ಕಠ್ಮಂಡು, ನ. ೪: ನೇಪಾಳದ ಪಶ್ಚಿಮ ಭಾಗದಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ೧೫೦ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ ಎಂದು ಅಲ್ಲಿನ ಪೊಲೀಸರು ಮಾಹಿತಿ ನೀಡಿದ್ದಾರೆ.
ಶುಕ್ರವಾರ ತಡರಾತ್ರಿ ಸುಮಾರು ೧೧:೩೭ಕ್ಕೆ ರಿಕ್ಟರ್ ಮಾಪಕದಲ್ಲಿ ೬.೪ ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪದ ಕೇಂದ್ರಬಿAದು ೧೦ ಕಿ.ಮೀ ಆಳದಲ್ಲಿದೆ ಎಂದು ಭೂಕಂಪನದ ರಾಷ್ಟಿçÃಯ ಕೇಂದ್ರ ಪ್ರಕಟ ಮಾಡಿದೆ. ಘಟನೆಯಲ್ಲಿ ನೂರಾರು ಮಂದಿ ಗಾಯ ಗೊಂಡಿದ್ದಾರೆ. ಭೂಕಂಪದ ಪರಿಣಾಮ ಸುಮಾರು ೧೫೯ ಕಡೆಗಳಲ್ಲಿ ‘ಆಫ್ಟರ್‌ಶಾಕ್ಸ್’ - ಭೂಕಂಪನದ ಅನುಭವ ಕೂಡ ಆಗಿದೆ. ಭಾರತದ ರಾಜಧಾನಿ ದೆಹಲಿ, ಎನ್‌ಸಿಆರ್, ಉತ್ತರ ಪ್ರದೇಶ ಹಾಗೂ ಬಿಹಾರ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ವರದಿಯಾಗಿದೆ. ನೇಪಾಳದ ಪೊಲೀಸರು ಸೇರಿದಂತೆ ಸೇನಾಪಡೆಯು ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿದೆ.
ತಿಂಗಳ ಅವಧಿಯಲ್ಲಿ
೨ ಭೂಕಂಪನ..!
ಸೂಕ್ಷö್ಮ ಹಿಮಾಲಯ ಪರ್ವತ ಶ್ರೇಣಿಯ ಕಣಿವೆಯಲ್ಲಿನ
ನೇಪಾಳ ರಾಷ್ಟçದಲ್ಲಿ ಕಳೆದ ತಿಂಗಳಷ್ಟೆ
(ಮೊದಲ ಪುಟದಿಂದ) ಅಕ್ಟೋಬರ್ ೨ ರಂದು ೬.೨ ತೀವ್ರತೆಯ ಭೂಕಂಪ ಸಂಭವಿಸಿತ್ತು. ಅದರಿಂದಾದ ನಷ್ಟ-ನೋವು ಮಾಸುವ ಮುನ್ನವೇ ಮತ್ತೆ ಭೂಕಂಪನ ಸಂಭವಿಸಿದ್ದು ಅಲ್ಲಿನ ನಿವಾಸಿಗಳಲ್ಲಿ ಭಯ ಹುಟ್ಟಿಸಿದೆ.
ಭೂಕಂಪನದಿAದ ಉಂಟಾದ ಜೀವಹಾನಿಯ ಬಗ್ಗೆ ನೇಪಾಳದ ಪ್ರಧಾನಿ ಪುಷ್ಪ ಕಮಲ್ ದಹಲ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆ ಹಾಗೂ ತುರ್ತು ಪರಿಹಾರಕ್ಕಾಗಿ ಭದ್ರತಾ ಪಡೆಗಳಿಗೆ ಸೂಚನೆ ನೀಡಿದ್ದಾರೆ ಎಂದು ಪ್ರಧಾನಿಗಳ ಕಚೇರಿ ಮಾಹಿತಿ ನೀಡಿದೆ.