ರಷ್ಯಾ-ಉಕ್ರೇನ್ ಯುದ್ಧ ಆರಂಭವಾಗಿ ಇಂದಿಗೆ ೬೨೧ ದಿನಗಳು! ಇಸ್ರೇಲ್-ಹಮಾಸ್ ನಡುವಿನ ಯುದ್ಧಕ್ಕೆ ಇಂದಿಗೆ ೩೧ ದಿನಗಳು! ಈ ಎರಡು ಯುದ್ಧಗಳು ಬೇಗೆ ಅಂತ್ಯಗೊಳ್ಳುವ ಸೂಚನೆ ಇಲ್ಲ. ಇವು, ಕೇವಲ ಇಬ್ಬರ ನಡುವಿನ ಯುದ್ಧವಾಗಿರದೆ, ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲವರ ಕುಟಿಲ ನೀತಿಯಿಂದ, ನಾನಾ ಆಯಾಮಗಳನ್ನು ಪಡೆಯತೊಡಗಿದೆ.
ಅನಗತ್ಯವಾಗಿ ಮೂಗುತೂರಿಸಿ ಬೇಳೆ ಬೇಯಿಸಿಕೊಳ್ಳುವಲ್ಲಿ ಅಮೇರಿಕಾ, ಇರಾನ್, ಚೀನಾ, ಉತ್ತರ ಕೊರಿಯಾ, ಈಜಿಪ್ಟ್, ಐರೋಪ್ಯ ರಾಷ್ಟçಗಳು ಯುದ್ಧದ ಕಾರ್ಮೋಡದ ಭೀಕರತೆಗೆ, ಪ್ರಧಾನ ಪಾತ್ರ ವಹಿಸತೊಡಗಿವೆ. ‘ಇದು ಯುದ್ಧಕ್ಕೆ ಸಮಯವಲ್ಲ’ ಎಂಬ ಭಾರತದ ಸ್ಪಷ್ಟ ಸಂದೇಶ ಈ ಹಂತದಲ್ಲಿ ಎಲ್ಲರಿಗೂ ಎಚ್ಚರಿಕೆಯ ಗಂಟೆಯಾಗಬೇಕಿದೆ.
ಎಲ್ಲೋ ದೂರದಲ್ಲಿ ಯುದ್ಧ ನಡೆಯುತ್ತಿದೆ. ಇದರಿಂದ ನಮ್ಮ ಮೇಲೇನೂ ಪರಿಣಾಮವಾಗದು ಎನ್ನುವಂತಿಲ್ಲ. ಈ ಯುದ್ಧಗಳು ವಿಶ್ವದ ವ್ಯಾಪಾರ ವ್ಯವಸ್ಥೆ, ಸಹಭಾಗಿತ್ವ, ಆರ್ಥಿಕ ಚಟುವಟಿಕೆ, ಪರಿಸರ, ಜನಜೀವನದ ಮೇಲೆ ನೇರ ಪರಿಣಾಮ ಬೀರುವುದರ ಜೊತೆಗೆ, ಪ್ರಗತಿಗೆ ಸಂಚಕಾರವೊಡ್ಡತೊಡಗಿವೆ.
ಇAದು ಅಂರ‍್ರಾಷ್ಟಿçÃಯ ಯುದ್ಧ ವಿರೋಧಿ ದಿನ. ಯುದ್ಧ ಮತ್ತು ಸೇನಾ ಸಂಘರ್ಷಗಳಿAದ, ಪರಿಸರದ ಮೇಲಿನ ದೌರ್ಜನ್ಯ ತಡೆಗಟ್ಟಲು ದನಿಯೇರಿಸುವ ದಿನ. ಕೋಫಿ ಅನ್ನಾನ್ ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿಯಾಗಿದ್ದ ಸಂದರ್ಭದಲ್ಲಿ ೨೦೦೧ ರ ನವೆಂಬರ್ ೫ ರಂದು ವಿಶ್ವ ಸಂಸ್ಥೆಯ ಮಹಾಧಿವೇಶನದಲ್ಲಿ ಈ ದಿನಾಚರಣೆಗೆ ಒತ್ತು ನೀಡಲಾಯಿತು. ರಾಜತಾಂತ್ರಿಕ ಸಂಬAಧಗಳನ್ನು ಉತ್ತಮಪಡಿಸಿ ಬಲಗೊಳಿಸಿ, ಪರಸ್ಪರ ಸಂಧಾನ ಕ್ರಮಗಳ ಮೂಲಕ ಸೇನಾ ಸಂಘರ್ಷ, ಯುದ್ಧಗಳನ್ನು ತಪ್ಪಿಸಿ, ಶಸ್ತಾçಸ್ತç, ಯುದ್ಧಗಳಿಗೆ ಹಣ ಹೂಡಿಕೆ ತಡೆಗಟ್ಟಿ, ಪರಿಸರ ಸಂರಕ್ಷಿಸಿ, ಸುಸ್ಥಿರ ಪ್ರಗತಿಗೆ ಪ್ರಯತ್ನಿಸುವುದು ಈ ದಿನಾಚರಣೆಯ ಪ್ರಮುಖ ಧ್ಯೇಯ.
ಕ್ರೌರ್ಯವೇ ಮೆರೆದು, ಮಾನವೀಯತೆಯನ್ನು ಅಳಿಸಿ ಹಾಕುವ ಯುದ್ಧದ ಘನಘೋರ ಪರಿಣಾಮವನ್ನು ಕೇವಲ ಸಾವು-ನೋವುಗಳಿಂದ ಅಳೆಯಲಾಗದು. ಯೋಧರ, ನಾಗರಿಕರ ಸಾವಿನ ಸಂಖ್ಯೆ, ಗಾಯಗೊಂಡವರ ಸಂಖ್ಯೆ, ನಾಶವಾಗುವ ನಗರಗಳು, ಜೀವ ವೈವಿಧ್ಯತೆ, ಪರಿಸರ ನಾಶದೊಂದಿಗಿನ ಸ್ಮಶಾನ ಸದೃಶ ವಾತಾವರಣದ ರೌದ್ರ ನರ್ತನ ಜಂಝೀಬಲವನ್ನೇ ನಡುಗಿಸುತ್ತದೆ.
ಇದರ ಭೀಕರತೆಯನ್ನು ಇಂದಿನ ತಲೆಮಾರು ಮಾತ್ರ ಅನುಭವಿಸುವುದಿಲ್ಲ. ಯುದ್ಧ ಸನ್ನಿವೇಶದಿಂದ ಅರಣ್ಯ ಪ್ರದೇಶ ನಾಶ, ಬೆಳೆ ನಾಶ, ಕಲುಷಿತಗೊಳ್ಳುವ ಕುಡಿಯುವ ನೀರು, ವಿಷಮಯವಾಗುವ ಕೃಷಿ ಭೂಮಿ, ವಾಯುಮಾಲಿನ್ಯ, ವನ್ಯಜೀವಿ ಅಳಿವು... ಇವು ಮುಂದಿನ ಪೀಳಿಗೆಗಳನ್ನು ಮೂಲಭೂತ ಸೌಕರ್ಯದಿಂದ ಸಂಪೂರ್ಣವಾಗಿ ವಂಚಿತರನ್ನಾಗಿಸುತ್ತವೆ. ಈ ಎಲ್ಲ ಅಂಶಗಳನ್ನು ಗಣನೆಗೆ ತೆಗೆದುಕೊಂಡು ೨೦೩೦ ರ ವೇಳೆಗೆ ಸುಸ್ಥಿರ ಅಭಿವೃದ್ಧಿಯನ್ನೇ ಧ್ಯೇಯವಾಗಿಸಿ, ಅಂರ‍್ರಾಷ್ಟಿçÃಯ ಯುದ್ಧ ವಿರೋಧಿ ದಿನವನ್ನು ಆಚರಿಸಲಾಗುತ್ತಿದೆ. ರಷ್ಯಾ-ಉಕ್ರೇನ್ ಯುದ್ಧದಿಂದಾಗಿ ಭಾರತದ ಮೇಲಾಗಿರುವ ಪರಿಣಾಮಗಳನ್ನೇ ಉಲ್ಲೇಖಿಸುವುದಾದರೆ, ಕಚ್ಚಾತೈಲ ದರ ಏರಿಕೆಯಿಂದ ದೇಶದಲ್ಲಿ ಹಣದುಬ್ಬರದ ಪ್ರಮಾಣ ಗಮನಾರ್ಹ ಏರಿಕೆ ಕಂಡಿದೆ. ಅಮೇರಿಕಾ ಮತ್ತು ಅದರ ಕೆಲವು ಮಿತ್ರ ರಾಷ್ಟçಗಳು ರಷ್ಯಾದ ಕಚ್ಚಾತೈಲದ ಮೇಲೆ ನಿರ್ಬಂಧ ಹೇರಿದ್ದರಿಂದ ಅಂರ‍್ರಾಷ್ಟಿçÃಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾತೈಲದ ದರ ಏರಿಕೆಯಾಗಿ, ವಿಶ್ವದ ಪ್ರಮುಖ ಆರ್ಥಿಕತೆಯ ಮೇಲೆ ನೇರ ಪರಿಣಾಮ ಬೀರಿತು. ಇದರಿಂದ ಭಾರತದಲ್ಲಿ ಷೇರುಪೇಟೆಯ ವ್ಯವಹಾರದ ಮೇಲೆ ಗಮನಾರ್ಹ ಪರಿಣಾಮವಾಗಿ, ಹಣದುಬ್ಬರ ಜೊತೆಗೆ ಅಮೇರಿಕಾದ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ ಕುಸಿತ ಕಂಡು, ವಿದೇಶಿ ವಿನಿಮಯದ ಮೇಲೂ ನೇರ ಪರಿಣಾಮ ಬೀರಿತು. ಉಕ್ರೇನ್‌ನ ವೈದ್ಯಕೀಯ ಕಾಲೇಜುಗಳಲ್ಲಿ ವ್ಯಾಸಂಗ ನಿರತರಾಗಿದ್ದ ಭಾರತೀಯ ವಿದ್ಯಾರ್ಥಿಗಳು ಸ್ವದೇಶಕ್ಕೆ ಮರಳಲು ತ್ರಾಸ ಪಡಬೇಕಾಯಿತು. ಭಾರತಕ್ಕೆ ಆಗಮಿಸಿದ ನಂತರವೂ ಶಿಕ್ಷಣ ಮುಂದುವರಿಸಲು ಪರದಾಡುವಂತಾಯಿತು.
ಇನ್ನು ಇಸ್ರೇಲ್ - ಹಮಾಸ್ ನಡುವಿನ ಯುದ್ಧದಿಂದಾಗಿ, ಇಸ್ರೇಲ್‌ನಲ್ಲಿ ಉದ್ಯೋಗ ನಿಮಿತ್ತ ನೆಲೆಸಿದ್ದ ೨೦ ಸಾವಿರ ಭಾರತೀಯರು ತೊಂದರೆಗೆ ಸಿಲುಕಿದ್ದಾರೆ. ಇಸ್ರೇಲ್ ಕೃಷಿ ತಂತ್ರಜ್ಞಾನ ಅಧ್ಯಯನಕ್ಕೆ ತೆರಳುತ್ತಿದ್ದ ಭಾರತೀಯ ಅಧಿಕಾರಿಗಳು, ರೈತರ ಅಧ್ಯಯನ ಪ್ರವಾಸ ಕಡಿತ ಜೊತೆಗೆ ಇಸ್ರೇಲ್‌ನಲ್ಲಿ ಬೇಡಿಕೆ ಇರುವ ಗುಡಿ ಕೈಗಾರಿಕೆ, ಸಣ್ಣ ಕೈಗಾರಿಕೆ ಉತ್ಪನ್ನಗಳನ್ನು ತಯಾರಿಸುವ ಭಾರತದಲ್ಲಿನ ಉದ್ಯಮಗಳ ಮುಂದುವರಿಕೆಗೆ ಸಂಚಕಾರವಾಗಬಹುದು.
ದಕ್ಷಿಣ ಭಾರತದಲ್ಲಿನ ಕೈಗಾರಿಕಾ ಕೇಂದ್ರಗಳಲ್ಲಿನ ಸಿದ್ಧ ಉಡುಪು (ಗಾರ್ಮೆಂಟ್)ಗಳಿಗೆ ಇಸ್ರೇಲಿನಲ್ಲಿ ಭಾರೀ ಬೇಡಿಕೆ. ಇಲ್ಲಿ ತಯಾರಾಗುವ ಹತ್ತಿ ಬಟ್ಟೆಗಳ ರಫ್ತು ಮೇಲೆ ಪರಿಣಾಮವಾದರೆ, ಇವುಗಳಲ್ಲಿ ದುಡಿಯುವವರ ಉದ್ಯೋಗಕ್ಕೆ ಸಂಚಕಾರವಾಗಬಹುದು. ಭಾರತದಿಂದ ಇಸ್ರೇಲ್‌ಗೆ ರಫ್ತಾಗುವ ಡೀಸೆಲ್ ಮತ್ತು ಸಂಸ್ಕರಿತ ಪೆಟ್ರೋಲ್ ಉತ್ಪನ್ನಗಳಿಗೂ ಹಿನ್ನಡೆಯಾಗಬಹುದು. ಹೀಗೆ ಯುದ್ಧಗಳ ಭೀಕರ ಪರಿಣಾಮಗಳು ಒಂದೇ, ಎರಡೇ...?! ತಮಗಿಂತ ಇತರ ರಾಷ್ಟçಗಳು ಬಲಗೊಳ್ಳಬಾರದು. ತಮ್ಮ ಶಸ್ತಾçಸ್ತçಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಇರಬೇಕು ಎನ್ನುವ ಅಮೇರಿಕಾ, ಚೀನಾಗಳ ಹಪಾಹಪಿತನ ದೂರಾಗಲಿ. ಅವುಗಳ ಯುದ್ಧೋನ್ಮಾದಕ್ಕೆ ಬ್ರೇಕ್ ಬೀಳಲಿ. ಹೀಗಾಗಬೇಕಾದರೆ, ಈಗ ಹಲ್ಲುಕಿತ್ತ ಹಾವಿನಂತಾಗಿರುವ ವಿಶ್ವಸಂಸ್ಥೆಯ ಬಲವರ್ಧನೆಯಾಗಲಿ. ವಿಶ್ವ ಮಹಾಯುದ್ಧ ಭೀತಿಯ ಕಾರ್ಮೋಡ ಸರಿಯಲಿ. ವಿಶ್ವ ಶಾಂತಿ ಸರ್ವವ್ಯಾಪಿಯಾಗಲಿ.
- ಕಲ್ಮಾಡಂಡ ದಿನೇಶ್ ಕಾರ್ಯಪ್ಪ, ಮಡಿಕೇರಿ, ಮೊ. ೯೮೪೫೪೯೯೧೧೨.