ಮಡಿಕೇರಿ, ನ. ೨ : ಕಥೆ, ಕವನ ಬರೆಯುವವರು, ಒಂದು ಪುಸ್ತಕ ಬರೆದವರು ಸಾಹಿತಿಗಳಾಗಲು ಸಾಧ್ಯವಿಲ್ಲ. ಅವರು ಕೇವಲ ಬರಹಗಾರರಷ್ಟೆ, ಹಲವು ಪುಸ್ತಕ ಬರೆದು, ಅಪಾರ ಜ್ಞಾನ ಹೊಂದಿದವರು ಮಾತ್ರ ನಿಜವಾದ ಸಾಹಿತಿಗಳು ಎಂದು ಬ್ರಹ್ಮಗಿರಿ ವಾರಪತ್ರಿಕೆಯ ಸಂಪಾದಕ ಡಾ.ಉಳ್ಳಿಯಡ ಎಂ.ಪೂವಯ್ಯ ಅಭಿಪ್ರಾಯಪಟ್ಟಿದ್ದಾರೆ.

ನಗರದ ಪತ್ರಿಕಾಭವನದ ಸಭಾಂಗಣದಲ್ಲಿ ಕೊಡವ ಮಕ್ಕಡ ಕೂಟದ ವತಿಯಿಂದ ಲೇಖಕಿ ತೆನ್ನಿರ ಟೀನಾ ಚಂಗಪ್ಪ ಬರೆದಿರುವ ‘ಮರ್‌ಂಜ ಪಾಳೆ’ ಕೊಡವ ಪುಸ್ತಕವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಪುಸ್ತಕ ಪ್ರಕಟಿಸುವವರಿಗೆ

ತಾಳ್ಮೆ, ಮುಂದಾಲೋಚನೆ, ತ್ಯಾಗಮನೋಭಾವ ಮತ್ತು ವಿಮರ್ಶಾ ಶಕ್ತಿ ಇರಬೇಕು. ಆಗ ಮಾತ್ರ ಪುಸ್ತಕ ಪ್ರಕಟಣೆಗೆ ಅರ್ಹತೆ ಪಡೆದುಕೊಳ್ಳುತ್ತದೆ. ಕನ್ನಡ ಭಾಷೆಯಲ್ಲಿ ಲಕ್ಷೆÆÃಪ ಲಕ್ಷ ಪುಸ್ತಕಗಳು ಇದ್ದು, ಅದನ್ನು ಯಾರಿಗೂ ಎಣಿಕೆ ಮಾಡಲು ಸಾಧ್ಯವಿಲ್ಲ. ಆದರೆ ಕೊಡವ ಭಾಷಾ ಪುಸ್ತಕ ಅಂದಾಜು ೭೦೦ ರಷ್ಟು ಇದ್ದು, ಅದರ ಬೆಳವಣಿಗೆಗೆ ಎಲ್ಲರೂ ಮುಂದಾಗಬೇಕು ಎಂದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತುಳು ಭಾಷೆ ದೊಡ್ಡಮಟ್ಟದಲ್ಲಿ ಬೆಳವಣಿಗೆ ಕಂಡಿದ್ದು, ಅದೇ ಮಾದರಿ ಕೊಡಗಿನಲ್ಲಿ ಕೊಡವ ಭಾಷೆಯನ್ನು ಭಾಷಾಭಿಮಾನಿಗಳು ಬೆಳೆಸುವಂತಾಗಬೇಕು ಎಂದರು.

ಶಕ್ತಿ ದಿನಪತ್ರಿಕೆಯ ಸಲಹಾ ಸಂಪಾದಕರಾದ ಬಿ.ಜಿ.ಅನಂತಶಯನ ಅವರು ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಪ್ರತಿಯೊಬ್ಬರು ಮೊಬೈಲ್ ಬಳಕೆಗೆ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಬರಹಗಾರರಿಗೆ ಮೊಬೈಲ್ ಅಡ್ಡಿಬರುವುದಿಲ್ಲ. ಕಥೆ, ಕವನ, ಲೇಖನವನ್ನು ಬರೆಯಲು ಎಲ್ಲರಿಗೂ ಸಾಧ್ಯವಿಲ್ಲ. ಅದು ಹೃದಯದ ವಿಚಾರವಾಗಿದ್ದು, ಹೃದಯದಲ್ಲಿ ಮೂಡುವ ಯಾವುದೇ ಭಾವನೆಯನ್ನು ಬರಹಗಾರರಿಂದ ಮಾತ್ರ ವ್ಯಕ್ತಪಡಿಸಲು ಸಾಧ್ಯ ಎಂದರು.

ಪುಸ್ತಕ ಪ್ರೇಮಿಗಳ ಲೋಕವೇ ಬೇರೆ, ಅದು ನಿಜವಾದ ಜೀವನ ಎಂದ ಅವರು, ವೃತ್ತಿಯೊಂದಿಗೆ ಪ್ರವೃತ್ತಿಯನ್ನು ಬೆಳೆಸಿಕೊಂಡು ಹೋಗುವುದು ಶ್ಲಾಘನೀಯವೆಂದು ತಿಳಿಸಿದರು.

ಸಾಹಿತಿ ಉಳ್ಳಿಯಡ ಡಾಟಿ ಪೂವಯ್ಯ ಮಾತನಾಡಿ, ಪುರುಷರು ಮಹಿಳೆಯರ ಬೆಳವಣಿಗೆಗೆ ಬೆಂಬಲ ನೀಡುತ್ತಿದ್ದು, ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರು ಹೆಚ್ಚು ಸಾಧನೆ ಮಾಡುತ್ತಿರುವುದು ಶ್ಲಾಘನೀಯ, ಮಹಿಳೆಯರಲ್ಲಿ ಸಾಹಿತ್ಯಸಕ್ತಿ ಹೆಚ್ಚಾಗಬೇಕು. ಬೇರೆಯವರ ಜೀವನದೊಂದಿಗೆ ನಮ್ಮ ಜೀವನವನ್ನು ಹೋಲಿಕೆ ಮಾಡಿಕೊಂಡು ಜೀವನವನ್ನು ಹಾಳು ಮಾಡಿಕೊಳ್ಳಬಾರದು ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಅವರು, ಕೊಡವ ಮಕ್ಕಡ ಕೂಟದ ವತಿಯಿಂದ ಕೊಡವ ಸಾಧಕರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಮಾಡಲಾಗುತ್ತಿದೆ. ಅಲ್ಲದೆ ತನ್ನ ಸಂಪಾದಕೀಯದ ಚಂಗೀರ (ಸಂಶೋಧನಾ ಕೃತಿ), ಒತ್ತಜೋಡಿ (ಅಭಿನಂದನಾ ಗ್ರಂಥ) ಹಾಗೂ ಆಟ್‌ಪಾಟ್ ಪಡಿಪು ಪುಸ್ತಕ(ಸಂಗ್ರಹ ಪುಸ್ತಕ) ಎನ್ನುವ ಐದು ಪುಸ್ತಕ ಪ್ರಕಟ ಮಾಡಲಾಗಿದೆ. ಕಳೆದ ೭ ವರ್ಷದಿಂದ ಮಕ್ಕಳಿಗೆ ಆಟ್‌ಪಾಟ್ ಪಡಿಪು ಕಾರ್ಯಕ್ರಮವನ್ನು ಆಯೋಜಿಸ ಲಾಗಿದೆ. ಅಲ್ಲದೆ ದಾಖಲೀಕರಣ ಸಾಹಿತ್ಯದ ಹಾಗೂ ಕೊಡಗಿಗೆ ಸಂಬAಧಿಸಿದ ೭೫ ಪುಸ್ತಕವನ್ನು ಪ್ರಕಟಣೆ ಮಾಡಲಾಗಿದೆ.

ಮುಂದಿನ ದಿನಗಳಲ್ಲಿ ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಕೆಲಸ ಮಾಡಲಾಗುವುದೆಂದರು. ಲೇಖಕಿ ತೆನ್ನಿರ ಟೀನಾ ಚಂಗಪ್ಪ ಮಾತನಾಡಿ, ಪುಸ್ತಕದ ಬಗ್ಗೆ ವಿವರಿಸಿದರು. ಸಮಾಜ ಸೇವಕರಾದ ಚಿಲ್ಲವಂಡ ಕಾವೇರಪ್ಪ, ಕುಳುವಂಡ ಮಣಿ ಜೋಯಪ್ಪ, ಮುಕೋಡ್ಲು ವ್ಯಾಲಿ ಡ್ಯೂನ ಅಧ್ಯಕ್ಷ ಹಂಚೆಟ್ಟಿರ ಮನು ಮುದ್ದಪ್ಪ ಉಪಸ್ಥಿತರಿದ್ದರು.

ಪಾಲೆಯಂಡ ಕಾವ್ಯ ಪ್ರಾರ್ಥಿಸಿ, ಕೂಪದಿರ ಜೂನ ವಿಜಯ್ ಸ್ವಾಗತಿಸಿ, ಬೊಳ್ಳಜಿರ ಯಮುನಾ ಅಯ್ಯಪ್ಪ ನಿರೂಪಿಸಿ, ಕೊಚ್ಚೇರ ರಿನ್ಸಿ ಕವನ್ ವಂದಿಸಿದರು.