ಗೋಣಿಕೊಪ್ಪಲು, ನ. ೪: ಸಾಮಾಜಿಕ ಜಾಲತಾಣ ವನ್ನು ಬಳಸಿಕೊಂಡ ಯುವಕನೋರ್ವ ಮಹಿಳೆ ಯ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು, ವೈಯಕ್ತಿಕ ತೇಜೊವಧೆೆ ಮಾಡುತ್ತಿದ್ದ ಆರೋಪದಡಿಯಲ್ಲಿ ಪೋಲಿಸರು ಆರೋಪಿಯನ್ನು ಬಂಧಿಸಿದ್ದಾರೆ.
ನಾಪೋಕ್ಲು ಗ್ರಾಮದ ಅಬ್ದುಲ್ ಅಜೀಜ್ ಎಂಬವರ ಮಗ ನೌಷದ್ (೩೦) ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಮಾಡಿದ ತಪ್ಪನ್ನು ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ. ಆತನ ಬಳಿಯಿದ್ದ ಮೊಬೈಲ್ ಅನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಕಳೆದ ಆರು ತಿಂಗಳ ಹಿಂದೆ ಕೊಡಗಿನ ಅನ್ಯಕೋಮಿನ ಮಹಿಳೆಗೆ ಪರಿಚಯವಾದ ನೌಷದ್ ನಂತರ ಈಕೆಯ ಮೊಬೈಲ್ ನಂಬರ್ ಪಡೆದಿದ್ದಾನೆ.
ಪ್ರತಿನಿತ್ಯ ಮೊಬೈಲ್ ಮೆಸೇಜ್ ಮಾಡುತ್ತಿದ್ದ ಈತ ಆಕೆ ಬಳಿಯಿಂದ ಸಾಲವಾಗಿ ಹಣವನ್ನು ಪಡೆದಿದ್ದ ಎಂದು ದೂರುದಾರ ಮಹಿಳೆ ತನ್ನ ಪೊಲೀಸ್ ದೂರಿನಲ್ಲಿ ವಿವರಿಸಿದ್ದಾಳೆ.
ನಂತರ ಕೊಟ್ಟ ಹಣವನ್ನು ವಾಪಾಸು ಕೇಳುವ ಸಂದರ್ಭ ಮಹಿಳೆಯ ತೇಜೋವಧೆಗೆ ಮುಂದಾಗಿದ್ದಾನೆ.
ಫೆÉÃಸ್ಬುಕ್ನಲ್ಲಿ ನಕಲಿ ಅಕೌಂಟ್ ಮಾಡಿ ಅದರಲ್ಲಿ ತಾನು ಹಿಂದೂ ವ್ಯಕ್ತಿ ಎಂದು ಪರಿಚಯಿಸಿಕೊಂಡಿರುವುದು ಇದೀಗ ಪೊಲೀಸರ ತನಿಖೆಯಲ್ಲಿ ದೃಢಪಟ್ಟಿದೆ.
ಪರಿಚಯದ ಆಧಾರದಲ್ಲಿ ಸಾಲ ಪಡೆಯುವುದು, ನಂತರ ವಾಪಾಸು ನೀಡುತ್ತಲೇ ವಿಶ್ವಾಸಗಳಿಸುತ್ತಿದ್ದ ಈತ ನಂತರ ಪಡೆದ ಸಾಲವನ್ನು ಹಿಂದಕ್ಕೆ ನೀಡಲು ಸತಾಯಿಸುತ್ತಿದ್ದ ಎಂದು ದೂರಿನಲ್ಲಿ ಮಹಿಳೆ ಆರೋಪಿಸಿದ್ದಾರೆ.
ಹಣವನ್ನು ವಾಪಾಸು ಕೇಳುವ ಸಂದರ್ಭ ಅನವಶ್ಯಕವಾಗಿ ತೇಜೋವಧೆ ಮಾಡುವುದು ಮತ್ತು ಆಕೆಯ ಬಗ್ಗೆ ನಕಲಿ ಫೆÉÃಸ್ಬುಕ್ ಖಾತೆಯಲ್ಲಿ ಹಾಕುವ ಮೂಲಕ ಸಂಬAಧಿಕರಿಗೆ ಸ್ಕಿçÃನ್ ಶಾಟ್ ಕಳುಹಿಸುವುದು ನಿರಂತರವಾಗಿ ಮಾಡುತ್ತಿದ್ದ ಎಂದು ಮಹಿಳೆ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.
ಈಗಾಗಲೇ ಹಲವಾರು ನಕಲಿ ಫೇಸ್ಬುಕ್ ಖಾತೆ ತೆರೆದು ಅದರಲ್ಲಿ ತನ್ನ ಫೋಟೋವನ್ನು ಹಾಕಿಕೊಂಡು ಕೊಡವ ಕುಟುಂಬಗಳ ಹೆಸರನ್ನು ಬಳಸಿಕೊಂಡು ದುರುಪಯೋಗ ಮಾಡಿಕೊಂಡಿರುವುದು ಕಂಡುಬAದಿದೆ.
ಪೊಲೀಸ್ ಕಾರ್ಯಾಚರಣೆ ಯಲ್ಲಿ ಅಪರಾಧ ತಂಡದ ಎಸ್.ಐ. ಸುಬ್ರಮಣಿ, ಸಿಬ್ಬಂದಿಗಳಾದ ಮಹದೇಶ್ವರ ಸ್ವಾಮಿ ಹಾಗೂ ಮಂಜುನಾಥ್ ಇದ್ದರು.
ಆರೋಪಿ ನೌಷದ್ ಮೇಲೆ ಐಪಿಸಿ ಸೆಕ್ಷನ್ ೩೫೪(ಡಿ), ೫೦೯, ೫೦೬ ಅಡಿ ಪ್ರಕರಣ ದಾಖಲಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.