ಸಿದ್ದಾಪುರ, ನ. ೫: ಅಮ್ಮತ್ತಿಯ ಆರ್.ಐ.ಹೆಚ್.ಪಿ. ಆಸ್ಪತ್ರೆಯಲ್ಲಿ ಕಣ್ಣಿನ ಶಸ್ತç ಚಿಕಿತ್ಸೆ ವಿಭಾಗ ಮತ್ತು ಹೊರ ರೋಗಿ ವಿಭಾಗದ ಉದ್ಘಾಟನೆಯನ್ನು ಹೈದರಾಬಾದ್‌ನ ವೇಣಿರಾವ್ ಫೌಂಡೇಶನ್‌ನ ಟ್ರಸ್ಟ್ನ ರತ್ನಾರೆಡ್ಡಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಆರ್.ಐ.ಹೆಚ್.ಪಿ. ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಸಿ.ಕೆ ಚಂದ್ರು ಆಸ್ಪತ್ರೆಯಲ್ಲಿ ದಾನಿಗಳ ನೆರವಿನಿಂದ ಈಗಾಗಲೇ ಹಲವಾರು ಸೇವೆಗಳನ್ನು ಸ್ಥಳೀಯ ಸಾರ್ವಜನಿಕರಿಗೆ ನಿರಂತರವಾಗಿ ವಿಸ್ತರಿಸಲಾಗುತ್ತಿದೆ. ಕಡಿಮೆ ವೆಚ್ಚದಲ್ಲಿ ಸಾರ್ವಜನಿಕರಿಗೆ ಸೇವೆಗಳನ್ನು ನೀಡಲಾಗುತ್ತಿದೆ. ಇದೀಗ ನೂತನವಾಗಿ ಮೆಡಿಕಲ್ ಐ.ಸಿ.ಯು ಮತ್ತು ಪೀಡಿಯಾಟ್ರಿಕ್ ಐ.ಸಿ.ಯು, ಲ್ಯಾಪರೊ ಸ್ಕೋಪಿಕ್ ಉಪಕರಣಗಳು ಮತ್ತು ಶಸ್ತç ಚಿಕಿತ್ಸೆ ಉಪಕರಣಗಳನ್ನು ಹೊಂದುವ ಮೂಲಕ ಕಣ್ಣಿನ ಶಸ್ತç ಚಿಕಿತ್ಸೆ ವಿಭಾಗವನ್ನು ಪ್ರಾರಂಭಿಸಲಾಗಿದೆ ಎಂದು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಟಾಟಾ ಕಾಫಿ ಲಿಮಿಟೆಡ್‌ನ ಉಪಾಧ್ಯಕ್ಷ ಎಂ.ಬಿ ಗಣಪತಿ, ಆರ್.ಐ.ಹೆಚ್.ಪಿ ಆಸ್ಪತ್ರೆಯ ಟ್ರಸ್ಟಿಗಳಾದ ಡಾ. ಪ್ರೊ. ಪಿ.ಜಿ. ಚಂಗಪ್ಪ, ಡಾ. ಎಂ.ಎA. ಚಂಗಪ್ಪ, ಕೆ.ಪಿ ಉತ್ತಪ್ಪ, ಪಿ.ಕೆ. ಮ್ಯಾಥ್ಯೂ, ಆರ್.ಐ.ಹೆಚ್.ಪಿ. ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಶುಭ ಮತ್ತು ವೈದ್ಯಾಧಿಕಾರಿಗಳು, ಸಿಬ್ಬಂದಿಗಳು ಹಾಜರಿದ್ದರು.