ಶನಿವಾರಸಂತೆ, ನ.೩ : ಮಡಿಕೇರಿ ವಿಭಾಗ, ದಕ್ಷಿಣ ಪ್ರಾಂತ ನ್ಯಾಷನಲ್ ಮೆಡಿಕೋಸ್ ಆರ್ಗನೈಸೇಷನ್, ಸೇವಾ ಭಾರತಿ ಹಾಗೂ ಕಾವೇರಿ ಸ್ವಾಸ್ಥö್ಯ ಸೇವಾಯಾತ್ರ‍್ರ ಸಹಭಾಗಿತ್ವದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಶನಿವಾರಸಂತೆಯ ತ್ಯಾಗರಾಜ ಕಾಲೋನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾ. ೫ ರಂದು ಬೆಳಿಗ್ಗೆ ೯ ರಿಂದ ಮಧ್ಯಾಹ್ನ ೧ ಗಂಟೆಯವರೆಗೆ ನಡೆಯಲಿದೆ.
ಶಿಬಿರದಲ್ಲಿ ರಕ್ತದೊತ್ತಡ, ಮಧುಮೇಹ, ಬಿಎಂಐ ಮೌಲ್ಯ ಮಾಪನಾ, ಪೌಷ್ಠಿಕಾಂಶ ತಪಾಸಣೆಗಳು ನಡೆಯಲಿವೆ ಎಂದು ಡಾ. ಎಚ್.ಜೆ. ಶ್ರೀಕಾಂತ್, ಡಾ.ಎಸ್. ಮಂಜುನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.