ಕಣಿವೆ, ನ. ೫: ಪ್ರತಿಯೊಬ್ಬರೂ ತಮ್ಮ ನಿತ್ಯ ಕಾಯಕದೊಂದಿಗೆ ಶಿವಧ್ಯಾನ-ಶಿವಸ್ತೋತ್ರವನ್ನು ನಿರಂತರವಾಗಿ ಮಾಡಿದಲ್ಲಿ ಬದುಕು ಮತ್ತಷ್ಟು ಸುಂದರವಾಗುತ್ತದೆ ಎಂದು ಚಿಕ್ಕಮಗಳೂರು ಜಿಲ್ಲೆ ಹರಿಹರಪುರ ಶ್ರೀ ಪೀಠಂನ ಸ್ವಯಂ ಪ್ರಕಾಶ ಸಚ್ವಿದಾನಂದ ಸರಸ್ವತಿ ಮಹಾ ಸ್ವಾಮೀಜಿ ಹೇಳಿದರು.
ಕುಶಾಲನಗರ ತಾಲೂಕಿನ ಮದಲಾಪುರ ಬಳಿಯ ಬ್ಯಾಡಗೊಟ್ಟ ಗಿರಿಜನರ ಪುನರ್ವಸತಿ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಸಮಾನ ಸಂಸ್ಕಾರ ಮದಲಾಪುರ ಬಳಿಯ ಬ್ಯಾಡಗೊಟ್ಟ ಗಿರಿಜನರ ಪುನರ್ವಸತಿ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಸಮಾನ ಸಂಸ್ಕಾರ ಪ್ರವಚನ ಕಮ್ಮಟದ ಸಾನಿಧ್ಯ ವಹಿಸಿ ಅಲ್ಲಿ ಭಾಗಿಯಾಗಿದ್ದ ಗಿರಿಜನ ಕುಟುಂಬದ ಮಂದಿಗೆ ಆಶೀರ್ವಚನ ಮಾಡಿದ ಅವರು, ತಾಯಿಯ ಗರ್ಭ ದಿಂದ ಭೂಗರ್ಭಕ್ಕೆ ಬಂದAತಹ ಪ್ರತಿಯೊಬ್ಬ ಮನುಷ್ಯನು ಬಾಳಿ ಬದುಕಲು ಬೇಕಾದಂತಹ ಗಾಳಿ, ಬೆಳಕು, ನೀರು ಮೊದಲಾದ ಅಗತ್ಯ ಗಳನ್ನು ಕರುಣಿಸಿದಂತಹ ಭಗವಂತನಿಗೆ ಸದಾ ಕಾಲ ಕೃತಜ್ಞರಾಗಿರಬೇಕು. ಹಾಗಾಗಿ ದಿನದ ಮುಂಜಾನೆ ಹಾಗೂ ಮುಸ್ಸಂಜೆ ನಿರಂತರವಾಗಿ ಶಿವಧ್ಯಾನ ಮಾಡುವ ಮೂಲಕ ಶಿವಸ್ತೋತ್ರವನ್ನು ಪಠಿಸುವ ಅಭ್ಯಾಸವನ್ನು ಇಟ್ಟು ಕೊಳ್ಳುವ ಮೂಲಕ ಸುಂದರ ಬದುಕನ್ನು ಕಟ್ಟಿಕೊಳ್ಳಲು ಶ್ರೀಗಳು ಕರೆಕೊಟ್ಟರು.
ಎಳೆಯ ಮಕ್ಕಳಿಂದಲೇ ಭಾರತೀಯ ಶ್ರೇಷ್ಠ ಸಂಸ್ಕಾರಗಳನ್ನು ಕಲಿಸುವ ಮೂಲಕ ಭವಿಷ್ಯದಲ್ಲಿ ಆ ಮಕ್ಕಳನ್ನು ಸತ್ಪçಜೆಗಳಾಗಿ ರೂಪಿಸುವ ಹೊಣೆಗಾರಿಕೆ ನಮ್ಮೆಲ್ಲರ ಜವಬ್ದಾರಿಯಾಗಬೇಕಿದೆ. ಹೆತ್ತವರಿಗೆ, ಹಿರಿಯರಿಗೆ ಹಾಗೂ ಗುರುಗಳಿಗೆ ಸದಾ ನಮಿಸುವ, ಗೌರವಿಸುವ ಪರಂಪರೆ ಆಧುನಿಕ ಕಾಲಘಟ್ಟದಲ್ಲಿ ಕ್ಷೀಣಿಸಲು ಬಿಡಬಾರದು ಎಂದು ವಿದ್ಯಾರ್ಥಿಗಳು ಹಾಗೂ ಯುವ ಜನಾಂಗಕ್ಕೆ ಕಿವಿಮಾತು ಹೇಳಿದರು.
ಸಿದ್ದಲಿಂಗಪುರ ಮಂಜುನಾಥ ಕ್ಷೇತ್ರದ ರಾಜೇಶನಾಥ ಗುರೂಜಿ, ಹರಿಹರಪುರಂ ಶ್ರೀಪೀಠಂನ ಆಡಳಿತಾಧಿಕಾರಿ ಡಾ. ಬಿ.ಎಸ್. ರವಿಶಂಕರ್, ಕುಶಾಲನಗರದ ಪುರಸಭೆ ಸದಸ್ಯ ಬಿ. ಅಮೃತರಾಜು, ಸಾಮಾಜಿಕ ಸೇವಾ ಕರ್ತರಾದ ಎಂ.ಕೆ. ದಿನೇಶ್, ಜನಾರ್ಧನ್, ಮಹೇಶ್ ಅಮೀನ್, ಮಧುಸೂದನ್, ತಾಲೂಕು ವನವಾಸಿ ಸಂಘದ ಪ್ರಮುಖರಾದ ಸಿದ್ದಣ್ಣ, ಭೋಜಣ್ಣ ಇದ್ದರು.