ಮಡಿಕೇರಿ, ನ. ೫: ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯ ತ್ತತೆ ಸೇರಿದಂತೆ ಸಂವಿಧಾನದತ್ತ ವಾದ ೯ ಬೇಡಿಕೆಗಳ ಕುರಿತು ಸರ್ಕಾರದ ಗಮನ ಸೆಳೆಯಲು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ನಡೆಸುತ್ತಿರುವ ಪಾದಯಾತ್ರೆಯ ೫ನೇ ಹಂತ ತಾ.೭ ರಿಂದ ಆರಂಭಗೊಳ್ಳಲಿದೆ.
ಜಿಲ್ಲೆಯ ವಿವಿಧೆಡೆ ಪಾದಯಾತ್ರೆ ನಡೆಸಿ ಮಂದ್‌ಗಳಲ್ಲಿ ಕೊಡವ ಜನಜಾಗೃತಿ ಸಭೆಗಳನ್ನು ನಡೆಸಲಾಗುವುದು. ತಾ.೧೦ ರಂದು ಬೆಳಿಗ್ಗೆ ಪಾಡಿನಾಡ್- ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಮಧ್ಯಾಹ್ನ ಕುಂಜಿಲ ಕಕ್ಕಬ್ಬೆ “ಕೆಂಜರಾಣೆ ಪಾಡಿನಾಡ್‌ಮಂದ್”ನಲ್ಲಿ ಜಾಗೃತಿ ಸಭೆಯ ಮೂಲಕ ಯಾತ್ರೆಯನ್ನು ಮುಕ್ತಾಯಗೊಳಿಸ ಲಾಗುವುದು ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ.
ಐದನೇ ಹಂತದಲ್ಲಿ ತಾ.೭ ರಂದು ಬೆಳಿಗ್ಗೆ ೧೦ ಗಂಟೆಗೆ ವೀರಾಜಪೇಟೆ ತಾಲೂಕಿನ ಬೆಪುö್ಪನಾಡ್' ನ ಅರಮೇರಿ ಮಂದ್, ಮಧ್ಯಾಹ್ನ ೨.೩೦ ಗಂಟೆಗೆ ಕಡಂಗ ಮುರೂರು ಮಂದ್, ತಾ.೮ ರಂದು ಬೆಳಿಗ್ಗೆ ೧೦ ಗಂಟೆಗೆ ಕಡಿಯತ್‌ನಾಡ್‌ನ ಕರಡದ "ಬೇಲಿಯಾಣೆ ಮಂದ್", ಮಧ್ಯಾಹ್ನ ೨.೩೦ ಗಂಟೆಗೆ ಬಲಂಬೇರಿ ಮಂದ್, ತಾ.೯ ರಂದು ಬೆಳಿಗ್ಗೆ ೧೦ ಗಂಟೆಗೆ ಮಡಿಕೇರಿ ತಾಲೂಕಿನ ನೂರಂಬಡನಾಡ್ ಮಂದ್, ಸಂಜೆ ೪.೩೦ ಗಂಟೆಗೆ ನೆಲಜಿನಾಡ್ ಮಂದ್‌ನಲ್ಲಿ ಪಾದಯಾತ್ರೆ ಮತ್ತು ಜಾಗೃತಿ ಸಭೆ ನಡೆಯಲಿದ್ದು, ತಾ.೧೦ ರಂದು ಬೆಳಿಗ್ಗೆ ೯ ಗಂಟೆಗೆ ಪಾಡಿನಾಡ್- ಪಾಡಿ ಇಗ್ಗುತ್ತಪ್ಪ ದೇವ ಸನ್ನಿಧಿ ತಲುಪಿ, ಯಾತ್ರೆಯು ಮಧ್ಯಾಹ್ನ ೧೨ ಗಂಟೆಗೆ "ಕೆಂಜರಾಣೆ ಪಾಡಿನಾಡ್‌ಮಂದ್'ನಲ್ಲಿ (ಕುಂಜಿಲ- ಕಕ್ಕಬ್ಬೆ) (ಮಡಿಕೇರಿ ತಾಲೂಕು) ಸಮಾರೋಪಗೊಳ್ಳ ಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.