ಮಡಿಕೇರಿ, ನ. ೫: ಕರ್ನಾಟಕ ಬಾಲವಿಕಾಸ ಅಕಾಡೆಮಿಯಿಂದ ೨೦೨೨-೨೩ನೇ ಸಾಲಿನಲ್ಲಿ ರಾಜ್ಯ, ರಾಷ್ಟç ಮತ್ತು ಅಂರ‍್ರಾಷ್ಟç ಮಟ್ಟದಲ್ಲಿ ವಿಶೇಷ ಸಾಧನೆಗೈದ ೧೮ ವರ್ಷದ ಒಳಗಿನ ಮಕ್ಕಳಿಂದ ‘ಬಾಲಗೌರವ ಪ್ರಶಸ್ತಿಗೆ’ ಅರ್ಜಿ ಆಹ್ವಾನಿಸಲಾಗಿದೆ.

ಮಕ್ಕಳ ಕ್ರೀಡೆ, ಸಂಗೀತ, ನೃತ್ಯ, ಬಹುಮುಖ ಪ್ರತಿಭೆ, ಚಿತ್ರಕಲೆ ಹಾಗೂ ವಿಜ್ಞಾನ ಮತ್ತು ಸಂಶೋಧನೆಯಲ್ಲಿ ಹೀಗೆ ೬ ಕ್ಷೇತ್ರಗಳಲ್ಲಿ ಅಸಾಧಾರಣಾ ಸಾಧನೆಯನ್ನು ಮಾಡಿ ಪ್ರಶಸ್ತಿ ಪಡೆದ ಪುರಸ್ಕೃತ ಮಗುವಾಗಿರಬೇಕು. ಇಂತಹ ಮಕ್ಕಳು ಅಕಾಡೆಮಿ ಬಾಲಗೌರವ ಪ್ರಶಸ್ತಿಗಾಗಿ ತಮ್ಮ ಸ್ವಯಂ ದೃಢೀಕೃತ ನಕಲು ದಾಖಲೆಗಳೊಂದಿಗೆ ಹಾಗೂ ಸ್ವವಿವರ ಒಳಗೊಂಡ ಮನವಿಯೊಂದಿಗೆ ಅರ್ಜಿಯನ್ನು ತಾ. ೧೮ ರೊಳಗೆ ಅಕಾಡೆಮಿಯ ಕೇಂದ್ರ ಕಚೇರಿ ವಿಳಾಸ ಯೋಜನಾಧಿಕಾರಿಗಳು, ಚಂದ್ರಿಕಾ ಬಡಾವಣೆ ಹಿಂಭಾಗ ಕೆಹೆಚ್‌ಬಿ ಕಾಲೋನಿ, ಲಕಮನಹಳ್ಳಿ ಧಾರವಾಡ-೫೮೦೦೦೪, ದೂರವಾಣಿ ಸಂಖ್ಯೆ ೦೮೩೬-೨೪೬೧೬೬೬ಕ್ಕೆ ಪೋಸ್ಟ್ ಮುಖಾಂತರ ತಲುಪುವಂತೆ ಕಳುಹಿಸುವುದು. ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಹಾಗೆಯೇ ಈಗಾಗಲೇ ಬಾಲಗೌರವ ಪ್ರಶಸ್ತಿ ಪಡೆದವರ ಅರ್ಜಿಗಳನ್ನು ಪ್ರಶಸ್ತಿಗೆ ಪರಿಗಣಿಸಲಾಗುವುದಿಲ್ಲ. ಈ ಪ್ರಶಸ್ತಿಯ ಅರ್ಜಿ ನಮೂನೆ-ಮಾನದಂಡಗಳನ್ನು ಕಚೇರಿಯ ವೆಬ್‌ಸೈಟ್ ಲಿಂಕ್ hಣಣಠಿs://bಚಿಟಚಿviಞಚಿsಚಿಚಿಛಿಚಿಜemಥಿ.ಞಚಿಡಿಟಿಚಿಣಚಿಞಚಿ.giv.iಟಿ/ನಲ್ಲಿ ವೀಕ್ಷಿಸಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.