ಗುಡ್ಡೆಹೊಸೂರು, ನ. ೩: ಇಲ್ಲಿಗೆ ಸಮೀಪದ ಬಸವನಹಳ್ಳಿಯ ಶ್ರೀ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಭಾಂಗಣದಲ್ಲಿ ಕುಶಾಲನಗರ ಕನ್ನಡಸಿರಿ ಸ್ನೇಹ ಬಳಗದ ವತಿಯಿಂದ ೫೦ನೇ ವರ್ಷದ ಕನ್ನಡ ರಾಜ್ಯೋತ್ಸವ ಮತ್ತು "ಸುವರ್ಣ ಹೆಜ್ಜೆಯಲ್ಲಿ ಕರ್ನಾಟಕ" ಎಂಬ ವಿಚಾರಗೋಷ್ಠಿ ಕಾರ್ಯಕ್ರಮ ನಡೆಯಿತು.
ಬಸವನಹಳ್ಳಿಯ ಕಾಲೇಜಿನ ಪ್ರಾಂಶುಪಾಲ ಜೆ. ಪ್ರಕಾಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಹಿರಿಯ ಪತ್ರಕರ್ತರು ಹಾಗೂ ಸಾಹಿತಿ ಭಾರಧ್ವಾಜ್ ಕೆ.ಆನಂದ ತೀರ್ಥ ಉದ್ಘಾಟಿಸಿದರು. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ನಿಕಟಪೂರ್ವ ಅಧ್ಯಕ್ಷರು ಮತ್ತು ಕನ್ನಡ ಸಿರಿ ಸ್ನೇಹಬಳಗದ ಅಧ್ಯಕ್ಷ ಬಿ.ಎಸ್. ಲೊಕೇಶ್ ಸಾಗರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಶಾಲನಗರದ ಪುರಸಭೆಯ ಸದಸ್ಯ ವಿ.ಎಸ್. ಆನಂದ್ ಕುಮಾರ್, ಕುಶಾಲನಗರ ಶಾಲೆಯ ಮುಖ್ಯ ಶಿಕ್ಷಕಿ ಪುಷ್ಪ ಅವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಶಿರಂಗಾಲ ಕಾಲೇಜಿನ ಉಪಾನ್ಯಾಸಕ ಹಂಡ್ರAಗಿ ನಾಗರಾಜ್, ಕುಶಾಲನಗರ ರೋಟರಿ ಸಂಸ್ಥೆಯ ರಂಗಸ್ವಾಮಿ, ಶಿಕ್ಷಕರು ಮತ್ತು ಕಲಾವಿದ ಉ.ರಾ.ನಾಗೇಶ್ ಅವರು ವಿಷಯಮಂಡನೆ ಮಾಡಿದರು. ಕುಶಾಲನಗರದ ವಿವಿಧ ಕನ್ನಡಪರ ಸಂಘಟನೆಯ ಮುಖಂಡರನ್ನು ಸನ್ಮಾನಿಸಿ ಗೌರವಿಸಲಾಯಿತು.
ಬಸವನಹಳ್ಳಿ ಶಾಲೆಯ ಶಿಕ್ಷಕ ರಮೇಶ್ ಕಾರ್ಯಕ್ರಮ ನಿರೂಪಿಸಿದರು. ಮೈಸೂರಿನ ಬಾ.ಸಾ.ಪ.ಪೂ. ಕಾಲೇಜಿನ ಪ್ರಾಂಶುಪಾಲ ಪಿ.ಎಸ್. ಜಾನ್ ಸ್ವಾಗತಿಸಿದರು. ಈ ಸಂದರ್ಭ ಸ್ನೇಹಬಳಗದ ಎಲ್ಲಾ ಸದಸ್ಯರು, ಶಾಲಾ ಶಿಕ್ಷಕ ವೃಂದ, ಶಾಲಾ ಮತ್ತು ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. -ಗಣೇಶ್ ಕುಡೆಕಲ್