ಮಡಿಕೇರಿ, ನ. ೪: ಕೊಡಗು ಜಿಲ್ಲಾ ರಕ್ತನಿಧಿ ಕೇಂದ್ರಕ್ಕೆ ಪ್ರತೀ ತಿಂಗಳಿಗೆ ೫೦೦ ಯೂನಿಟ್ ರಕ್ತದ ಅಗತ್ಯವಿದ್ದು, ರಕ್ತದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡುವ ಮೂಲಕ ಜಿಲ್ಲೆಯಲ್ಲಿ ಅಗತ್ಯ ಇರುವವರಿಗೆ ರಕ್ತದ ಕೊರತೆ ಉಂಟಾಗದAತೆ ಸಹಕರಿಸಬೇಕು ಎಂದು ಜಿಲ್ಲಾ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ಕೆ.ಸಿ. ಕರುಂಬಯ್ಯ ಹೇಳಿದ್ದಾರೆ.

ಮಡಿಕೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಯೂತ್ ರೆಡ್ ಕ್ರಾಸ್ ಘಟಕ, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಘ, ಮಡಿಕೇರಿಯ ಬೋಧಕ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಭಾರತೀಯ ರೆಡ್ ಕ್ರಾಸ್ ಕೊಡಗು ಘಟಕ ವತಿಯಿಂದ ಆಯೋಜಿಸಲಾಗಿದ್ದ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು.

ಡೆಂಗ್ಯೂ ಜ್ವರ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಕೆಂಪು ರಕ್ತಕಣಗಳ ಅಗತ್ಯತೆ ಹಿಂದೆAದಿಗಿAತ ಹೆಚ್ಚಾಗಿದೆ. ಅಂತೆಯೇ ಪ್ರಸವ ಸಂದರ್ಭದಲ್ಲಿಯೂ ಮಹಿಳೆಯರಿಗೆ ಹೆಚ್ಚಿನ ಪ್ರಮಾಣದಲ್ಲಿ ರಕ್ತದ ಬೇಡಿಕೆ ಕಂಡುಬರುತ್ತಿದೆ. ಪ್ರಸ್ತುತ ರಕ್ತನಿಧಿ ಕೇಂದ್ರದಲ್ಲಿ ೨೦೦ ಯೂನಿಟ್‌ಗಳಷ್ಟು ರಕ್ತ ಲಭ್ಯವಿದೆಯಾದರೂ ತುರ್ತು ಸಂದರ್ಭದಲ್ಲಿ ರೋಗಿಗಳಿಗೆ ನೀಡಲು ರಕ್ತದ ಸಂಗ್ರಹ ಮತ್ತಷ್ಟು ಪ್ರಮಾಣದಲ್ಲಿ ಅಗತ್ಯವಿದೆ ಎಂದು ಡಾ. ಕರುಂಬಯ್ಯ ಹೇಳಿದರು.

ವಾಹನ ಅಪಘಾತ ಪ್ರಮಾಣ ಕೂಡ ಹೆಚ್ಚಾಗುತ್ತಿರುವ ಈ ದಿನಗಳಲ್ಲಿ ಅಪಘಾತಕ್ಕೀಡಾದ ವ್ಯಕ್ತಿಗಳಿಗೂ ರಕ್ತದ ತೀವ್ರ ಅಗತ್ಯ ಕಂಡುಬರುತ್ತಿದೆ. ಈ ಎಲ್ಲಾ ಹಿನ್ನೆಲೆಯಲ್ಲಿ ದಾನಿಗಳು ಹೆಚ್ಚಿನ ಪ್ರಮಾಣದಲ್ಲಿ ರಕ್ತ ನೀಡಲು ಮುಂದಾಗುವAತೆ ಅವರು ಮನವಿ ಮಾಡಿದರು.

ರೆಡ್ ಕ್ರಾಸ್ ಕೊಡಗು ಘಟಕದ ಸಭಾಪತಿ ಬಿ.ಕೆ.ರವೀಂದ್ರ ರೈ ಮಾತನಾಡಿ, ಎಲ್ಲಾ ದಾನಕ್ಕಿಂತಲೂ ಅಮೂಲ್ಯವಾದ ರಕ್ತದಾನ ಮಾಡಲು ಮುಂದಾಗಿರುವ ಕಾಲೇಜು ವಿದ್ಯಾರ್ಥಿಗಳ ಚಿಂತನೆ ಶ್ಲಾಘನೀಯವಾಗಿದೆ. ಮಹಾದಾನ ದಂತಿರುವ ರಕ್ತದಾನವನ್ನು ಪ್ರತೀಯೋರ್ವರೂ ಮಾಡುವ ಮೂಲಕ ರಕ್ತ ಅಗತ್ಯ ಇರುವವರಿಗೆ ನೆರವಾಗಬೇಕು ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲ ವೆಂಕಟೇಶ ಪ್ರಸನ್ನ, ಯೂತ್ ರೆಡ್ ಕ್ರಾಸ್‌ನ ಕಾರ್ಯಕ್ರಮ ಅಧಿಕಾರಿ ಡಾ.ಎಂ.ಎA. ಪ್ರಕಾಶ್, ರೆಡ್ ಕ್ರಾಸ್ ಜಿಲ್ಲಾ ಉಪಾಧ್ಯಕ್ಷ ಅನಿಲ್ ಎಚ್.ಟಿ, ಪ್ರಧಾನ ಕಾರ್ಯದರ್ಶಿ ಎಚ್.ಆರ್. ಮುರಳೀಧರ್, ಯೂತ್ ರೆಡ್ ಕ್ರಾಸ್ ನಿರ್ದೇಶಕ ಎಂ.ಧನAಜಯ್, ರೆಡ್ ಕ್ರಾಸ್ ನಿರ್ದೇಶಕರಾದ ಕೌಸರ್, ರಂಜಿತ್ ಕವಲಪಾರ, ಅಶ್ರಫ್, ಶಿಲ್ಪ ರೈ ಮತ್ತಿತರರು ಹಾಜರಿದ್ದರು.