ವೀರಾಜಪೇಟೆ, ನ. ೩ : ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಭಾರತೀಯರನ್ನು ಒಗ್ಗೂಡಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿ ಅಖಂಡ ಭಾರತದ ಪರಿಕಲ್ಪನೆಯನ್ನು ಸಾಕಾರಗೊಳಿಸುವಲ್ಲಿ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರು ಅಮೂಲ್ಯವಾದ ಕೊಡುಗೆ ನೀಡಿದ್ದಾರೆ ಎಂದು ಉಪನ್ಯಾಸಕ ಡಾ. ಜಮೀರ್ ಅಹಮದ್ ಹೇಳಿದರು.
ವೀರಾಜಪೇಟೆ ಪಟ್ಟಣದ ಸರ್ವೋದಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸರ್ದಾರ್ ವಲ್ಲಭಬಾಯಿ ಪಟೇಲ್ರವರ ಜನ್ಮ ದಿನದ ಅಂಗವಾಗಿ ಹಮ್ಮಿಕೊಂಡಿದ್ದ `ರಾಷ್ಟಿçÃಯ ಏಕತಾ ದಿವಸ' ಸಮಾರಂಭದಲ್ಲಿ ಮಾತನಾಡಿದ ಅವರು, ಪಟೇಲ್ ಅವರ ಈ ರಾಜಿಯಾಗದ ಬದ್ಧತೆಯು ಅವರಿಗೆ ‘‘ಭಾರತದ ಉಕ್ಕಿನ ಮನುಷ್ಯ’’ ಎಂಬ ಗೌರವವನ್ನು ತಂದುಕೊಟ್ಟಿತು. ಭಾರತದ ಸ್ವಾತಂತ್ರö್ಯಕ್ಕಾಗಿ ಒಟ್ಟಾಗಿ ನಿಲ್ಲುವ ಪರಿಕಲ್ಪನೆ ಹೊಂದಿದ್ದರು. ಹರಿದು ಹಂಚಿಹೋಗಿದ್ದ ವಿವಿಧ ಮಹಾಸಂಸ್ಥಾನಗಳನ್ನು ಒಗ್ಗೂಡಿಸುವ ಜವಾಬ್ದಾರಿ ವಹಿಸಿಕೊಂಡು ಅಖಂಡ ಭಾರತದ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಸ್ಮರಿಸಿದರು.
ಇದೇ ಸಂದರ್ಭ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಾಂಶುಪಾಲೆ ಡಾ. ವಾಣಿ ಎಂ. ಮಾತನಾಡಿದರು. ದಿವ್ಯ ಎಸ್.ವಿ. ಹಾಗೂ ಭಾವನ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪ್ರಶಿಕ್ಷಣಾರ್ಥಿ ಸಂಗಪ್ಪ ಅಂಗಡಿ ಪ್ರಾರ್ಥಸಿ, ರೇಖಾ ಕೆ. ಬಿ. ಸ್ವಾಗತಿಸಿ, ರಶ್ಮಿತಾ ವಂದಿಸಿ, ಆಶಿಕಾ ಮತ್ತು ಕೌಶಿಕ್ ಕಾರ್ಯಕ್ರಮ ನಿರೂಪಿಸಿದರು.