ಮಡಿಕೇರಿ, ನ. ೩ : ಇಂಡಿಯನ್ ಸೈನ್ಸ್ ಪಾರ್ಕ್ಸ್ ಆ್ಯಂಡ್ ಬುಸಿನೆಸ್ ಇನ್ಕುö್ಯಬೇಟರ್ ಅಸೋಸಿಯೇಷನ್ (ISಃಂ) ವತಿಯಿಂದ ಇತ್ತೀಚೆಗೆ ಮುಂಬೈಯಲ್ಲಿ ನಡೆದ ವಾರ್ಷಿಕ ಸಮ್ಮಿಲನ ಕಾರ್ಯಕ್ರಮದಲ್ಲಿ ಕಳೆದೆರಡು ದಶಕಗಳಿಂದ ಆವಿಷ್ಕಾರ ಹಾಗೂ ನವೋದ್ಯಮ ಅಭಿವೃದ್ಧಿ ಕ್ಷೇತ್ರದಲ್ಲಿ ಸಲ್ಲಿಸಿದ ಗಣನೀಯ ಸೇವೆಯನ್ನು ಗುರುತಿಸಿ ಕೊಡಗಿನವರಾದ ಚೋಡುಮಾಡ ಗೀತಾ ಚಂಗಪ್ಪ ಅವರಿಗೆ ಪ್ರಶಸ್ತಿ ನೀಡಲಾಯಿತು.
ಕೇಂದ್ರ ಸರಕಾರದ ಅಧೀನದಲ್ಲಿ ಬರುವ ಖಿಖಇಅ-SಖಿಇP ಸಂಸ್ಥೆಯ ವ್ಯವಸ್ಥಾಪಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಗೀತ ಚಂಗಪ್ಪ ಅವರು ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದಲ್ಲಿ ನವೋದ್ಯಮ ಅಭಿವೃದ್ಧಿ ತರಬೇತಿಯನ್ನು ಪಡೆದು ಈ ಕ್ಷೇತ್ರದಲ್ಲಿ ಯೂರೋಪ್ನ ಹಲವು ರಾಷ್ಟçಗಳು, ಅಮೇರಿಕಾ ಹಾಗೂ ಚೀನಾದಲ್ಲಿ ಅಧ್ಯಯನ ನಡೆಸಿದ್ದಾರೆ. ೨೦೧೮ ರಿಂದ ಚೆನ್ನೆöÊನಲ್ಲಿ ಖಿಖಇಅ-SಖಿಇP ಸಂಸ್ಥೆಯ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಇವರು, ಭಾರತದ ನೀತಿ ಆಯೋಗದ ಅಟಲ್ ಆವಿಷ್ಕಾರ ಯೋಜನೆ, ಅಂತರರಾಷ್ಟಿçÃಯ ಮಟ್ಟದಲ್ಲಿ ವಿಶ್ವ ಬ್ಯಾಂಕ್, ಯು.ಎನ್.ಡಿ.ಪಿ, ಯುನಿಡೊ ಹಾಗೂ ಯುರೋಪಿಯನ್ ಯೂನಿಯನ್ ಸಹಭಾಗಿತ್ವದಲ್ಲಿ ಆವಿಷ್ಕಾರ ಪ್ರೋತ್ಸಾಹ ಯೋಜನೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಗೀತಾ (ತಾಮನೆ ಕೋದಂಡ) ಅವರು ತಮ್ಮ ಪತಿ ಬಿ.ಎಚ್.ಪಿ.ವಿ ಸಂಸ್ಥೆಯ ಮಾಜಿ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಚೋಡುಮಾಡ ಚಂಗಪ್ಪ ಅವರೊಂದಿಗೆ ಚೆನ್ನೆöÊನಲ್ಲಿ ನೆಲೆಸಿದ್ದಾರೆ.