ನಾಪೋಕ್ಲು, ನ. ೨: ಅಖಿಲ ಕೊಡವ ಸಮಾಜದ ಅಧ್ಯಕ್ಷರಾಗಿ ಸುಮಾರು ಐದು ದಶಕಗಳ ಕಾಲ ಸೇವೆ ಸಲ್ಲಿಸಿದ್ದ ದಿವಂಗತ ಮಾತಂಡ ಮೊಣ್ಣಪ್ಪನವರ ಜ್ಞಾಪಕಾರ್ಥವಾಗಿ ವೀರಾಜಪೇಟೆಯ ಮುಖ್ಯ ರಸ್ತೆಯೊಂದಕ್ಕೆ ಅವರ ಗೌರವಾರ್ಥ ನಾಮಕರಣ ಮಾಡಲು ಅಖಿಲ ಕೊಡವ ಸಮಾಜ ಮನವಿ ಮಾಡಿದೆ.
ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಅವರಿಗೆ ಅಖಿಲ ಕೊಡವ ಸಮಾಜದ ಪರವಾಗಿ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ ಹಾಗೂ ಗೌರವ ಕಾರ್ಯದರ್ಶಿ ಕೀತಿಯಂಡ ವಿಜಯಕುಮಾರ್ ಮನವಿ ಸಲ್ಲಿಸಿದರು. ಈ ಸಂದರ್ಭ ಕುಂಜಿಲ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಕಲಿಯಂಡ ಸಂಪನ್ ಅಯ್ಯಪ್ಪ ಹಾಜರಿದ್ದರು.