ಸಿದ್ದಾಪುರ, ನ. ೫: ವೀರಾಜಪೇಟೆ ಅರಣ್ಯ ವಲಯ ಮತ್ತು ತಿತಿಮತಿ ಅರಣ್ಯ ವಲಯದ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಾದ ಕಳತ್ಮಾಡು, ಕೈಕೇರಿ, ಹೊಸಕೋಟೆ, ನಲ್ವತೋಕ್ಲು, ಕೆ ಬೈಗೋಡು, ಹೊಸೂರು, ಹಾತೂರು, ಪುಲಿಯೇರಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸಾರ್ವಜನಿಕರಿಗೆ ಉಪಟಳ ನೀಡುತ್ತಿರುವ ಕಾಡಾನೆಗಳನ್ನು ಕಾಡಿಗೆ ಓಡಿಸುವ ಜಂಟಿ ಕಾರ್ಯಾಚರಣೆ ತಾ. ೭ ರಂದು ನಡೆಯಲಿದೆ. ಕಾಫಿ ತೋಟದಲ್ಲಿ ಕೆಲಸ ನಿರ್ವಹಿಸುವ ಕೂಲಿ ಕಾರ್ಮಿಕರು, ಸಾರ್ವಜನಿಕರು ಮತ್ತು ಶಾಲಾ ಮಕ್ಕಳು ಮುನ್ನೆಚ್ಚರಿಕೆ ಯಿಂದ ಇರಬೇಕೆಂದು ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಡಾನೆ ಕಂಡು ಬಂದರೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ವೀರಾಜಪೇಟೆ ಅರಣ್ಯ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೊಚ್ಚೆರ ನೆಹರು ಹಾಗೂ ತಿತಿಮತಿ ಅರಣ್ಯ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಪಿ. ಗೋಪಾಲ್ ಮನವಿ ಮಾಡಿದ್ದಾರೆ.