ಸುಂಟಿಕೊಪ್ಪ, ನ. ೨: ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬರು ಶವವಾಗಿ ಪತ್ತೆಯಾಗಿದ್ದು, ಮೃತರ ಅಂತಿಮ ದರ್ಶನಕ್ಕೆ ಬರುತ್ತಿದ್ದ ವೇಳೆ ನಡೆದ ಅಪಘಾತದಲ್ಲಿ ಅವರ ಸಂಬAಧಿ ಸಾವನ್ನಪ್ಪಿ, ನಾಲ್ವರು ಗಾಯಗೊಂಡಿರುವ ಘಟನೆ ನಡೆದಿದೆ.
ಕಳೆದ ನಾಲ್ಕು ದಿನಗಳ ಹಿಂದೆ ನಾಪತ್ತೆಯಾಗಿದ್ದ ಸಮೀಪದ ಕೆದಕಲ್ ಗ್ರಾಮ ಪಂಚಾಯಿತಿಗೆ ಸೇರಿದ ಏಳನೇ ಮೈಲು ನಿವಾಸಿ ಪೌಲ್ ಡಿಸೋಜ ಎಂಬವರ ಮೃತದೇಹ ಗುರುವಾರ ಬೆಳಿಗ್ಗೆ ಸೌಭಾಗ್ಯ ತೋಟದ ಕೆರೆಯಲ್ಲಿ ಪತ್ತೆಯಾಗಿದೆ.
ಅ.೨೯ ರಂದು ಮನೆಯಿಂದ ಹೊರಗೆ ತೆರಳಿದ್ದ ಪೌಲ್ ಡಿಸೋಜ ಅವರು ಮನೆಗೆ ಹಿಂತಿರುಗಿರಲಿಲ್ಲ. ಮನೆಯವರು ಅಕ್ಕಪಕ್ಕ, ಸಂಬAಧಿಕರ ಮನೆಗಳಲ್ಲಿ ವಿಚಾರಿಸಿದ್ದರೂ ಸುಳಿವು ದೊರೆಯದಿದ್ದಾಗ ಈ ಬಗ್ಗೆ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪುಕಾರು ದಾಖಲಿಸಿ ಎಲ್ಲಾ ಕಡೆ ಹುಡುಕಾಟ ನಡೆಸಿದ್ದರು. ಗುರುವಾರ ಬೆಳಿಗ್ಗೆ ಪೌಲ್ ಡಿಸೋಜ ಅವರ ಮೃತದೇಹ ಕೆರೆಯಲ್ಲಿ ಪತ್ತೆಯಾಗಿದ್ದು, ಮೃತದೇಹದಲ್ಲಿ ಕಲ್ಲುಗಳು ಕಟ್ಟಿಕೊಂಡಿರುವುದು ಗೋಚರಿಸಿದೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಮನನೊಂದು ಪೌಲ್ ಡಿಸೋಜ
ಕೆರೆಗೆ ಹಾರಿ ಆತ್ಮಹತ್ಯೆ ಮಾಡಿ ಕೊಂಡಿರುವುದಾಗಿ ಸುಂಟಿಕೊಪ್ಪ ಠಾಣೆಯಲ್ಲಿ
(ಮೊದಲ ಪುಟದಿಂದ) ಪ್ರಕರಣ ದಾಖಲಾಗಿದೆ. ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಸಂಬAಧಿ ಸಾವು
ಪೌಲ್ ಡಿಸೋಜ ಅವರ ಮೃತ ದೇಹದ ಮರಣೋತ್ತರ ಪರೀಕ್ಷೆ ನಡೆದು ಅಂತ್ಯಸAಸ್ಕಾರದ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗುತಿತ್ತು. ಈ ನಡುವೆ ಬೆಂಗಳೂರಿನಲ್ಲಿ ನೆಲೆಸಿರುವ ಮೃತರ ಮಗಳಾದ ವನಿಷಾ ಡಿಸೋಜ,
ಇವರ ಅಣ್ಣನ ಮಕ್ಕಳಾದ ಸಿಲ್ವಿನ್ ಡಿಸೋಜ, ಪ್ರವೀಣ್ ಡಿಸೋಜ, ಇನ್ನಿಬ್ಬರು ಸಂಬAಧಿಕರು ಸಾವಿನ ಸುದ್ದಿ ಅರಿತು ಅಂತ್ಯಸAಸ್ಕಾರದಲ್ಲಿ ಪಾಲ್ಗೊಳ್ಳಲು ಬೆಂಗಳೂರಿನಿAದ ಕಾರಿನಲ್ಲಿ ಬರುತ್ತಿದ್ದರು. ದುರಾದೃಷ್ಟವ ಶಾತ್ ಇವರು ಪ್ರಯಾಣಿಸುತ್ತಿದ್ದ ಕಾರು ಬೆಂಗಳೂರು ಬಳಿಯ ಬಿಡದಿಯಲ್ಲಿ ಡಿವೈಡರ್ಗೆ ಅಪ್ಪಳಿಸಿ ಮಗುಚಿ ಕೊಂಡಿದೆ. ಪರಿಣಾಮ ಕಾರಿನಡಿಯಲ್ಲಿ ಸಿಲುಕಿ ಪೌಲ್ ಡಿಸೋಜ ಅವರ ಅಣ್ಣನ ಮಗನಾದ ಸಿಲ್ವಿನ್ ಡಿಸೋಜ(೪೮) ಅವರು ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ.
ಇನ್ನುಳಿದ ಮಗ್ದಲೀನ್ ಡಿಸೋಜ, ಪ್ರವೀಣ್ ಡಿಸೋಜ, ಸ್ಟೆಲ್ಲ ಡಿಸೋಜ, ವನಿಷಾ ಡಿಸೋಜ ಗಾಯಗೊಂಡು ಅಲ್ಲಿನ ಅಕ್ಷಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಂದೆಡೆ ಪೌಲ್ ಡಿಸೋಜ ಅವರ ಅಕಾಲಿಕ ಸಾವಿನಿಂದ ನೋವಿನಲ್ಲಿರುವ ಅವರ ಕುಟುಂಬಕ್ಕೆ ಅದೇ ಕುಟುಂಬದ ಇನ್ನೋರ್ವ ವ್ಯಕ್ತಿ ವಾಹನ ಅಪಘಾತದಲ್ಲಿ ಸಾವಿಗೀಡಾಗಿ ರುವುದು ಶೋಕ ಸಾಗರಕ್ಕೆ ಮುಳುಗಿಸಿದಂತಾಗಿದೆ. ಮೃತಪಟ್ಟ ಇಬ್ಬರ ಅಂತ್ಯಕ್ರಿಯೆಯು ಸುಂಟಿಕೊಪ್ಪ ಮಾದಾಪುರ ರಸ್ತೆಯಲ್ಲಿರುವ ಕ್ರೆöÊಸ್ತ ಸ್ಮಶಾನದಲ್ಲಿ ಶುಕ್ರವಾರ ನಡೆಯಲಿದೆ.