ಗೋಣಿಕೊಪ್ಪಲು, ನ. ೩ : ಹಲವು ದಶಕಗಳಿಂದ ವಿದ್ಯುತ್ ಸಮಸ್ಯೆ ಎದುರಿಸುತ್ತಿದ್ದ ಶ್ರೀಮಂಗಲ ಗ್ರಾಮದ ಜನತೆಗೆ ಸದ್ಯದ ಮಟ್ಟಿಗೆ ವಿದ್ಯುತ್ ಸಮಸ್ಯೆ ನೀಗಲಿದೆ. ಈ ಹಿಂದೆ ಇದ್ದಂತಹ ೩೩ ಕೆವಿ ವಿದ್ಯುತ್ ಕೇಂದ್ರವನ್ನು ೬೬ ಕೆವಿಗೆ ವಿಸ್ತರಿಸಲಾಗಿದೆ. ಇದರಿಂದ ಗ್ರಾಮೀಣ ಭಾಗದ ಜನರ ಸಮಸ್ಯೆಗೆ ಪರಿಹಾರ ಸಿಗಲಿದ್ದು, ನೂತನ ವಿದ್ಯುತ್ ಘಟಕವನ್ನು ಕೃಷಿ ಸಚಿವ ಎನ್.ಚಲುವರಾಯ ಸ್ವಾಮಿಯವರು ಲೋಕಾರ್ಪಣೆ ಮಾಡಿದರು.

ಜಿಲ್ಲಾ ಕಾಂಗ್ರೆಸ್ ಸದಸ್ಯ ಕಾಳಿಮಾಡ ಪ್ರಶಾಂತ್ ಈ ಭಾಗದಲ್ಲಿ ವಿದ್ಯುತ್ ಸಮಸ್ಯೆ ಹಲವು ದಶಕಗಳಿಂದ ಕಾಡುತ್ತಿದೆ. ೨೦ ಸಿಬ್ಬಂದಿಗಳ ಪೈಕಿ ಕೇವಲ ೪ ಸಿಬ್ಬಂದಿಗಳು ಮಾತ್ರ ಕೆಲಸ ನಿರ್ವಹಿಸುತ್ತಿದ್ದಾರೆ. ಉಪಕೇಂದ್ರಕ್ಕೆ ಬರುವ ಸಿಬ್ಬಂದಿಗಳು ವರ್ಗಾವಣೆ ತೆಗೆದುಕೊಂಡು ಬೇರೆಡೆಗೆ ತೆರಳುತ್ತಿದ್ದಾರೆ. ಕೂಡಲೇ ಶ್ರೀಮಂಗಲ ಉಪಕೇಂದ್ರಕ್ಕೆ ಸಿಬ್ಬಂದಿಗಳ ನೇಮಕಾತಿ ಬಗ್ಗೆ ಕ್ರಮ ಕೈಗೊಳ್ಳುವಂತೆ ಸಚಿವರಲ್ಲಿ ಪ್ರಸ್ತಾಪ ಸಲ್ಲಿಸಿದರು. ಈ ವೇಳೆ ಸ್ಥಳದಲ್ಲಿದ್ದ ಡಿಸಿಸಿ ಜಿಲ್ಲಾಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಗ್ರಾಮದ ಪ್ರಮುಖರಾದ ಅಪ್ಪಚಂಗಡ ಮೋಟಯ್ಯ ಸೇರಿದಂತೆ ಹಲವರು ಧ್ವನಿಗೂಡಿಸಿದರು. ಇದಕ್ಕೆ ಉತ್ತರಿಸಿದ ಸಚಿವರು ಸ್ಥಳದಲ್ಲಿದ್ದ ಹಿರಿಯ ಚೆಸ್ಕಾಂ ಅಧಿಕಾರಿಗಳಿಗೆ ಸಿಬ್ಬಂದಿ ನೇಮಕದ ಬಗ್ಗೆ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.

ಮಾಜಿ ಶಾಸಕರ ಕಾಳಜಿ

ಕೊಡಗು ಮೈಸೂರು ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಮಾತನಾಡಿ, ಶ್ರೀಮಂಗಲ ಉಪಕೇಂದ್ರವನ್ನು ಉನ್ನತೀಕರಣಗೊಳಿಸಲು ಮಾಜಿ ಶಾಸಕರಾದ ಕೆ.ಜಿ.ಬೋಪಯ್ಯ ಅವರ ವಿಶೇಷ ಕಾಳಜಿ ಸ್ಮರಿಸುತ್ತೇವೆ. ಸಾಕಷ್ಟು ಅನುದಾನವನ್ನು ಒದಗಿಸುವಲ್ಲಿ ಅವರ ಶ್ರಮವಿದೆ. ಇದೀಗ ಜನರ ಅನುಕೂಲಕ್ಕಾಗಿ ಉಪಕೇಂದ್ರವು ಲೋಕಾರ್ಪಣೆಯಾಗಿದೆ. ಇಲ್ಲಿಯ ನಾಗರಿಕರ ಸಮಸ್ಯೆಗೆ ಪರಿಹಾರ ಲಭಿಸಿದೆ. ಅಭಿವೃದ್ಧಿಯ ನಿಟ್ಟಿನಲ್ಲಿ ಕೆ.ಜಿ.ಬೋಪಯ್ಯ ಅವರು ಕ್ಷೇತ್ರದ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದರು ಎಂದರು.

ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ, ಸಂಸದ ಪ್ರತಾಪ್ ಸಿಂಹ, ವಿದ್ಯುತ್ ಪರಿವೀಕ್ಷಕ ತೀತಿರ ರೋಶನ್ ಅಪ್ಪಚ್ಚು ಹಾಗೂ ಸಚಿವ ಚಲುವರಾಯ ಸ್ವಾಮಿಯವರನ್ನು ಚೆಸ್ಕಾಂ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಚೆಸ್ಕಾಂ ಹಿರಿಯ ಅಧಿಕಾರಿ ಮಹದೇವಸ್ವಾಮಿ ಪ್ರಸನ್ನ, ಸೋಮಶೇಖರ್, ಕಾರ್ಯಪಾಲಕ ಅಭಿಯಂತರೆ ಅನಿತಾಬಾಯಿ, ನೀಲ್‌ಶೆಟ್ಟಿ, ಸುರೇಶ್ ಸೇರಿದಂತೆ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಿದೇರಿರ ನವೀನ್, ಜಿ.ಪಂ. ಮಾಜಿ ಸದಸ್ಯರಾದ ಬಿ.ಎನ್.ಪ್ರಥ್ಯು, ಬಿಜೆಪಿ ಪ್ರಮುಖರಾದ ಎಂ.ಎA.ರವೀAದ್ರ, ಚೋಡುಮಾಡ ಶ್ಯಾಂ ಪೂಣಚ್ಚ, ಸೇರಿದಂತೆ ಇನ್ನಿತರ ಪ್ರಮುಖರು ಹಾಜರಿದ್ದರು.