ಮಡಿಕೇರಿ, ನ. ೫: ನಗರದ ಲಯನ್ಸ್ ಕ್ಲಬ್ ವತಿಯಿಂದ ಸ್ಥಳೀಯ ಲಯನ್ಸ್ ಸಭಾಂಗಣದಲ್ಲಿ ತಾ.೮ರಂದು ಬೆಳಿಗ್ಗೆ ೧೦ ಗಂಟೆಗೆ ೧೧ರಿಂದ ೧೩ರ ವಯೋಮಿತಿಯ ಶಾಲಾ ವಿದ್ಯಾರ್ಥಿಗಳಿಗಾಗಿ ‘‘ಆಚಿಡಿe ಣo ಆಡಿeಚಿm’’ ಃಡಿiಟಿgiಟಿg Peಚಿಛಿe ಣo ಣhe Woಡಿಟಜ- ನನ್ನ ಕನಸಿನಲ್ಲಿ ವಿಶ್ವ ಶಾಂತಿಗಾಗಿ ಕೊಡುಗೆ ಎಂಬ ವಿಷಯದ ಬಗ್ಗೆ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಇದು ಅಂತರರಾಷ್ಟಿçÃಯ ಲಯನ್ಸ್ ಸಂಸ್ಥೆಯ ಸ್ಪರ್ಧೆಯಾಗಿದ್ದು, ಜಿಲ್ಲೆಯಿಂದ ಆಯ್ಕೆಯಾದ ಚಿತ್ರವನ್ನು ಲಯನ್ಸ್ನ ಅಂತರರಾಷ್ಟಿçÃಯ ಸ್ಪರ್ಧೆಗೆ ಕಳುಹಿಸಿಕೊಡಲಾಗುವುದು ಹಾಗೂ ಜಿಲ್ಲೆಯಿಂದ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಥಮ ಹಾಗೂ ದ್ವಿತೀಯ ಬಹುಮಾನ ನೀಡಲಾಗುವುದು.
ಆಸಕ್ತ ವಿದ್ಯಾರ್ಥಿಗಳು ತಮ್ಮ ವಯೋಮಿತಿಯ ಸ್ಪಷ್ಟೀಕರಣಕ್ಕಾಗಿ ಸಂಬAಧಿಸಿದ ಶಾಲೆಯಿಂದ ದೃಢೀಕರಣ ಪತ್ರವನ್ನು ತರಬೇಕಾಗಿದ್ದು, ಪ್ರತಿ ಶಾಲೆಯಿಂದ ಕೇವಲ ೨ ವಿದ್ಯಾರ್ಥಿಗಳಿಗೆ ಅವಕಾಶವಿದೆ. ಬೇಕಾದ ಸಲಕರಣೆಗಳನ್ನು ವಿದ್ಯಾರ್ಥಿಗಳು ತರಬೇಕಾಗಿದ್ದು, ಪೇಪರ್ನ್ನು ಸಂಸ್ಥೆಯಿAದ ನೀಡಲಾಗುವುದು ಹಾಗೂ ಹೆಚ್ಚಿನ ಮಾಹಿತಿಗಳಿಗಾಗಿ ಸಂಸ್ಥೆಯ ಅಧ್ಯಕ್ಷ ಮಧುಕರ್ ಶೇಟ್ ಅವರನ್ನು (ಮೊ.೯೪೪೯೨೬೭೧೫೪) ಅಥವಾ ಕಾರ್ಯದರ್ಶಿ ನಟರಾಜು ಕೆಸ್ತೂರ್ (ಮೊ.೭೦೧೯೨೫೨೧೭೮)ರವರನ್ನು ಸಂಪರ್ಕಿಸಬಹುದಾಗಿದೆ.