ಮಡಿಕೇರಿ: ಎಲ್ಲಾ ಭಾಷೆಗಳನ್ನು ಗೌರವಯುತವಾಗಿ ಕಾಣುವ ಸ್ವೀಕೃತಿಯ ಮನೋಭಾವ ಪ್ರತಿಯೊಬ್ಬ ರೂಪಿಸಿಕೊಳ್ಳಬೇಕು. ಪ್ರಸ್ತುತ ಸಂದರ್ಭದಲ್ಲಿ ಪ್ರಾದೇಶಿಕ ಭಾಷೆಗೂ ಸಾಹಿತ್ಯ ಸಂಸ್ಕöÈತಿಯ ಹಿನ್ನೆಲೆಯಲ್ಲಿ ಭಾಷಿಕ ಎಚ್ಚರವೊಂದು ಒಡಮೂಡಿದೆ. ಆದರೂ ಸಹ ನಮ್ಮ ನಡುವೆ ಪ್ರತ್ಯೇಕತೆ ಕೂಗು ಮೂಡುತ್ತಲೇ ಇದೆ. ನಾವು ಎಚ್ಚರಿಕೆಯಿಂದ ಭಾಷೆಯನ್ನು ಒಳ ಗೊಳ್ಳುವ ಪ್ರಯತ್ನ ಮಾಡಬೇಕಾಗಿದೆ. ಮಾತ್ರವಲ್ಲ ಮಕ್ಕಳು ಕನ್ನಡದ ಜೊತೆಯಲ್ಲಿ ತಮ್ಮ ಮಾತೃ ಭಾಷೆಯಲ್ಲಿ ಕಲಿಕೆಯನ್ನು ಮುಂದುವರೆಸುವ ಅಗತ್ಯವಿದೆ ಎಂದು ಕಾಲೇಜಿನ ಉಪನ್ಯಾಸಕ ಡಾ. ಎನ್.ವಿ. ಕರುಣಾಕರ ಅಭಿಪ್ರಾಯಪಟ್ಟರು.

ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಕನ್ನಡ ವಿಭಾಗ, ಎನ್‌ಎಸ್‌ಎಸ್, ಎನ್‌ಸಿ.ಸಿ, ಇಸಿ-ಸಿಸಿ, ಕ್ರೀಡಾ ಹಾಗೂ ವಿದ್ಯಾರ್ಥಿ ಸಂಘದ ವತಿಯಿಂದ ನಡೆದ "ಹೆಸರಾಯಿತು ಕರ್ನಾಟಕ-೫೦ ರಾಜ್ಯೋತ್ಸವ ಸಂಭ್ರಮ" ಕಾರ್ಯಕ್ರಮ ದಲ್ಲಿ ರಾಜ್ಯೋತ್ಸವ ಸಂದರ್ಭದಲ್ಲಿ ಭ್ರಷ್ಟಾಚಾರ ಮುಕ್ತ ಕರ್ನಾಟಕ ಎಂಬ ವಿಷಯದ ಕುರಿತು ಅವರು ಮಾತನಾಡಿದರು.

ಹಿಂದೆ ಮಂಗಳೂರು ವಿಶ್ವವಿದ್ಯಾ ನಿಲಯದ ಕನ್ನಡ ಪಠ್ಯ ಪುಸ್ತಕಗಳಲ್ಲಿ ಪ್ರಾದೇಶಿಕ ಭಾಷೆಗಳಿಗೂ ಅವಕಾಶ ಕಲ್ಪಿಸಲಾಗಿತ್ತು. ಆ ಬಗೆಯಲ್ಲಿ ಕನ್ನಡ ತನ್ನ ಸಹೋದರ ಭಾಷೆಗಳನ್ನು ಒಳಗೊಳ್ಳುವ ಪ್ರಕ್ರಿಯೆಗೆ ನಿರಂತರ ಚಾಲನೆ ನೀಡಬೇಕು. ಆ ಮೂಲಕ ಕನ್ನಡದ ಜೊತೆಯಲ್ಲಿ ಪ್ರಾದೇಶಿಕ ಭಾಷೆಗಳನ್ನು ಉಳಿಸಿ ಬೆಳೆಸುವ ಕೆಲಸ ಆಗಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕಾಲೇಜಿನ ಪೋಷಕ ಶಿಕ್ಷಕ ಸಂಘದ ಅಧ್ಯಕ್ಷ ಕೆ.ಪಿ. ಮಾಥ್ಯೂ, ವಿದ್ಯಾರ್ಥಿಗಳು ಉತ್ತಮ ಆಲೋಚನೆಗಳನ್ನು ರೂಢಿಸಿ ಕೊಳ್ಳಬೇಕು. ಓದುವ ಹವ್ಯಾಸ ಬೆಳೆಸಿ ಕೊಳ್ಳಬೇಕು ಎಂದು ಕರೆ ನೀಡಿದರು.

ಕಾಲೇಜಿನ ಐಕ್ಯುಎಸಿ ಸಂಯೋಜಕ ಡಾ. ರಾಜೇಂದ್ರ ಮಾತನಾಡಿ, ಕರ್ನಾಟ ವೈವಿಧ್ಯಮಯ ಭೂಪ್ರದೇಶ. ಇಲ್ಲಿ ಹಲವು ಸಂಸ್ಕöÈತಿಗಳು ಸಹಜವಾಗಿ ಸೌಹಾರ್ದ ಪರಂಪರೆಯನ್ನು ಹುಟ್ಟುಹಾಕುವ ಪ್ರಯತ್ನ ಮಾಡಿವೆ. ಈ ಸೌಹಾರ್ದ ಪರಂಪರೆಗೆ ಕನ್ನಡ ಭಾಷೆಯೇ ಮೂಲಧಾತುವಾಗಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ. ಬಿ. ರಾಘವ, ಕನ್ನಡ ಸಂರಕ್ಷಣೆ ಯುವ ಜನಾಂಗದ ಕರ್ತವ್ಯ. ಯುವ ಜನಾಂಗವನ್ನು ಉತ್ತಮ ಹಾದಿಯಲ್ಲಿ ಕೊಂಡು ಹೋಗಬೇಕಾದ ಜವಾಬ್ದಾರಿ ನಮ್ಮೆಲ್ಲರದ್ದು ಎಂದರು.

ವಿಶ್ವದಲ್ಲಿ ಶೇ. ೨ ವಿಜ್ಞಾನಿಗಳ ವಿಭಾಗದಲ್ಲಿ ಸ್ಥಾನ ಪಡೆದುಕೊಂಡ ಭಾರತದಲ್ಲಿ ೩ನೇ ಸ್ಥಾನದಲ್ಲಿರುವ ಕಾಲೇಜಿನ ಯುವ ವಿಜ್ಞಾನಿ ರಸಾಯನ ಶಾಸ್ತç ವಿಭಾಗದ ಡಾ. ಮಂಜುನಾಥ್ ಅವರಿಗೆ, ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಪ್ರೊ. ನಾಗರಾಜ ಅವರಿಗೆ ಹಾಗೂ ಮೂವತ್ತು ವರ್ಷಗಳಿಂದ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ ಡಾ. ಎನ್.ವಿ. ಕರುಣಾಕರ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಎನ್‌ಎಸ್‌ಎಸ್ ಘಟಕದ ಯೋಜನಾಧಿಕಾರಿ ಡಾ. ಗಾಯತ್ರಿ, ಇಸಿ-ಸಿಸಿ ಸಂಯೋಜಕಿ ಡಾ. ರೇಣುಶ್ರೀ, ಗಣವಿಜ್ಞಾನ ವಿಭಾಗದ ಪ್ರಾಧ್ಯಾಪಕ ರವಿಶಂಕರ್, ಹಿಂದಿ ವಿಭಾಗದ ಡಾ. ಶ್ರೀಧರ ಹೆಗ್ಡೆ ಹಾಜರಿದ್ದರು.

ಕಾರ್ಯಕ್ರಮವನ್ನು ಕಾಲೇಜಿನ ಪ್ರಥಮ ಐಚ್ಛಿಕ ವಿದ್ಯಾರ್ಥಿ ನಿಧಾ ಫಜಿû್ಲÃ ನಿರೂಪಿಸಿದರು. ದೈಹಿಕ ಶಿಕ್ಷಣ ವಿಭಾಗದ ಅಧ್ಯಾಪಕ ರಮೇಶ್ ಸ್ವಾಗತಿಸಿದರು. ಕನ್ನಡ ವಿಭಾಗದ ಅಧ್ಯಾಪಕಿ ಡಾ. ಟಿ.ಎಸ್. ಮಹಾಲಕ್ಷಿ÷್ಮ ವಂದಿಸಿದರು.ಮಡಿಕೇರಿ: ಕಡಗದಾಳು ಶ್ರೀ ಬೊಟ್ಲಪ್ಪ ಯುವ ಸಂಘದ ಆವರಣದಲ್ಲಿ ೬೮ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಸಂಘದ ಅಧ್ಯಕ್ಷ ಕೆ.ಪಿ. ಬೆಳ್ಯಪ್ಪ ಧ್ವಜಾರೋಹಣ ನೆರವೇರಿಸಿದರು.

ಸಂಘದ ಗೌರವ ಸಲಹೆಗಾರ ಬಿ.ಎಸ್. ಜಯಪ್ಪ, ಉಪಾಧ್ಯಕ್ಷೆ ದೀಪ, ಸಹ ಕಾರ್ಯದರ್ಶಿ ಪ್ರತಿಕ್ಷ ಕೆ.ಬಿ. ಹಾಜರಿದ್ದರು. ಸಂಘದ ಸದಸ್ಯ ಕೆ.ಟಿ. ಯೋಗೇಶ್ ಕಾರ್ಯಕ್ರಮ ನಿರೂಪಿಸಿದರು. ಸರ್ವರ ಸಮ್ಮುಖದಲ್ಲಿ ನಾಡಗೀತೆಯನ್ನು ಹಾಡಲಾಯಿತು. ದಿನದ ಮಹತ್ವದ ಕುರಿತು ಸಂಘದ ಅಧ್ಯಕ್ಷ ಕೆ.ಪಿ. ಬೆಳ್ಯಪ್ಪ, ಸಂಘದ ಗೌರವ ಸಲಹೆಗಾರ ಬಿ.ಎಸ್. ಜಯಪ್ಪ, ಪಿ.ಎಂ. ಸುರೇಶ್ ಮಾತನಾಡಿದರು. ಮಕ್ಕಳ ಸಂಘದ ಅಧ್ಯಕ್ಷ ಪಿ.ಪಿ. ನಿತೇಶ್ ಅವರು ಹಾಗೂ ಯುವ ಸಂಘದ ಎಲ್ಲಾ ಸದಸ್ಯರುಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಂಘದ ಸಹ ಕಾರ್ಯದರ್ಶಿ ಪ್ರತಿಕ್ಷ ಕೆ.ಬಿ. ವಂದಿಸಿದರು.ಮಡಿಕೇರಿ: ಕಡಗದಾಳು ಶ್ರೀ ಬೊಟ್ಲಪ್ಪ ಯುವ ಸಂಘದ ಆವರಣದಲ್ಲಿ ೬೮ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಸಂಘದ ಅಧ್ಯಕ್ಷ ಕೆ.ಪಿ. ಬೆಳ್ಯಪ್ಪ ಧ್ವಜಾರೋಹಣ ನೆರವೇರಿಸಿದರು.

ಸಂಘದ ಗೌರವ ಸಲಹೆಗಾರ ಬಿ.ಎಸ್. ಜಯಪ್ಪ, ಉಪಾಧ್ಯಕ್ಷೆ ದೀಪ, ಸಹ ಕಾರ್ಯದರ್ಶಿ ಪ್ರತಿಕ್ಷ ಕೆ.ಬಿ. ಹಾಜರಿದ್ದರು. ಸಂಘದ ಸದಸ್ಯ ಕೆ.ಟಿ. ಯೋಗೇಶ್ ಕಾರ್ಯಕ್ರಮ ನಿರೂಪಿಸಿದರು. ಸರ್ವರ ಸಮ್ಮುಖದಲ್ಲಿ ನಾಡಗೀತೆಯನ್ನು ಹಾಡಲಾಯಿತು. ದಿನದ ಮಹತ್ವದ ಕುರಿತು ಸಂಘದ ಅಧ್ಯಕ್ಷ ಕೆ.ಪಿ. ಬೆಳ್ಯಪ್ಪ, ಸಂಘದ ಗೌರವ ಸಲಹೆಗಾರ ಬಿ.ಎಸ್. ಜಯಪ್ಪ, ಪಿ.ಎಂ. ಸುರೇಶ್ ಮಾತನಾಡಿದರು. ಮಕ್ಕಳ ಸಂಘದ ಅಧ್ಯಕ್ಷ ಪಿ.ಪಿ. ನಿತೇಶ್ ಅವರು ಹಾಗೂ ಯುವ ಸಂಘದ ಎಲ್ಲಾ ಸದಸ್ಯರುಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಂಘದ ಸಹ ಕಾರ್ಯದರ್ಶಿ ಪ್ರತಿಕ್ಷ ಕೆ.ಬಿ. ವಂದಿಸಿದರು.ಸೋಮವಾರಪೇಟೆ: ಇಲ್ಲಿನ ಆಟೋ ಚಾಲಕರು ಮತ್ತು ಮಾಲೀಕರ ಸಂಘದಿAದ ಆಯೋಜ ನೆಗೊಂಡಿದ್ದ ೧೬ನೇ ವರ್ಷದ ಕನ್ನಡ ರಾಜ್ಯೋತ್ಸವ ಸಮಾರಂಭ ಅರ್ಥ ಪೂರ್ಣ ಹಾಗೂ ಅದ್ದೂರಿಯಾಗಿ ನೆರವೇರಿತು.

ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಭವ್ಯ ವೇದಿಕೆಯಲ್ಲಿ ಮೂಡಿಬಂದ ಕುಣಿಯೋಣು ಬಾರಾ ನೃತ್ಯ ಸ್ಪರ್ಧೆ ಮತ್ತು ಸಂಗೀತ ರಸಮಂಜರಿ ಕಾರ್ಯಕ್ರಮಗಳು ಜನಮನಸೂರೆಗೊಂಡವು.

ಬೆಳಿಗ್ಗೆ ಆಟೋ ನಿಲ್ದಾಣದಲ್ಲಿ ಧ್ವಜಾರೋಹಣ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಂತರ ಕಕ್ಕೆಹೊಳೆ ಜಂಕ್ಷನ್‌ನಿAದ ಡೊಳ್ಳುಕುಣಿತ ದೊಂದಿಗೆ ಆಟೋಗಳ ಮೆರವಣಿಗೆ ನಡೆಯಿತು. ಈ ಸಂದರ್ಭ ಪಟ್ಟಣದ ಎಲ್ಲಾ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಲಾಯಿತು.

ಬಸ್ ನಿಲ್ದಾಣದ ವೇದಿಕೆಯಲ್ಲಿ ಏರ್ಪಟ್ಟಿದ್ದ ರಾಜ್ಯೋತ್ಸವ ಸಮಾರಂಭದ ಉದ್ಘಾಟನೆಯನ್ನು ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ ಸೇರಿದಂತೆ ಇತರರು ನೆರವೇರಿಸಿದರು. ಈ ಸಂದರ್ಭ ಮಾತನಾಡಿದ ಎಸ್.ಜಿ. ಮೇದಪ್ಪ, ಆಟೋ ಚಾಲಕರು ಮತ್ತು ಮಾಲೀಕರ ಸಂಘದಿAದ ಕಳೆದ ೧೬ ವರ್ಷಗಳಿಂದ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಿಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರು.

ರಾಷ್ಟಿçÃಯ, ನಾಡ ಹಬ್ಬಗಳು ಸಂಭ್ರಮ ಹಾಗೂ ಜಾಗೃತಿಗೆ ವೇದಿಕೆ ಯಾಗಿವೆ. ಕನ್ನಡ ಭಾಷೆ, ಸಾಹಿತ್ಯವು ಮೇರುಮಟ್ಟದಲ್ಲಿದೆ. ಅತೀ ಹೆಚ್ಚು ಜ್ಞಾನಪೀಠ ಪ್ರಶಸ್ತಿಗೆ ಕನ್ನಡ ಭಾಜನ ವಾಗಿರುವುದು ಕನ್ನಡ ನಾಡಿನ ಹೆಮ್ಮೆ ಯಾಗಿದೆ. ಪ್ರತಿದಿನ ಕನ್ನಡ ಬಳಸುವ ಮೂಲಕ ಭಾಷೆಯ ಉಳಿವಿಗೆ ಎಲ್ಲರೂ ಶ್ರಮಿಸಬೇಕು. ಆಟೋ ಚಾಲಕರು ತಮ್ಮ ವೃತ್ತಿಯೊಂದಿಗೆ ಕನ್ನಡದ ಬೆಳವಣಿಗೆಗೆ ಹೆಚ್ಚಿನ ಕೊಡುಗೆ ನೀಡುತ್ತಿದ್ದಾರೆ ಎಂದರು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ಹೆಚ್.ಕೆ. ಗಂಗಾಧರ್ ವಹಿಸಿದ್ದರು. ವೇದಿಕೆಯಲ್ಲಿ ಚೌಡ್ಲು ವಿಎಸ್‌ಎಸ್ ಎನ್ ಅಧ್ಯಕ್ಷ ಕೆ.ಟಿ. ಪರಮೇಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜು, ಭುವನ ಮಂದಾರ ರೈತ ಉತ್ಪಾದಕರ ಸಂಸ್ಥೆಯ ಅಧ್ಯಕ್ಷ ಎಸ್‌ಎಂ. ಡಿಸಿಲ್ವಾ, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಕೆ.ಎನ್. ದೀಪಕ್, ಇಂದಿರಾಗಾAಧಿ ಅಭಿಮಾನಿಗಳ ಸಂಘದ ಅಧ್ಯಕ್ಷ ಹೆಚ್.ಎ. ನಾಗರಾಜು, ಬೇಳೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಮಂದಣ್ಣ, ಕನ್ನಡ ರಾಜ್ಯೋತ್ಸವ ಸಮಿತಿ ಗೌರವಾಧ್ಯಕ್ಷ ಪಾಣತ್ತಲೆ ಶಶಿಧರ್, ಸಂಘದ ಉಪಾಧ್ಯಕ್ಷ ಕರೀಂ ಸೇರಿದಂತೆ ಇತರರು ಉಪಸ್ಥಿತರಿದ್ದರು. ನಂತರ ಪ್ರಾಥಮಿಕ, ಪ್ರೌಢ ಹಾಗೂ ಕಾಲೇಜು ವಿಭಾಗದಲ್ಲಿ ವಿದ್ಯಾರ್ಥಿಗಳಿಗೆ ಕುಣಿಯೋಣು ಬಾರಾ ನೃತ್ಯ ಸ್ಪರ್ಧೆ ನಡೆಯಿತು. ಮಧ್ಯಾಹ್ನ ಸಾವಿರಾರು ಮಂದಿ ಸಾರ್ವಜನಿಕರಿಗೆ ಅನ್ನದಾನ ನಡೆಯಿತು. ಸಂಜೆ ಸಂಗೀತ ನಿರ್ದೇಶಕ ಮಹೇಶ್ ಕರ್ಣ ನೇತೃತ್ವದ ತಂಡದಿAದ ಮೂಡಿ ಬಂದ ಸಂಗೀತ ರಸಮಂಜರಿ ಕಾರ್ಯಕ್ರಮ ಜನಮನಸೂರೆ ಗೊಳ್ಳುವಂತೆ ಮಾಡಿತು. ಇದ ರೊಂದಿಗೆ ಸರಿಗಮಪ, ಎದೆತುಂಬಿ ಹಾಡುವೆನು ಕಾರ್ಯಕ್ರಮ ಖ್ಯಾತಿಯ ಕಲಾವಿದರ ಸಂಗೀತ ಸುಧೆ, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮದ ನೃತ್ಯಪಟು ಗಳಿಂದ ಮೂಡಿಬಂದ ನೃತ್ಯ ಕಾರ್ಯಕ್ರಮ ಎಲ್ಲರನ್ನೂ ರಂಜಿಸಿತು.

ಸಮಾರೋಪ ಸಮಾರಂಭದಲ್ಲಿ ರಾಜ್ಯೋತ್ಸವ ಸಮಿತಿ ಗೌರವಾಧ್ಯಕ್ಷ ಪಾಣತ್ತಲೆ ಶಶಿಧರ್, ವಿದ್ಯಾ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್‌ನ ವ್ಯವಸ್ಥಾಪಕ ಸುಲೈಮಾನ್, ಮಾಜೀ ಸೈನಿಕ ಬಿ.ಆರ್. ಈರಪ್ಪ, ಹಾಕಿ ಕ್ರೀಡಾಪಟು ಎಸ್.ಆರ್. ಪುಣ್ಯ ಅವರುಗಳನ್ನು ಸನ್ಮಾನಿಸಲಾಯಿತು.

ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎಸ್. ಜನಾರ್ಧನ್, ಉಪಾಧ್ಯಕ್ಷ ಅಬ್ದುಲ್ ಕರೀಂ, ಖಜಾಂಚಿ ಸುದೀಪ್, ಉಪ ಕಾರ್ಯದರ್ಶಿ ಪಿ.ಎನ್. ರಮೇಶ್, ಸಹ ಕಾರ್ಯದರ್ಶಿ ಕೆ.ವಿ. ಪ್ರಭಾಕರ್, ರಾಜ್ಯೋತ್ಸವ ಸಮಿತಿ ಗೌರವಾಧ್ಯಕ್ಷ ಪಾಣತ್ತಲೆ ಶಶಿಧರ್, ಜೇಸೀ ಅಧ್ಯಕ್ಷೆ ಎಂ.ಎ. ರುಬೀನಾ ಸೇರಿದಂತೆ ಸಂಘದ ಪದಾಧಿಕಾರಿಗಳು ಕಾರ್ಯಕ್ರಮ ನಿರ್ವಹಿಸಿದರು.ಮಡಿಕೇರಿ: ಮಹದೇವಪೇಟೆ ಮಹಿಳಾ ಸಹಕಾರ ಸಂಘದಲ್ಲಿ ಕನ್ನಡ ರಾಜ್ಯೋತ್ಸವವನ್ನು ಸಂಘದ ಅಧ್ಯಕ್ಷೆ ಸವಿತಾ ಭಟ್ ಅವರ ಅಧ್ಯಕ್ಷತೆಯಲ್ಲಿ ಸಂಭ್ರಮದಿAದ ಆಚರಿಸಲಾಯಿತು.

ಬೆಳಿಗ್ಗೆ ೯ ಗಂಟೆಗೆ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ನಂತರ ರಾಜ್ಯೋತ್ಸವ ಸಂಭ್ರಮಾಚರಣೆಯನ್ನು ನಡೆಸಲಾಯಿತು. ಸಂಘದ ಪ್ರೇಮಾ ರಾಘವಯ್ಯ ಮತ್ತು ತಂಡದವರು ಮಡಿಕೇರಿ: ಮಹದೇವಪೇಟೆ ಮಹಿಳಾ ಸಹಕಾರ ಸಂಘದಲ್ಲಿ ಕನ್ನಡ ರಾಜ್ಯೋತ್ಸವವನ್ನು ಸಂಘದ ಅಧ್ಯಕ್ಷೆ ಸವಿತಾ ಭಟ್ ಅವರ ಅಧ್ಯಕ್ಷತೆಯಲ್ಲಿ ಸಂಭ್ರಮದಿAದ ಆಚರಿಸಲಾಯಿತು.

ಬೆಳಿಗ್ಗೆ ೯ ಗಂಟೆಗೆ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ನಂತರ ರಾಜ್ಯೋತ್ಸವ ಸಂಭ್ರಮಾಚರಣೆಯನ್ನು ನಡೆಸಲಾಯಿತು. ಸಂಘದ ಪ್ರೇಮಾ ರಾಘವಯ್ಯ ಮತ್ತು ತಂಡದವರು ಪ್ರಾರ್ಥಿಸಿದರೆ, ಸಂಘದ ಅಧ್ಯಕ್ಷೆ ಸವಿತಾ ಭಟ್ ಸ್ವಾಗತ ಮತ್ತು ಪ್ರಾಸ್ತಾವಿಕ ಭಾಷಣ ಮಾಡಿದರು. ನಂತರ ಮೇ. ಡಾ. ಕುಶ್ವಂತ್ ಕೋಳಿಬೈಲು ಅವರನ್ನು ಸನ್ಮಾನಿಸಲಾಯಿತು.

ಸಂಘದ ಸದಸ್ಯೆಯರಿಂದ ಗೀತಗಾಯನ ಕಾರ್ಯಕ್ರಮ ನಡೆಯಿತು. ರಾಜ್ಯೋತ್ಸವದ ಅಂಗವಾಗಿ ನಡೆದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನಗಳನ್ನು ವಿತರಿಸ ಲಾಯಿತು. ಕಾರ್ಯಕ್ರಮಗಳನ್ನು ಅರವಿಂದ ಅಣ್ಣಪ್ಪ ನಿರೂಪಿಸಿದರೆ, ಸುಶೀಲಾ ವಾಸುದೇವ್ ವಂದಿಸಿದರು. ಸಂಘದ ಉಪಾಧ್ಯಕ್ಷೆ ಶೈಲಾ ಮಂಜುನಾಥ್, ಆಡಳಿತ ಮಂಡಳಿಯ ಸದಸ್ಯೆಯರಾದ ಆಯಿಷಾ ಹಮೀದ್, ಶುಭಾ ವಿಶ್ವನಾಥ್, ರೂಪಾ ಸುಮಂತ್, ಕಮಲಾ ಸುಬ್ಬಯ್ಯ ಮತ್ತು ಸಂಘದ ಇತರ ಸದಸ್ಯೆಯರು ಉಪಸ್ಥಿತರಿದ್ದರು.ಚೆಯ್ಯಂಡಾಣೆ: ಸ್ಥಳೀಯ ಕರಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೬೮ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.

ಮುಖ್ಯ ಶಿಕ್ಷಕಿ ಲೀಲಾವತಿ ದಿನದ ಮಹತ್ವದ ಕುರಿತು ಮಾತನಾಡಿದರು. ನಂತರ ವಿದ್ಯಾರ್ಥಿಗಳಿಂದ ಕೋಟಿಕಂಠ ಗಾಯನ ಗೀತೆ ಹಾಡಲಾಯಿತು. ಕಾರ್ಯಕ್ರಮದಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.ಶನಿವಾರಸಂತೆ: ಸಮೀಪದ ಕೊಡ್ಲಿಪೇಟೆಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ೬೮ನೇ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿAದ ಆಚರಿಸಲಾಯಿತು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಡಿ.ಎನ್. ವಸಂತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡ ನಾಡು-ನುಡಿಯ ವೈಭವ ವಿಶಿಷ್ಠವಾಗಿದೆ. ಕನ್ನಡ ಭಾಷೆಗೆ ೨ ಸಾವಿರ ವರ್ಷಗಳ ಇತಿಹಾಸವಿದ್ದು ೮ ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದು ಸಮೃದ್ಧ ಭಾಷೆಯಾಗಿ ಬೆಳೆದಿದೆ ಎಂದರು.

ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಕನ್ನಡ ಭಾಷೆ, ನೆಲ-ಜಲದ ಬಗ್ಗೆ ಮಾತನಾಡಿದರು. ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸಿ ರಂಜಿಸಿದರು. ಕನ್ನಡ ಸಾಹಿತ್ಯದ ಬಗ್ಗೆ ನಡೆದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಕರ್ನಾಟಕ ರತ್ನ ಡಾ. ಪುನೀತ್ ರಾಜ್‌ಕುಮಾರ್ ಅವರನ್ನು ಸ್ಮರಿಸಿ, ಅವರ ಗೀತೆಗಳನ್ನು ಹಾಡುವ ಮೂಲಕ ಗೌರವ ಸಮರ್ಪಿಸಿದರು.

ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಮಮತಾ ರಮೇಶ್, ನೂರ್ ಜಹಾನ್, ಮಮತಾ, ಜರೀನಾಬಾನು, ಗ್ರಾಮ ಪಂಚಾಯಿತಿ ಸದಸ್ಯೆ ಅಶ್ವಿನಿ, ಮುಖ್ಯಶಿಕ್ಷಕಿ ಆಶಾ, ಶಿಕ್ಷಕರು ಉಪಸ್ಥಿತರಿದ್ದರು. ಶಿಕ್ಷಕಿಯರಾದ ಕವಿತಾ ನಿರೂಪಿಸಿ, ಗೌರಮ್ಮ ಸ್ವಾಗತಿಸಿ, ರೀನಾ ವಂದಿಸಿದರು.ನಾಪೋಕ್ಲು: ಕರ್ನಾಟಕದ ಏಕೀಕರಣಕ್ಕಾಗಿ ಹಲವು ಗಣ್ಯರು ದುಡಿದಿದ್ದು, ಅವರನ್ನು ಸ್ಮರಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ಶ್ರೀರಾಮ ಟ್ರಸ್ಟ್ ವಿದ್ಯಾಸಂಸ್ಥೆಯ ನಿರ್ದೇಶಕ ಮಕ್ಕಿ ಸುಬ್ರಮಣ್ಯ ಹೇಳಿದರು.

ಇಲ್ಲಿನ ಶ್ರೀರಾಮ ಟ್ರಸ್ಟ್ ವಿದ್ಯಾಸಂಸ್ಥೆಯಲ್ಲಿ ಆಯೋಜಿಸ ಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕನ್ನಡ ಭಾಷೆಯ ಬೆಳವಣಿಗೆಗೆ ಹಲವು ಸಾಹಿತಿಗಳು ಶ್ರಮಿಸುತ್ತಿದ್ದು, ನಾಡು ಸಮೃದ್ಧವಾಗಿದೆ ಎಂದರು. ಪ್ರಾಂಶುಪಾಲೆ ಬಿ.ಎಂ. ಶಾರದ ಮಾತನಾಡಿ, ಮೈಸೂರು ಪ್ರಾಂತ್ಯಕ್ಕೆ ಕರ್ನಾಟಕ ರಾಜ್ಯವೆಂದು ೧೯೭೩ ರಲ್ಲಿ ಮರುನಾಮಕರಣ ಮಾಡಲಾಯಿತು. ಅದರ ಸುವರ್ಣ ಸಂಭ್ರಮವನ್ನು ಇಂದು ಆಚರಿಸಲಾಗುತ್ತಿದೆ ಎಂದು ದಿನದ ಮಹತ್ವದ ಬಗ್ಗೆ ಮಾತನಾಡಿದರು. ಶಿಕ್ಷಕಿ ಸೀತಮ್ಮ ಹಾಗೂ ವಿದ್ಯಾರ್ಥಿಗಳು ದಿನದ ಮಹತ್ವದ ಕುರಿತು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಉಪಾಧ್ಯಕ್ಷ ಕಲಿಯಂಡ ಹ್ಯಾರಿ ಮಂದಣ್ಣ ವಹಿಸಿದ್ದರು. ಕಾರ್ಯಕ್ರಮದಲ್ಲಿ ನಿರ್ದೇಶಕರುಗಳಾದ ಬಿದ್ದಾಟಂಡ ಪಾಪ ಮುದ್ದಯ್ಯ, ಬೊಳ್ಳಚೆಟ್ಟಿರ ಸುರೇಶ್, ಅಪ್ಪಾರಂಡ ಅಪ್ಪಯ್ಯ, ಶಾಲಾ ಶಿಕ್ಷಕ ವೃಂದ, ವಿದ್ಯಾರ್ಥಿಗಳು ಹಾಜರಿದ್ದರು.

ಸಂಸ್ಥೆಯಲ್ಲಿ ೧೪ ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಬಿ.ಎಂ. ಪೆಮ್ಮಯ್ಯ ಅವರನ್ನು ಸಂಸ್ಥೆಯ ಪರವಾಗಿ ಸನ್ಮಾನಿಸಿ, ಗೌರವಿಸಲಾಯಿತು.

(ಮುಂದುವರಿಯುವುದು)