ಚೆಯ್ಯಂಡಾಣೆ, ನ. ೨: ಸ್ಥಳೀಯ ನರಿಯಂದಡ ಗ್ರಾಮ ಪಂಚಾ ಯಿತಿಯಲ್ಲಿ ಗ್ರಾಮಪಂಚಾಯಿತಿಗೆ ಒಳಪಟ್ಟ ಗ್ರಾಮಸ್ಥರ ತುರ್ತು ಸಭೆ ಆಯೋಜಿಸಲಾಗಿತ್ತು. ಸಭೆಯು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪೆಮ್ಮಂಡ ಕೌಶಿ ಕಾವೇರಮ್ಮ ಅಧ್ಯಕ್ಷತೆಯಲ್ಲಿ ನಡೆಯಿತು.
ಗ್ರಾಮದಲ್ಲಿ ಕೈಗೊಂಡ ಜೆಜೆಎಂ ಕಾಮಗಾರಿ ಪೂರ್ಣಗೊಂಡಿಲ್ಲ ಎಂದು ಗ್ರಾಮಸ್ಥರು ಜೆಜೆಎಂನ ತೌಸೀಫ್ ಅವರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.
ಈ ಸಂದರ್ಭ ಮಾತನಾಡಿದ ಗ್ರಾಮ ಪಂಚಾಯಿತಿ ನಿಕಟಪೂರ್ವ ಅಧ್ಯಕ್ಷ ರಾಜೇಶ್ ಅಚ್ಚಯ್ಯ ಮುಂದಿನ ಮಾಸಿಕ ಸಭೆಯ ಒಳಗಡೆ ಜೆಜೆಎಂನ ಪೂರ್ಣ ಮಾಹಿತಿ ಒದಗಿಸಬೇಕು ಎಂದರು.
ದನೋಜ್ ಪೊಕ್ಕುಳಂಡ್ರ, ಅನಂತ್ ಕುಮಾರ್, ಗ್ರಾಮ ಪಂಚಾ ಯಿತಿ ಸದಸ್ಯ ಮಮ್ಮದ್ ಮಾತನಾಡಿ, ಕೂಡಲೇ ನಮ್ಮ ವ್ಯಾಪ್ತಿಯ ನೀರಿನ ಸಮಸ್ಯೆ ಪರಿಹರಿಸಬೇಕು. ಕೂಡಲೇ ಸಮಸ್ಯೆ ಬಗೆಹರಿಯದಿದ್ದರೆ ಗ್ರಾಮಸ್ಥರ ಸಹಕಾರದೊಂದಿಗೆ ಪ್ರತಿಭಟಿಸಲಾ ಗುವುದು ಎಂದರು.
ಕೊಕೇರಿ ಗ್ರಾಮದ ಚೇನಂಡ ದೀನ ಚಂಗಪ್ಪ ಮಾತನಾಡಿ ಕೊಕೇರಿಯಲ್ಲಿ ನೀರಿನ ಸಮಸ್ಯೆ ಯಿದ್ದು, ಕೂಡಲೇ ಸಂಬAಧಪಟ್ಟ ಇಲಾಖೆ ಜೆಜೆಎಂ ಕಾಮಗಾರಿ ಪೂರ್ತಿಗೊಳಿಸಬೇಕು ಎಂದು ಒತ್ತಾಯಿಸಿದರು.
ಚೇಲಾವರ ಗ್ರಾಮದ ಪವನ್ ಹಾಗೂ ತಿಲಕ ಮಾತನಾಡಿ, ಪತ್ತೇಟಿ ಡ್ಯಾಮ್ ಕಾಮಗಾರಿ ಕಳಪೆಯಾಗಿದ್ದು ನೀರಿನ ಸಮಸ್ಯೆಗೆ ಕೂಡಲೇ ಡ್ಯಾಮ್ ಕಾಮಗಾರಿ ಸರಿಪಡಿಸಿ ಹಾಗೂ ಕಾಮಗಾರಿಯ ಪೂರ್ಣ ಮಾಹಿತಿ ನೀಡುವಂತೆ ಆಗ್ರಹಿಸಿದರು.
ಜೆಜೆಎಂ ತೌಸೀಫ್ ಮಾತನಾಡಿ ಎಡಪಾಲದಲ್ಲಿ ಚೆಕ್ ಡ್ಯಾಮ್ ಮಾಡಿ ಕೂಡಲೇ ನೀರಿನ ಸಮಸ್ಯೆ ಪರಿಹರಿ ಸಲಾಗುವುದು. ಚೇಲಾವರ, ಕೊಕೇರಿ ಭಾಗದಲ್ಲಿ ಕೂಡಲೇ ಕಾಮಗಾರಿ ಪೂರ್ಣಗೊಳಿಸಲಾಗುವುದು. ಮೊದಲ ಹಂತದಲ್ಲಿ ನೀರು ಸರಬರಾಜು ಮಾಡಿ ಪರೀಕ್ಷಿಸಲಾಗುವುದು, ಕೆಲವು ಭಾಗದಲ್ಲಿ ಟ್ಯಾಂಕ್ ನಿರ್ಮಿಸಲು ಸ್ಥಳಾವಕಾಶದ ತೊಂದರೆ ಇದೆ, ಕಿಕ್ಕರೆಗೆ ಅಲ್ಲೇ ಮಿಲ್ ಸಮೀಪದ ಗದ್ದೆಯಲ್ಲಿ ನೀರು ದೊರೆಯುವ ಸಾಧ್ಯತೆ ಇದೆ. ಆದ್ದರಿಂದ ಅಲ್ಲೇ ಬೋರ್‌ವೆಲ್ ನಿರ್ಮಿಸಿ ಕಿಕ್ಕರೆಯ ಸಮಸ್ಯೆ ಪರಿಹರಿಸಲಾಗುವುದು. ಚೇಲಾವರ ಪತ್ತೇಟಿ ಡ್ಯಾಮ್ ಕಾಮಗಾರಿ ಕೂಡ ಸರಿಪಡಿಸ ಲಾಗುವುದು, ಕೆಲವು ಭಾಗದಲ್ಲಿ ಚೆಸ್ಕಾಂ ಇಲಾಖೆಯಿಂದ ಪವರ್ ಸಪ್ಲೆöÊ ನೀಡಲಿಲ್ಲ. ಇದನೆಲ್ಲ ಸರಿಪಡಿಸಿ ಆದಷ್ಟು ಬೇಗ ನೀರಿನ ಸಮಸ್ಯೆ ಬಗೆ ಹರಿಸುವ ಭರವಸೆ ನೀಡಿದರು.
ಈ ಸಂದರ್ಭ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೋಡಿರ ವಿನೋದ್ ನಾಣಯ್ಯ, ಅಭಿವೃದ್ಧಿ ಅಧಿಕಾರಿ ಆಶಾ ಕುಮಾರಿ, ಗ್ರಾ.ಪಂ. ಸದಸ್ಯರು, ಸಿಬ್ಬಂದಿಗಳು, ಗ್ರಾಮಸ್ಥರು ಇದ್ದರು.