ಸಿದ್ದಾಪುರ, ನ. ೨: ಮೂಲ ಸೌಕರ್ಯ ವಂಚಿತರಾಗಿ ಬದುಕು ಸಾಗಿಸುತ್ತಿರುವ ಆದಿವಾಸಿ ಜನಾಂಗದ ಮಕ್ಕಳು ಕಾಡುಪ್ರಾಣಿಗಳ ಭಯದ ನಡುವೆ ಕಲಿಕೆಗೆ ಆಸಕ್ತಿ ತೋರಿ ಸರ್ಕಾರಿ ಶಾಲೆಗೆ ತಪ್ಪದೆ ಹಾಜರಾಗುವ ಮೂಲಕ ಕಲಿಕೆಯಲ್ಲಿ ನಾವು ಯಾರಿಗೂ ಕಮ್ಮಿ ಇಲ್ಲ ಎಂಬAತೆ ಶಿಕ್ಷಕರುಗಳ ಮಾರ್ಗದರ್ಶನಕ್ಕೆ ವಿದ್ಯಾರ್ಥಿಗಳು ಸಾತ್ ನೀಡುವ ಮೂಲಕ ಮಾದರಿ ಶಾಲೆಯಾಗಿ ಚೆನ್ನಂಗಿ ಸರ್ಕಾರಿ ಶಾಲೆಯು ಹೊರಹೊಮ್ಮಿದೆ.

ವೀರಾಜಪೇಟೆ ತಾಲೂಕಿನ ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಡಂಚಿನ ಚೆನ್ನಂಗಿ ಗ್ರಾಮದಲ್ಲಿರುವ ಈ ಸರ್ಕಾರಿ ಶಾಲೆಯಲ್ಲಿ ಶೇ.೯೦ ರಷ್ಟು ಆದಿವಾಸಿ ಕುಟುಂಬಕ್ಕೆ ಸೇರಿದ ಮಕ್ಕಳೇ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ದಿನನಿತ್ಯ ಕಾಡುಪ್ರಾಣಿಗಳ ಭಯದ ನಡುವೆಯೂ ಶಾಲೆಗೆ ತೆರಳಿ ಶಿಕ್ಷಣ ಪಡೆಯುತ್ತಿರುವ ಮಕ್ಕಳ ಸಂಖ್ಯೆ ಉಳಿದ ಕೆಲವು ಸರಕಾರಿ ಶಾಲೆಗಳಿಗೆ ಹೋಲಿಕೆ ಮಾಡಿದರೆ ಕಡಿಮೆ ಏನಿಲ್ಲ. ಪ್ರಸಕ್ತ ೪೨ ವಿದ್ಯಾರ್ಥಿಗಳು ಶಾಲೆಗೆ ತೆರಳುತ್ತಿದ್ದಾರೆ. ಪ್ರಾರಂಭದಲ್ಲಿ ೧ರಿಂದ ೪ನೇ ತರಗತಿಯವರೆಗಿದ್ದ ಕೊಠಡಿಗಳು ಇದೀಗ ೭ನೇ ತರಗತಿವರೆಗೆ ಪ್ರಸಕ್ತ ೪೨ ವಿದ್ಯಾರ್ಥಿಗಳು ಶಾಲೆಗೆ ತೆರಳುತ್ತಿದ್ದಾರೆ. ಪ್ರಾರಂಭದಲ್ಲಿ ೧ರಿಂದ ೪ನೇ ತರಗತಿಯವರೆಗಿದ್ದ ಕೊಠಡಿಗಳು ಇದೀಗ ೭ನೇ ತರಗತಿವರೆಗೆ ಮನೆಗೆ ಹಿಂತಿರುಗಬೇಕಾಗಿದೆ.

ಗ್ರಾಮೀಣ ಪ್ರದೇಶವಾಗಿರುವುದ ರಿಂದ ಯಾವುದೇ ಬಸ್ ಸಂಚಾರ ವಿಲ್ಲ. ಕಾಡು ಪ್ರಾಣಿಗಳ ಭಯದ ನಡುವೆ ದಿನನಿತ್ಯ ಶಾಲೆಗೆ ತೆರಳ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ೭ನೇ ತರಗತಿ ಕಲಿತ ವಿದ್ಯಾರ್ಥಿಗಳು ಹೆಚ್ಚಿನ ಶಿಕ್ಷಣಕ್ಕಾಗಿ ಚೆನ್ನಯ್ಯನಕೋಟೆ, ಪಾಲಿಬೆಟ್ಟ, ಗೋಣಿಕೊಪ್ಪ, ವೀರಾಜ ಪೇಟೆಗೆ ತೆರಳಬೇಕಾಗಿದೆ. ಹಾಡ ಹಗಲಿನಲ್ಲೂ ಕಾಣಿಸಿಕೊಳ್ಳುತ್ತಿರುವ ಕಾಡು ಪ್ರಾಣಿಗಳ ಹಾವಳಿಯಿಂದ ಬಹುತೇಕ ವಿದ್ಯಾರ್ಥಿಗಳು ಶಾಲೆಗೆ ತೆರಳಲು ಸಾಧ್ಯವಾಗದೆ ಮನೆಯಲ್ಲೇ ಉಳಿದುಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಕೆಲವು ವಿದ್ಯಾರ್ಥಿಗಳು ಶಿಕ್ಷಣ ಮುಂದುವರೆಸಲು ಸಾಧ್ಯವಾಗದೆ ತಂದೆ-ತಾಯಿಗಳೊAದಿಗೆ ತೋಟ ಕೆಲಸಕ್ಕೆ ತೆರಳುತ್ತಿದ್ದಾರೆ. ಕೆಲವೊಮ್ಮೆ ಶಿಕ್ಷಕರುಗಳೇ ಶಿಕ್ಷಣದಿಂದ ದೂರ ಉಳಿದ ವಿದ್ಯಾರ್ಥಿಗಳನ್ನು ಹುಡುಕಿ ಕೊಂಡು ಹಾಡಿಗೆ ತೆರಳಿ ಪೋಷಕರ ಮನವೊಲಿಸಿ ಶಾಲೆಗೆ ಕರೆತರುತ್ತಿದ್ದಾರೆ. ದಾನಿಗಳು ಶಾಲೆಯ ಅಭಿವೃದ್ಧಿ ಹಾಗೂ ಮಕ್ಕಳ ಶಿಕ್ಷಣಕ್ಕಾಗಿ ಕೈಜೋ ಡಿಸಿದ್ದಾರೆ. ಶಾಲೆಯಲ್ಲಿ ಮಕ್ಕಳಿಗೆ ಸ್ಮಾರ್ಟ್ ಕ್ಲಾಸ್, ಮೂಲ ಸಾಮರ್ಥ್ಯದ ಕಲಿಕೆ, ವೃತ್ತಿ ಶಿಕ್ಷಣ, ಪರಿಸರ ಜಾಗೃತಿ, ಸಂಗೀತ, ಕ್ರೀಡೆ, ಸಾಂಸ್ಕೃತಿಕ, ಪ್ರತಿಭಾ ಕಾರಂಜಿ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮಕ್ಕಳ ಕಲಿಕೆಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಮಕ್ಕಳ ಹಾಜರಾತಿ ಹೆಚ್ಚಿಸುವಲ್ಲಿ ಶಿಕ್ಷಕರುಗಳು ಹೆಚ್ಚಿನ ಶ್ರಮ ವಹಿಸುತ್ತಾರೆ. ಹಚ್ಚ ಹಸಿರಿನಿಂದ ಕೂಡಿರುವ ಪರಿಸರದಲ್ಲಿ ಶಾಲಾ ಕಟ್ಟಡವಿದ್ದು ಕಲೆ, ಸಾಹಿತ್ಯ, ಸಂಸ್ಕೃತಿ ಬಿಂಬಿಸುವ ವರ್ಣರಂಜಿತ ಕಲಾಕೃತಿ ಗಳು ಹಾಗೂ ಅಕ್ಷರಮಾಲೆಗಳು ಪೋಷಕರು ಹಾಗೂ ಮಕ್ಕಳ ಆಕರ್ಷ ಣೆಯಾಗಿವೆ. ಶಾಲಾ ಆವರಣದಲ್ಲಿ ಅಲಂಕಾರಿಕ ಹೂವಿನ ಗಿಡಗಳು ನೋಡುಗರ ಗಮನ ಸೆಳೆಯುತ್ತಿವೆ. ಡಿಸೆಂಬರ್‌ನಲ್ಲಿ ಶಾಲಾ ಊರ ಹಬ್ಬ ಆಚರಣೆಗೆ ಸಿದ್ಧತೆ ಕೈಗೊಳ್ಳಲಾಗಿದೆ.

ಹಳೆ ವಿದ್ಯಾರ್ಥಿಗಳು, ಪೋಷಕರು, ಗ್ರಾಮಸ್ಥರು ಒಗ್ಗೂಡಿ ೬೪ ವರ್ಷ ಪೂರೈಸಿದ ಶಾಲೆಯನ್ನು ಮತ್ತಷ್ಟು ದಾಖಲಾತಿ ಹೆಚ್ಚಿಸುವ ಮೂಲಕ ಮಕ್ಕಳಲ್ಲಿ ಆತ್ಮಸ್ಥೆöÊರ್ಯ ತುಂಬಲು ಡಿಸೆಂಬರ್ ತಿಂಗಳಲ್ಲಿ ಅದ್ದೂರಿ ಶಾಲಾ ಊರಿನ ಹಬ್ಬ ಆಚರಣೆ ಮಾಡಲು ಸಿದ್ಧತೆ ಕೈಗೊಂಡಿರುವದಾಗಿ ಶಾಲಾ ಮುಖ್ಯ ಶಿಕ್ಷಕಿ ಕೆ.ಕೆ. ಸುಶಾ, ಶಕ್ತಿಗೆ ತಿಳಿಸಿದ್ದಾರೆ.

ವೀರಾಜಪೇಟೆ ಕ್ಷೇತ್ರದ ಶಿಕ್ಷಣಾ ಧಿಕಾರಿ ಪ್ರಕಾಶ್ ಶಾಲೆಗೆ ಭೇಟಿ ನೀಡಿ ಶಿಕ್ಷಕರ ಮಾರ್ಗದರ್ಶನ, ಮಕ್ಕಳ ಕಲಿ ಕೆಯ ಆಸಕ್ತಿ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ವನಜಾಕ್ಷಿ ಚೆನ್ನಂಗಿ ಶಾಲೆಗೆ ಭೇಟಿ ನೀಡಿ ಪೋಷಕರು ಹಾಗೂ ಮಕ್ಕಳಿಗೆ ಸರ್ಕಾರದ ಸೌಲಭ್ಯ ಹಾಗೂ ಶಿಕ್ಷಣ ಇಲಾಖೆಯ ಮಾರ್ಗದರ್ಶನಗಳ ಬಗ್ಗೆ ಮಾಹಿತಿ ನೀಡಿದ್ದಲ್ಲದೆ ದಾಖಲಾತಿ ಹೆಚ್ಚಿಸುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿ ಕೊಂಡಿರುವ ಶಿಕ್ಷಕರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

-ಎಸ್.ಎಂ ಮುಬಾರಕ್