ಕಣಿವೆ, ನ. ೩: ತಾಲೂಕಾಗಿ ರಚನೆಗೊಂಡ ಕುಶಾಲನಗರ ತಾಲೂಕಿಗೆ ಮೂರು ವಸಂತಗಳು ಕಳೆದರೂ ತಹಶೀಲ್ದಾರ್ ಆಡಳಿತ ಸೌಧ ನಿರ್ಮಿಸಲು ಸೂಕ್ತ ನಿವೇಶನವೇ ಲಭ್ಯವಾಗುತ್ತಿಲ್ಲ.
ನಾಗಾಲೋಟದಲ್ಲಿ ಬೆಳೆಯು ತ್ತಿರುವ ಕುಶಾಲನಗರ ಪಟ್ಟಣದೊಳಗೆ ಸಾರ್ವಜನಿಕರ ಉದ್ದೇಶಗಳಿಗೆ ಅತ್ಯಗತ್ಯವಾಗಿ ಬೇಕಾದ ಸರ್ಕಾರಿ ಕಟ್ಟಡಗಳನು ನಿರ್ಮಿಸಲು ಆಯಕಟ್ಟಿನ ಜಾಗಗಳಲ್ಲಿ ನಿವೇಶನಗಳೇ ಅಲಭ್ಯ.
ನೆಲ್ಲಿಹುದಿಕೇರಿಯಿಂದ ಶಿರಂಗಾಲದವರೆಗೆ, ಕೆದಕಲ್ನಿಂದ ಸಿದ್ದಲಿಂಗಪುರದವರೆಗೆ, ಹರದೂರನಿಂದ ಕುಶಾಲನಗರದ ಗಡಿಯವರೆಗೆ ಇರುವ ಜನ ಸಮುದಾಯಕ್ಕೆ ಎಲ್ಲಾ ರೀತಿಯಲ್ಲೂ ಅನುಕೂಲವಾಗಬಲ್ಲ ಸೂಕ್ತ ಸ್ಥಳಾವಕಾಶ ದೊರಕದ ಹಿನ್ನೆಲೆಯಲ್ಲಿ ಕುಶಾಲನಗರದ ಹೃದಯ ಭಾಗ ಪ್ರವಾಸಿ ಮಂದಿರದ ಆವರಣದಲ್ಲಿನ ಖಾಲಿ ನಿವೇಶನವನ್ನು ತಾಲೂಕು ಆಡಳಿತ ಸೌಧ ನಿರ್ಮಿಸಲು ಸ್ಥಳೀಯ ಕಾಂಗ್ರೆಸ್ ಮುಖಂಡರು ಉತ್ಸುಕ ರಾಗುತ್ತಿರುವುದು ಕೇಳಿ ಬರುತ್ತಿದೆ.
ತಹಶೀಲ್ದಾರ್ ನಿವಾಸಕ್ಕೆ ಕಾಯ್ದಿರಿಸಿದ ಜಾಗ
ಬ್ರಿಟಿಷರ ಕಾಲದ್ದು ಎನ್ನಲಾದ ಕುಶಾಲನಗರದ ಪ್ರವಾಸಿ ಮಂದಿರ (ಐಬಿ) ಕಂದಾಯ ಇಲಾಖೆಯ ಸರ್ವೆ ನಂಬರ್ ೫೨ ರಲ್ಲಿ ೫೦ ಸೆಂಟು ಜಾಗವನ್ನು ಮೀಸಲಿರಿಸಿ ಕಂದಾಯ ಇಲಾಖೆ ಭೂಕಂದಾಯ ಕಾಯ್ದೆ ೧೯೬೪ ರ ಕಲಂ ೭೧ ರ ಅನ್ವಯ ಕುಶಾಲನಗರ ತಾಲೂಕು ತಹಶೀಲ್ದಾರ್ ಅವರ ವಸತಿ ನಿವೇಶನಕ್ಕಾಗಿ ಕಂದಾಯ ಇಲಾಖೆಯ ಹೆಸರಲ್ಲಿ ಸಮುದಾಯಕ್ಕೆ ಎಲ್ಲಾ ರೀತಿಯಲ್ಲೂ ಅನುಕೂಲವಾಗಬಲ್ಲ ಸೂಕ್ತ ಸ್ಥಳಾವಕಾಶ ದೊರಕದ ಹಿನ್ನೆಲೆಯಲ್ಲಿ ಕುಶಾಲನಗರದ ಹೃದಯ ಭಾಗ ಪ್ರವಾಸಿ ಮಂದಿರದ ಆವರಣದಲ್ಲಿನ ಖಾಲಿ ನಿವೇಶನವನ್ನು ತಾಲೂಕು ಆಡಳಿತ ಸೌಧ ನಿರ್ಮಿಸಲು ಸ್ಥಳೀಯ ಕಾಂಗ್ರೆಸ್ ಮುಖಂಡರು ಉತ್ಸುಕ ರಾಗುತ್ತಿರುವುದು ಕೇಳಿ ಬರುತ್ತಿದೆ.
ತಹಶೀಲ್ದಾರ್ ನಿವಾಸಕ್ಕೆ ಕಾಯ್ದಿರಿಸಿದ ಜಾಗ
ಬ್ರಿಟಿಷರ ಕಾಲದ್ದು ಎನ್ನಲಾದ ಕುಶಾಲನಗರದ ಪ್ರವಾಸಿ ಮಂದಿರ (ಐಬಿ) ಕಂದಾಯ ಇಲಾಖೆಯ ಸರ್ವೆ ನಂಬರ್ ೫೨ ರಲ್ಲಿ ೫೦ ಸೆಂಟು ಜಾಗವನ್ನು ಮೀಸಲಿರಿಸಿ ಕಂದಾಯ ಇಲಾಖೆ ಭೂಕಂದಾಯ ಕಾಯ್ದೆ ೧೯೬೪ ರ ಕಲಂ ೭೧ ರ ಅನ್ವಯ ಕುಶಾಲನಗರ ತಾಲೂಕು ತಹಶೀಲ್ದಾರ್ ಅವರ ವಸತಿ ನಿವೇಶನಕ್ಕಾಗಿ ಕಂದಾಯ ಇಲಾಖೆಯ ಹೆಸರಲ್ಲಿ (ಮೊದಲ ಪುಟದಿಂದ) ಈಗಾಗಲೇ ನಿಗದಿಯಾಗಿರುವ ನ್ಯಾಯಾಲಯ ಸಂಕೀರ್ಣದ ಆಸುಪಾಸಿನಲ್ಲಿ ಸಾರ್ವಜನಿಕರಿಗೆ ಅನುಕೂಲವಾಗಬಲ್ಲ ತಹಶೀಲ್ದಾರ್ ಭವನ ನಿರ್ಮಿಸುವುದು ಅನಿವಾರ್ಯವಿದೆ. ಹಾಗಾಗಿ ಈಗಾಗಲೇ ಕಂದಾಯ ಇಲಾಖೆ ಹೆಸರಿನಲ್ಲಿ ಮೀಸಲಿರುವ ಜಾಗದಲ್ಲಿಯೇ ತಹಶೀಲ್ದಾರ್ ಆಡಳಿತ ಸೌಧ ನಿರ್ಮಿಸಲಾಗುವುದು. ಈ ಬಗ್ಗೆ ಶಾಸಕÀ ಡಾ. ಮಂಥರ ಗೌಡ ಅವರೊಂದಿಗೆ ಚರ್ಚಿಸಿದ್ದು ಜಿಲ್ಲಾಧಿಕಾರಿಗಳ ಬಳಿ ನಿಯೋಗ ತೆರಳಿ ಈಗಾಗಲೇ ಆಗಿರುವ ಆದೇಶವನ್ನು ರದ್ದುಪಡಿಸಿ ಸಾರ್ವಜನಿಕರಿಗೆ ಅತ್ಯಗತ್ಯವಾಗಿ ಅವಶ್ಯವಿರುವ ತಹಶೀಲ್ದಾರ್ ಭವನ ನಿರ್ಮಿಸಲು ಮುಂದಾಗುತ್ತೇವೆ ಎಂದು ತಿಳಿಸಿದ್ದಾರೆ.
ಮಂಜೂರಾದ ನಿವೇಶನ ಬೇರೆ ಉದ್ದೇಶಕ್ಕೆ ಬಳಕೆ
ತಹಶೀಲ್ದಾರ್ ಆಡಳಿತ ಸೌಧ ನಿರ್ಮಿಸಲು ಕುಶಾಲನಗರದ ಬೈಚನಹಳ್ಳಿಯ ಗುಂಡೂರಾವ್ ಬಡಾವಣೆಯಲ್ಲಿ ಮೂರು ಎಕರೆ ನಿವೇಶನವನ್ನು ಮೀಸಲಿಡಲಾಗಿತ್ತು. ಆದರೆ ಆ ಜಾಗದಲ್ಲಿ ತಹಶೀಲ್ದಾರ್ ಆಡಳಿತ ಸೌಧ ನಿರ್ಮಿಸಿದರೆ ಕಚೇರಿಗೆ ಬಂದು ಹೋಗುವ ಹಳ್ಳಿಗಾಡು ಪ್ರದೇಶಗಳ ಸಾರ್ವಜನಿಕರಿಗೆ ತೀವ್ರ ಅನಾನುಕೂಲವಾಗುತ್ತದೆ ಎಂಬ ಕಾರಣದಿಂದ ಪ್ರವಾಸಿ ಮಂದಿರದ ಬಳಿಯ ಖಾಲಿ ನಿವೇಶನದಲ್ಲಿಯೇ ತಹಶೀಲ್ದಾರ್ ಭವನ ಸೂಕ್ತ ಎಂಬ ತೀರ್ಮಾನಕ್ಕೆ ಬಂದಿರುವುದಾಗಿ ಕುಶಾಲನಗರ ಬ್ಲಾಕ್ ಕಾಂಗ್ರ್ರೆಸ್ ಅಧ್ಯಕ್ಷ ವಿ.ಪಿ. ಶಶಿಧರ್ ತಿಳಿಸಿದರು. ಯೋಜಿತ ನಿವೇಶನವೂ ಪ್ರವಾಸಿ ಮಂದಿರದ ಪ್ರವೇಶ ದ್ವಾರದ ಬಲ ಪಾರ್ಶ್ವದ ಸುಬ್ರಮಣ್ಯ ದೇವಾಲಯಕ್ಕೆ ತೆರಳುವ ರಸ್ತೆಯು ‘ಎಲ್’ ಆಕಾರದಲ್ಲಿ ಆಡಳಿತ ಸೌಧವನ್ನು ಸುತ್ತುವರೆಯುತ್ತದೆ.
ಒಟ್ಟಾರೆ ಎಲ್ಲಾದರೂ ಸರಿಯೇ ಆದಷ್ಟು ಬೇಗ ಆಡಳಿತ ಸೌಧ ನಿರ್ಮಾಣಗೊಂಡು ಸಾರ್ವಜನಿಕರಿಗೆ ಅನುಕೂಲ ಒದಗಿಸಬೇಕಿದೆ ಅಷ್ಟೆ.
ಈ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಕಂದಾಯ ಮಂತ್ರಿಯಾಗಿದ್ದ ಅಶೋಕ್ ಅವರನ್ನು ಆಹ್ವಾನಿಸಿ ಕುಶಾಲನಗರ ತಾಲೂಕು ಘೋಷಿಸುವ ಸಂದರ್ಭ ಕಾರ್ಯಕ್ರಮದ ವೇದಿಕೆಗೆ ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ಅವರನ್ನು ಸೌಜನ್ಯಕ್ಕಾದರೂ ಸ್ವಾಗತಿಸಿ ಕನಿಷ್ಟಕ್ಕಾದರೂ ಗೌರವಿಸಬೇಕಿತ್ತು ಎಂದು ಕಾರ್ಯಕ್ರಮದಲ್ಲಿದ್ದ ಜಲಮಂಡಳಿ ಮಾಜಿ ಅಧ್ಯಕ್ಷೆ ಕೆ.ಪಿ. ಚಂದ್ರಕಲಾ ಅವರು ವೇದಿಕೆಯಲ್ಲಿದ್ದ ಅಂದಿನ ಕಂದಾಯ ಸಚಿವ ಅಶೋಕ್ ಅವರನ್ನು ಪ್ರಶ್ನಿಸಿದ ಸಂದರ್ಭ ಬಿಜೆಪಿಯ ಒಂದು ಗುಂಪು ಕಾರ್ಯಕ್ರಮದ ಸಭಾಂಗಣದಲ್ಲಿಯೇ ಶಶಿಧರ್ ಹಾಗೂ ಸಂಗಡಿಗರನ್ನು ಅಪಮಾನಿಸಿದ್ದರು. ಇದರಿಂದಾಗಿ ಬೇಸರಗೊಂಡ ಚಂದ್ರಕಲಾ ಅವರು ಕಣ್ಣೀರಿಟ್ಟು ‘ನಿಮಗಿದು ಶೋಭೆಯಲ್ಲ ಅಪ್ಪಚ್ಚು ರಂಜನ್’..... ನಿಮ್ಮ ಕಾರ್ಯಕರ್ತರನ್ನು ಎತ್ತಿ ಕಟ್ಟಿ ತಾಲೂಕು ಹೋರಾಟಗಾರರನ್ನು ಅಪಮಾನಿಸಿದ್ದೀರಾ... ಮುಂದೆ ನಮ್ಮ ಕಾಂಗ್ರೆಸ್ ಸರ್ಕಾರ ಬರುತ್ತದೆ. ತಾಲೂಕನ್ನೇ ಗಿಟ್ಟಿಸಿಕೊಂಡ ನಮಗೆ ತಾಲೂಕು ಸೌಧವನ್ನು ಕಟ್ಟಿಸಿಕೊಳ್ಳುವುದು ನಮಗೆ ಗೊತ್ತು ಎಂದು ಸವಾಲು ಹಾಕಿದ್ದರು. ಅವರ ಆಶಯದಂತೆಯೇ ಇದೀಗ ಕಾಂಗ್ರೆಸ್ ಸರ್ಕಾರ ಈಗ ಅಸ್ತಿತ್ವದಲ್ಲಿದೆ. ಈಗ ಕಾಂಗ್ರೆಸ್ಸಿಗರು ಸರ್ಕಾರದಿಂದ ಅನುದಾನ ತಂದು ನಿವೇಶನ ಗೊತ್ತುಪಡಿಸಿ ಆದಷ್ಟು ಬೇಗ ಆಡಳಿತ ಸೌಧ ಕಟ್ಟುವತ್ತ ಚಿತ್ತ ಹರಿಸಬೇಕಷ್ಟೆ. ವಿಶೇಷ ವರದಿ : ಕೆ.ಎಸ್.ಮೂರ್ತಿ