂಗು ಕೇಳುತ್ತಾ ಹೋದಂತೆ ಲಂಚ ಅವತಾರ ಹೆಚ್ಚುತ್ತಲೇ ಇರುತ್ತದೆ ಎಂದು ಗೋಣಿಕೊಪ್ಪಲು ಪೊಲೀಸ್ ಠಾಣೆಯ ಮುಖ್ಯ ಪೇದೆ ಎಂ.ಕೆ ಪೂವಣ್ಣ ಅಭಿಪ್ರಾಯಪಟ್ಟರು.
ಕಾವೇರಿ ಪದವಿ ಕಾಲೇಜು ಗೋಣಿಕೊಪ್ಪಲು ರಾಷ್ಟಿçÃಯ ಸೇವಾ ಯೋಜನೆ ವತಿಯಿಂದ ಆಯೋಜಿ ಸಿದ್ದ "ಭ್ರಷ್ಟಾಚಾರ ನಿರ್ಮೂಲನಾ ಜಾಗೃತಿ" ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಎಂ.ಕೆ. ಪೂವಣ್ಣ, ಭ್ರಷ್ಟಾಚಾರಕ್ಕೆ ಕಾರಣ ಏನು ಮತ್ತು ಪರಿಹಾರಗಳು ಏನು ಎಂದು ತಿಳಿಸುತ್ತ ಜನ ಎಲ್ಲಿಯವರಗೆ ಲಂಚ ಮರೆಯಬಾರದು. ಪ್ರತಿ ಇಲಾಖೆಯ ಭ್ರಷ್ಟಾಚಾರ ತಡೆಗಟ್ಟಲು ಲೋಕಾಯುಕ್ತ ಇಲಾಖೆ ರಚಿಸಲಾಗಿದೆ. ಅದು ತನಿಖೆ ಮಾಡಬಹುದು ಆದರೆ ಭ್ರಷ್ಟಾಚಾರ ತಡೆಗಟ್ಟಬೇಕಾದರೆ ಪ್ರತಿಯೊಬ್ಬರೂ ಜಾಗೃತರಾಗಿ ಪ್ರಶ್ನೆ ಮಾಡುವ ಗುಣ ಬೆಳಸಿಕೊಳ್ಳಬೇಕು ಎಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ. ಕಾವೇರಿಯಪ್ಪ ಎಂ.ಬಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಐ.ಕ್ಯೂ.ಎ.ಸಿ ಸಂಚಾಲಕಿ ನಯನಾ ತಮ್ಮಯ್ಯ ಮಾತನಾಡಿ, ಭ್ರಷ್ಟಾಚಾರ ಎಂಬುದು ನಮ್ಮ ದೈನಂದಿನ ಚಟುವಟಿಕೆಯಲ್ಲಿ ಹಾಸುಹೊಕ್ಕಾಗಿದೆ. ಆದ್ದರಿಂದ ‘ನಾನು ಲಂಚ ಕೊಡುವುದಿಲ್ಲ ಹಾಗೂ ನಾನು ಭ್ರಷ್ಟಾಚಾರಿ ಆಗಲಾರೆ’ ಎಂದು ಪ್ರತಿಜ್ಞೆ ಕೈಗೊಳ್ಳಬೇಕು. ಭ್ರಷ್ಟಾಚಾರ ತಡೆಯಲು ಸ್ವಯಂ ಜಾಗೃತರಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಎನ್.ಎಸ್.ಎಸ್ ಅಧಿಕಾರಿಗಳಾದ ವನಿತ್ ಕುಮಾರ್ ಎಂ.ಎನ್ ಮತ್ತು ಎನ್.ಪಿ.ರೀತಾ, ಎನ್.ಎಸ್.ಎಸ್ ನಾಯಕರಾದ ದರ್ಶನ್, ರೀನಾ, ಸೃಜನ್, ಧಾನ್ಯ ಹಾಗೂ ಎನ್.ಎಸ್.ಎಸ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.