ಕುಶಾಲನಗರ, ನ. ೨: ಜೀವ ಮತ್ತು ಜಗತ್ತನ್ನು ನಿಯಂತ್ರಿಸುವ ಶಕ್ತಿ ದೇವರಾಗಿದ್ದು ಅವರಿಗೆ ಕೃತಜ್ಞತೆ ಸಲ್ಲಿಸುವುದು ಪ್ರತಿಯೊಬ್ಬರ ಕರ್ತವ್ಯ ವಾಗಿದೆ ಎಂದು ಹರಿಹರಪುರದ ಆದಿಶಂಕರಾಚಾರ್ಯ ಶಾರದಾ ಲಕ್ಷಿö್ಮ ನರಸಿಂಹ ಪೀಠದ ಜಗದ್ಗುರು ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮಿಗಳು ಹೇಳಿದರು.

ಕುಶಾಲನಗರದ ವಿವೇಕಾನಂದ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಶ್ರೀಮಠದ ವತಿಯಿಂದ ಹಮ್ಮಿಕೊಂಡಿದ್ದ ಸಮಾನ ಸಂಸ್ಕಾರ ಕಾರ್ಯಾಗಾರದಲ್ಲಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಪ್ರತಿಯೊಬ್ಬ ಮನುಷ್ಯನಲ್ಲೂ ಮಾನವೀಯ ಮೌಲ್ಯಗಳ ಜೊತೆಗೆ ತ್ಯಾಗ ಹಾಗೂ ಸಮರ್ಪಣಾ ಮನೋಭಾವ ಅಭಿವ್ಯಕ್ತವಾಗಿರಬೇಕು.

ಅಮೂಲ್ಯವಾದ ಮಾನವ ಜನ್ಮ ಪಡೆದು ಬಂದ ಪ್ರತಿಯೊಬ್ಬರು ಹುಟ್ಟುವಾಗಲೇ ದೇವ ಋಣ, ಋಷಿ ರುಣ, ಪಿತೃ ಋಣ, ಮನುಷ್ಯ ಋಣ ಹಾಗೂ ಪ್ರಕೃತಿ ಋಣ ಎಂಬ ಪಂಚಭೂತಗಳಿಗೆ ಅಬಾರಿಯಾಗಿರ ಬೇಕು ಎಂದು ಶ್ರೀಗಳು ನುಡಿದರು.

ದಿವ್ಯ ಸಾನಿಧ್ಯ ವಹಿಸಿದ್ದ ಅರಕಲಗೂಡು ಅರೆಮಾದನಹಳ್ಳಿ ವಿಶ್ವಕರ್ಮ ಪೀಠದ ಶ್ರೀ ಶಿವಸುಜ್ಞಾನ ತೀರ್ಥ ಮಹಾಸ್ವಾಮೀಜಿ ಆಶೀರ್ವಚನ ನೀಡಿ, ನವ ಪೀಳಿಗೆಗೆ ಭಾರತೀಯ ಸಂಸ್ಕೃತಿಯ ಬಗ್ಗೆ ತಿಳಿ ಹೇಳಬೇಕು. ಮಕ್ಕಳಿಗೆ ಸಂಸ್ಕಾರ ಆಚಾರ ವಿಚಾರಗಳ ಬಗ್ಗೆ ಅರಿವು ಮೂಡಿಸಬೇಕು, ಸಂಸ್ಕಾರದಿAದ ಎಲ್ಲಾ ರೀತಿಯ ಶ್ರೇಷ್ಠತೆ ಹಾಗೂ ಜೀವನದ ಮೌಲ್ಯ ದೊರಕಲು ಸಾಧ್ಯ. ಹಿರಿಯರಿಂದ ಮಾರ್ಗದರ್ಶನ ಪಡೆಯುವುದು ನವ ಪೀಳಿಗೆಯ ಜವಾಬ್ದಾರಿಯಾಗಿದೆ ಎಂದರು.

ಶ್ರೀಮಠದ ಆಡಳಿತಾಧಿಕಾರಿ ಡಾ. ಬಿ.ಎಸ್. ರವಿಶಂಕರ್, ಕುಶಾಲನಗರದ ವಿವೇಕಾನಂದ (ಮೊದಲ ಪುಟದಿಂದ) ವಿದ್ಯಾಸಂಸ್ಥೆಯ ಅಧ್ಯಕ್ಷ ಎನ್.ಎನ್. ಶಂಭುಲಿAಗಪ್ಪ, ಮಾರುತಿ ವಿದ್ಯಾಸಂಸ್ಥೆಯ ಅಧ್ಯಕ್ಷ ಜಿ.ಎಲ್. ನಾಗರಾಜು, ಪುರಸಭೆ ಸದಸ್ಯ ಬಿ. ಅಮೃತರಾಜು, ಎಂ.ಕೆ. ದಿನೇಶ್, ಚಂದ್ರು, ಎಂ.ವಿ. ನಾರಾಯಣ ಇದ್ದರು.

ವಿದ್ಯಾರ್ಥಿಗಳೊಂದಿಗೆ ಶ್ರೀಮಠದ ಜಗದ್ಗುರು ಸಮಾನ ಸಂಸ್ಕಾರಗಳ ಕುರಿತಾಗಿ ಒಂದು ಗಂಟೆಗಳ ಕಾಲ ಸಂವಾದ ನಡೆಸಿದರು. ಕಾರ್ಯಕ್ರಮಕ್ಕೂ ಮುನ್ನ ವೇದಬ್ರಹ್ಮ ರಘುನಾಥ ಶಾಸ್ತಿç ಅವರಿಂದ ವೇದ ಘೋಷ ನಡೆಯಿತು.

ನಾಡಿನ ಜೀವ ನದಿ ಕಾವೇರಿ ಹುಟ್ಟಿ ಹರಿದಿರುವ ಕೊಡಗಿನ ಮಂದಿ ಪುಣ್ಯವಂತರು ಎಂದು ಹರಿಹರಪುರ ಶ್ರೀಗಳು ಅಭಿಪ್ರಾಯ ವ್ಯಕ್ತಪಡಿಸುವುದರೊಂದಿಗೆ ನದಿಯಲ್ಲಿ ಮಾನವನ ಹಸ್ತಕ್ಷೇಪ ಆಗಬಾರದು. ಪರಮ ಪವಿತ್ರವಾದ ಕಾವೇರಿ ನದಿ ಅಪವಿತ್ರವಾಗದಂತೆ ಪ್ರತಿಯೊಬ್ಬರು ಎಚ್ಚರವಹಿಸಬೇಕು. ನೈಸರ್ಗಿಕ ಸಂಪತ್ತು ನಾಶವಾಗದಂತೆ ಸದಾ ಗಮನಿಸಬೇಕು. ನಾಡಿನ ಕೋಟ್ಯಂತರ ಜನಸಂಕುಲಕ್ಕೆ ಹಾಗೂ ಜೀವಕೋಟಿಗಳಿಗೆ ಜೀವ ಜಲ ಕಾವೇರಿಯನ್ನು ಹರಿಸುತ್ತಿರುವ ಕೊಡಗಿನ ಜನತೆ ಭಾಗ್ಯವಂತರು ಎಂದು ನುಡಿದರು. ಹರಿಹರಪುರ ಶ್ರೀಪೀಠದ ಸ್ವಾಮೀಜಿ, ಕಾವೇರಿ ನದಿಯೊಡಲಿಗೆ ಕಲುಷಿತ ನೀರು ಹರಿಯದಂತೆ ಪ್ರತಿಯೊಬ್ಬರು ಎಚ್ಚರ ವಹಿಸುವ ಮೂಲಕ ನದಿಯ ಸ್ವಚ್ಛತೆ ಹಾಗೂ ಪಾವಿತ್ರö್ಯತೆಯನ್ನು ಕಾಪಾಡಬೇಕು ಎಂದು ಕರೆ ನೀಡಿದರು. ಜಲ ಮೂಲಗಳು, ಪ್ರಕೃತಿಯ ಸೇವೆ ಸಲ್ಲಿಸಿದಲ್ಲಿ ಅದು ಭಗವಂತನಿಗೆ ಕೃತಜ್ಞತೆ ಸಲ್ಲಿಸಿದ ಕಾಯಕಕ್ಕೆ ಸಮಾನವಾಗುತ್ತದೆ ಎಂದರು.

ಕಾರ್ಯಕ್ರಮಕ್ಕೂ ಮುನ್ನ ಶ್ರೀಗಳನ್ನು ವಿದ್ಯಾ ಸಂಸ್ಥೆಗಳ ವತಿಯಿಂದ ಪ್ರಾಂಶುಪಾಲೆ ಟಿ.ಎ.ಲಿಖಿತಾ ಹಾಗೂ ಉಪನ್ಯಾಸಕ ವೃಂದ ಭಕ್ತಿಪೂರ್ವಕವಾಗಿ ಬರಮಾಡಿಕೊಂಡರು.

ಶಶಾAಕ್ ತಂಡ ಪ್ರಾರ್ಥಿಸಿ, ಬಿ.ಅಮೃತರಾಜು ನಿರೂಪಿಸಿ, ಎಂ.ಜಿ.ಎA ಕಾಲೇಜು ಉಪನ್ಯಾಸಕ ಮಂಜೇಶ್ ಸ್ವಾಗತಿಸಿ, ಅಮೃತರಾಜು ವಂದಿಸಿದರು. ವಿವೇಕಾನಂದ ವಿದ್ಯಾಸಂಸ್ಥೆ ಮತ್ತು ಮಾರುತಿ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.