ಗೋಣಿಕೊಪ್ಪಲು, ಅ. ೪: ಜಿಲ್ಲೆ ಯಿಂದ ಭಾರಿ ಗಾತ್ರದ ಆನೆದಂತವನ್ನು ಸಾಗಾಟ ಮಾಡಿ ಮಾರಾಟ ಮಾಡಲು ಯತ್ನಿಸಿದ ಜಿಲ್ಲೆಯ ಮೂವರು ಸೇರಿದಂತೆ ಒಟ್ಟು ಆರು ಮಂದಿಯನ್ನು ಕೇರಳ ರಾಜ್ಯದ ಅರಣ್ಯ ಇಲಾಖೆ ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಗೋಣಿಕೊಪ್ಪದ ಮೈಸೂರಮ್ಮ ನಗರ ನಿವಾಸಿ, ರ‍್ವತೋಕ್ಲು ಗ್ರಾ.ಪಂ. ಮಾಜಿ ಸದಸ್ಯ ಪಿಲಿಪೋಸ್ ಮ್ಯಾಥ್ಯು, ಗೋಣಿಕೊಪ್ಪದ ವ್ಯಾಪಾರಿ, ಪಾಲಿಬೆಟ್ಟ ನಿವಾಸಿ ಬಿ.ವಿ. ರಾಜಾ (ಬಂಟ ರಾಜ), ಟಿ.ಶೆಟ್ಟಿಗೇರಿಯ ಉಳುವಂಗಡ ಗಪ್ಪು ಎಂಬವರು ಸೇರಿದಂತೆ ಕೇರಳದ ವಯನಾಡು ಭಾಗದವರಾದ ಕೆ.ಡಿ. ಎಲ್ದೊ, ಪಿ.ಎ. ಸುಬೀಷ್, ಜತೀನ್ ಜೋಸ್ ಅವರುಗಳು ಇದೀಗ ಕೇರಳ ರಾಜ್ಯದ ಪೊಲೀಸರ ವಶದಲ್ಲಿದ್ದಾರೆ.
ತಿರುವನಂತಪುರA ಫಾರೆಸ್ಟ್ ಇಂಟೆಲಿಜೆನ್ಸ್, ವೈಲ್ಡ್ ಲೈಫ್ ಕಂಟ್ರೋಲ್ ಬ್ಯೂರೋ, ಕಲ್ಪೆಟ್ಟ ಫ್ಲೆöÊಯಿಂಗ್ ಸ್ಕಾ÷್ವಡ್, ಬೇಗೂರು ಅರಣ್ಯ ವಲಯ ಸಿಬ್ಬಂದಿಗಳ ಜಂಟಿ ಕಾರ್ಯಾಚರಣೆಯಲ್ಲಿ ಆರೋಪಿ ಗಳನ್ನು ಬಂಧಿಸಿ ಅವರಿಂದ ಐದೂವರೆ ಕೆಜಿ ತೂಕದ ಆನೆದಂತ, ಕೃತ್ಯಕ್ಕೆ ಬಳಸಿದ ಸ್ವಿಫ್ಟ್ ಕಾರ್ (ಕೆ.ಎಲ್-೫೪ ಜಿ-೩೮೭೮) ಅನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಾಥಮಿಕ ತನಿಖೆಯಲ್ಲಿ ಜಿಲ್ಲೆಯಿಂದ ಆನೆದಂತವನ್ನು ಸಾಗಾಟ ಮಾಡಿ ಕೇರಳದಲ್ಲಿ ಮಾರಾಟ ಮಾಡಲು ಆರೋಪಿಗಳು ಯೋಜನೆ ರೂಪಿಸಿದ್ದರು ಎಂದು ತಿಳಿದುಬಂದಿದೆ.
ಮಾನಂದವಾಡಿಯ ಲಾಡ್ಜ್ ವೊಂದರಲ್ಲಿ ಆರೋಪಿಗಳು ತಂಗಿದ್ದ ಸಂದರ್ಭ ಪಕ್ಕದ ಸರ್ವಿಸ್ ಸ್ಟೇಷನ್‌ನಲ್ಲಿ ನಿಲುಗಡೆಗೊಂಡಿದ್ದ ಕಾರನ್ನು ಫ್ಲೆöÊಯಿಂಗ್ ಸ್ಕಾ÷್ವಡ್ ಅಧಿಕಾರಿಗಳು ಪರಿಶೀಲಿಸಿದ ವೇಳೆ ಆನೆದಂತ ಪತ್ತೆಯಾಗಿದೆ.
ತಕ್ಷಣ ಆರೋಪಿಗಳ ಪತ್ತೆಗೆ ಬಲೆಬೀಸಿದ ಅಧಿಕಾರಿಗಳು ಪಕ್ಕದಲ್ಲಿಯೇ ಲಾಡ್ಜ್ನಲ್ಲಿ ಆರೋಪಿಗಳು ಇರುವ ಕುರಿತು ಮಾಹಿತಿ ಸಂಗ್ರಹಿಸಿ ದಾಳಿ ನಡೆಸಿ ಬಂಧಿಸಿ ವನ್ಯಜೀವಿ ಕಾಯ್ದೆ ಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.
ಗೋಣಿಕೊಪ್ಪದಲ್ಲಿ ಪರಿಶೀಲನೆ
ಘಟನೆ ನಡೆದ ತಕ್ಷಣ ಕೇರಳ ರಾಜ್ಯದಿಂದ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಆರೋಪಿ ಗಳಿಗೆ ಸೇರಿದ ಮನೆ, ಅಂಗಡಿ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ, ಗೋಣಿಕೊಪ್ಪ ಪೊಲೀಸರಿಂದ ಆರೋಪಿಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡು ತೆರಳಿದ್ದಾರೆ. ಪ್ರಕರಣ ಸಂಬAಧ ತನಿಖೆ ಮುಂದುವರೆದಿದೆ.
- ಹೆಚ್.ಕೆ. ಜಗದೀಶ್